ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆ ವ್ಯಕ್ತಿ ಬ್ಯಾಂಕ್ ಖಾತೆಗೆ 7 ಲಕ್ಷ ರೂ. ತಪ್ಪು ವರ್ಗಾವಣೆ ಮಾಡಿ ಮಹಿಳೆ ಎಡವಟ್ಟು

|
Google Oneindia Kannada News

ಮುಂಬಯಿ, ಜು. 07: ಮಹಿಳೆಯೊಬ್ಬಳು ತನ್ನ ಸಂಬಂಧಿಯ ಬ್ಯಾಂಕ್ ಖಾತೆಗೆ ಏಳು ಲಕ್ಷ ರೂ. ಹಣ ವರ್ಗಾಯಿಸಬೇಕಿತ್ತು. ಅನ್‌ಲೈನ್ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆ ಸಂಖ್ಯೆ ತಪ್ಪು ಉಲ್ಲೇಖಿಸಿ ಎಡವಟ್ಟು ಮಾಡಿದ್ದಳು. ಏಳು ಲಕ್ಷ ರೂ. ಹಣ ಬೇರೆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು! ಆಕಸ್ಮಿಕ ನಿಮ್ಮ ಬ್ಯಾಂಕ್ ಖಾತೆಗೆ ಬಂದಿರುವ ಹಣ ವಾಪಸು ಕೊಡಿ ಅಂತ ಮಹಿಳೆ ಕೇಳಿದ್ರೆ, 'ಅಯ್ಯೋ ಹೋಗಮ್ಮ, ಅದು ನನಗೆ ಲಾಟರಿಯಿಂದ ಬಂದ ಹಣ. ನಾನು ವಾಪಸು ಕೊಡಲ್ಲ' ಎಂದು ನಿರಾಕರಿಸಿರುವ ಘಟನೆ ಮುಂಬಯಿನಲ್ಲಿ ನಡೆದಿದೆ. ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಾಗ ಎಡವಟ್ಟು ಮಾಡಿದ ಮಹಿಳೆ ಪ್ರಕರಣ ಮುಂಬಯಿನಲ್ಲಿ ವೈರಲ್ ಆಗಿದೆ.

ಮುಂಬಯಿ ನಿವಾಸಿ ಮಹಿಳೆಗೆ 38 ವರ್ಷ. ತನ್ನ ಸಂಬಂಧಿಕರಿಗೆ ಹಣ ನೀಡಲು ಏಳು ಲಕ್ಷ ರೂ. ಹೊಂದಿಸಿದ್ದಳು. ಪರಿಚಿತರ ಬ್ಯಾಂಕ್ ಖಾತೆಗೆ ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡುವಾಗ ತಪ್ಪು ಬ್ಯಾಂಕ್ ಖಾತೆ ಉಲ್ಲೇಖಿಸಿ ಹಣ ವರ್ಗಾವಣೆ ಮಾಡಿದ್ದಾಳೆ. ಹಣ ಬೇರೆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆ ಆಗಿದೆ.

ಜೂ. 29 ರಂದು ಈ ಘಟನೆ ನಡೆದಿದೆ. ಈ ಬಗ್ಗೆ ಬ್ಯಾಂಕ್ ಗೆ ಹೋಗಿ ಆ ಮಹಿಳೆ ವಿಚಾರಿಸಿದ್ದಾಳೆ. ನೀವು ಬ್ಯಾಂಕ್ ಖಾತೆ ಸಂಖ್ಯೆ ತಪ್ಪು ನಮೂದಿಸಿದ್ದೀರಿ. ನಾವು ಏನೂ ಮಾಡೋಕೆ ಅಗಲ್ಲ ಎಂದು ಬ್ಯಾಂಕ್ ನವರು ಕೈ ಎತ್ತಿದ್ದಾರೆ. ಏಳು ಲಕ್ಷ ರೂ. ಹಣ ವರ್ಗಾವಣೆ ವಿವರ ನೋಡಿದರೆ, ಮುಂಬಯಿನ ನಿವಾಸಿಯ ವಿವರ ನೀಡಿದ್ದಾರೆ. ನೀವು ಯಾರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದೀರೋ ಅವರನ್ನೇ ಹೋಗಿ ಕೇಳಿ ವಾಪಸು ಪಡೆದುಕೊಳ್ಳಿ ಎಂದು ಬ್ಯಾಂಕ್ ನವರು ಹೇಳಿ ಕೈತೊಳೆದುಕೊಂಡಿದ್ದಾರೆ.

