ಬಾಲಕಿಯ ಹತ್ಯೆ; ಶವದ ಜತೆ ಸಂಭೋಗ

ಆರೋಪಿ ರಾಹುಲ್ ತುಂಬ್ಡಾನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜನವರಿ 17ರಂದು ಬಾಲಕಿ ಕಾಣೆಯಾಗಿದ್ದಳು. ಒಂದು ದಿನದ ನಂತರ ಆಕೆಯ ಶವ ಪತ್ತೆಯಾಗಿತ್ತು. ವಳೀವ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಆರೋಪಿ ರಾಹುಲ್, ಬೈಕ್ ನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ಅವಳನ್ನು ಪುಸಲಾಯಿಸಿದೆ.
ಬಳಿಕ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದೆ. ಅಲ್ಲಿ ಅವಳನ್ನು ಹತ್ಯೆ ಮಾಡಿ, ಶವದ ಜತೆ ಸಂಭೋಗ ಮಾಡಿದೆ (necrophilia) ಎಂದು ಆರೋಪಿ ರಾಹುಲ್ ತಿಳಿಸಿದ್ದಾನೆ. ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಆರೋಪಿ ರಾಹುಲ್ ವಸೈನಲ್ಲಿ ವಾಸಿಸುತ್ತಿದ್ದಾನೆ. ಆರೋಪಿ ರಾಹುಲನನ್ನು ಬಂಧಿಸಿ, ತನಿಖೆಗೊಳಪಡಿಸಿದಾಗ ಅವನ ಮೊಬೈಲಿನಲ್ಲಿ ಅನೇಕ ಅಶ್ಲೀಲ ವಿಡಿಯೋಗಳು ಕಂಡುಬಂದವು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ನಂತರ ಬಾಲಕಿ ಅವನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಅವಳ ದೇಹದ ಮೇಲೆ ಗಾಯದ ಗುರುತುಗಳಾಗಿವೆ. ಅವಳು ಉಸಿರುಗಟ್ಟಿ ಸತ್ತು ಹೋಗಿದ್ದಾಳೆ ಎಂಬುದು ಗೊತ್ತಾದರೂ ಆರೋಪಿ ರಾಹುಲ್ ತನ್ನ ಮೃಗ ತೃಷೆ ತೀರಿಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಂದ್ರ ಮೋಹಿತೆ ಹೇಳಿದ್ದಾರೆ. ಶವಪರೀಕ್ಷೆಯಿಂದ ಆಕೆಯ ಮೇಲೆ ಸಂಭೊಗ ನಡೆದಿರುವುದು ದೃಢಪಟ್ಟಿದೆ.
ಸ್ಥಳ ಪರಿಶೀಲನೆ ನಡೆಸುವಾಗ ಪೊಲೀಸ್ ನಾಯಿಯು ಸೀದಾ ಆರೋಪಿ ರಾಹುಲನ ಬಳಿಗೆ ತೆರಳಿತ್ತು. ಅವನ ಮೇಲೆ ಗಾಯದ ಗುರುತುಗಳು ಸಹ ಕಂಡುಬಂದಿದ್ದವು. ಅವನನ್ನು ವಿಚಾರಿಸಲಾಗಿ ಸಮಂಜಸ ಉತ್ತರ ನೀಡದಿದ್ದಾಗ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಹಿ ಘಟನೆ ಬಹಿರಂಗಗೊಂಡಿದೆ.












Click it and Unblock the Notifications