ಮುಂಬೈ: ಆಸ್ಪತ್ರೆಗೆ ನುಗ್ಗಿದ ನೀರು; ರೋಗಿಗಳ ಪರದಾಟ

ಮುಂಬೈ, ಆಗಸ್ಟ್ 29: ಕಳೆದೊಂದು ದಿನದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮುಂಬೈನಲ್ಲಿ ಭಾರೀ ಪ್ರಮಾಣದ ಹಾನಿ ಉಂಟು ಮಾಡಿದ್ದು, ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಮಂಗಳವಾರ (ಆಗಸ್ಟ್ 29) ಬೆಳಗ್ಗೆ 8:30ರಿಂದ ಮಧ್ಯಾಹ್ನ 2:30ರ ಹೊತ್ತಿಗೆ ಸುಮಾರು 100 ಮಿ.ಮೀ. ಮಳೆ ಬಿದ್ದಿದೆ. ಮೊದಲೇ ಜಲಾವೃತವಾಗಿ ಜನರು ಪರದಾಡುವಂತೆ ಆಗಿದ್ದ ಪರಿಸ್ಥಿತಿ ಇದೀಗ ಅಗಾಧ ಪ್ರಮಾಣದಲ್ಲಿ ಉಲ್ಬಣಗೊಂಡಿದ್ದು, ನಗರದೆಲ್ಲೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜನರನ್ನು ಭಯಭೀತರನ್ನಾಗಿಸಿದೆ.

Mumbai receives 100 mm rain on Tuesday,

ಏತನ್ಮಧ್ಯೆ, ಮುಂಬೈನ ಪರೇಲ್ ಪ್ರಾಂತ್ಯದಲ್ಲಿರುವ ಕೆಇಎಂ ಆಸ್ಪತ್ರೆಯೊಳಕ್ಕೆ ನೀರು ನುಗ್ಗಿದ್ದು ಅಲ್ಲಿನ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವಂತೆ ಮಾಡಿದೆ.

Mumbai receives 100 mm rain on Tuesday,

ಹಾಗಾಗಿ ಹೆಚ್ಚು ನೀರು ನುಗ್ಗಿರುವ ನೆಲ ಅಂತಸ್ತಿನ ವಾರ್ಡ್ ಗಳಿದ್ದ ರೋಗಿಗಳನ್ನು ಮೇಲಂಸ್ತುಗಳಿಗೆ ಸ್ಥಳಾಂತರಿಸುವ ಕಾರ್ಯ ಸಾಗಿದೆ. ಆದರೆ, ಆ ಅಂತಸ್ತುಗಳಲ್ಲಿ ಸ್ಥಳದ ಅಭಾವ ತಲೆದೋರಿದ್ದು ರೋಗಿಗಳಿಗೆ ಸೂಕ್ತ ಜಾಗ ಕಲ್ಪಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಗರದ ವಿ.ಪಿ. ರಸ್ತೆಯಲ್ಲಿ ಎತ್ತರದ, ಕಬ್ಬಿಣದ ರಾಡ್ ಗಳಿಂದ ನಿರ್ಮಿಸಲಾಗಿದ್ದ ದೊಡ್ಡ ಜಾಹೀರಾತು ಫಲಕವೊಂದು ಮುರಿದುಬಿದ್ದ ಹಿನ್ನೆಲೆಯಲ್ಲಿ ಅದರ ಕೆಳಗೆ ನಿಂತಿದ್ದ ಮೂವರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಸೈಫೀ ಆಸ್ಪತ್ರೆಗೆ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+