Mumbai women transfers RS 7 lakh to wrong account; beneficiary refused to return money

ತಪ್ಪು ಬ್ಯಾಂಕ್ ಕಾತೆ ಉಲ್ಲೇಖಿಸಿ ಮಹಿಳೆ ಎಡವಟ್ಟು ಮಾಡಿದ್ದರಿಂದ ಹಣ ವಾಪಸು ಕೊಡಿಸಲು ಬ್ಯಾಂಕ್ ನವರು ಪ್ರಯತ್ನ ಮಾಡಿಲ್ಲ. ಬ್ಯಾಂಕ್ ಸಿಬ್ಬಂದಿ ಯಾವ ನೆರವಿಗೂ ಬಂದಿಲ್ಲ. ಆ ಬಳಿಕ ಮಹಿಳೆ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

ಪೊಲೀಸರು ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು, ಹಣ ವರ್ಗಾವಣೆಯಾಗಿದ್ದ ವ್ಯಕ್ತಿಯ ಮೊಬೈಲ್ ನಂಬರ್ ಪಡೆದು ಕರೆ ಮಾಡಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗೆ ಆಕಸ್ಮಿಕ ಏಳು ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ಅದನ್ನು ವಾಪಸು ಕೊಡಿ ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ಕೊಟ್ಟಿರುವ ಉತ್ತರವೇ ಬೇರೆ. ನಾನು ಲಾಟರಿ ಟಿಕಟ್ ಖರೀದಿ ಮಾಡಿದ್ದೆ. ನನಗೆ ಲಾಟರಿಯಿಂದ ಬಂದ ಹಣ, ನಾನು ಯಾಕೆ ವಾಪಸು ಕೊಡಬೇಕು ಎಂದು ಯಾಮಾರಿಸಿದ್ದಾನೆ.

Mumbai women transfers RS 7 lakh to wrong account; beneficiary refused to return money

ನೀನು ಈಗ ಹಣ ವಾಪಸು ಕೊಟ್ಟಿಲ್ಲ ಎಂದರೆ ನಿನ್ನ ಮೇಲೆ ಕೇಸು ಅಗುತ್ತೆ. ಕಥೆ ಬೇರೆಯದ್ದೇ ಆಗುತ್ತೆ ಅಂತ ಹೆದರಿಸಿದ ಕೂಡಲೇ ಆಕಸ್ಮಿಕವಾಗಿ ಬಂದಿದ್ದ ಹಣವನ್ನು ವಾಪಸು ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಜು. 02 ರಂದು ಹಣವನ್ನು ಸಂತ್ರಸ್ತ ಮಹಿಳೆ ಖಾತೆಗೆ ವರ್ಗಾವಣೆ ಮಾಡಿದ್ದಾನೆ. ಆ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

Recommended Video

ಮಹಾರಾಷ್ಟ್ರ ಬಿಜೆಪಿಯಲ್ಲಿ ಅಚ್ಚರಿ ಬೆಳವಣಿಗೆ: ದೇವೇಂದ್ರ ಫಡ್ನಬಿಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ | Oneindia Kannada

English summary
A Mumbai women accidentally transferred RS 7 lakh to A wrong account and the unintended beneficiary refused to return the money, says that he had won a lottery know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X