ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸುಶಾಂತ್ ಅಪ್ಪ ಕೆಕೆ ಸಿಂಗ್ ಕಿಡಿ

|
Google Oneindia Kannada News

ಮುಂಬೈ, ಆ.4: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಮೇಲ್ನೋಟಕ್ಕೆ ತನಿಖೆ ಕೈಗೊಂಡರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಬಾಂದ್ರಾ ಪೊಲೀಸರ ವಿರುದ್ಧ ಸುಶಾಂತ್ ಸಿಂಗ್ ಅವರ ತಂದೆ ಆರೋಪಿಸಿದ್ದಾರೆ. ಇದಲ್ಲದೆ, ಫೆಬ್ರವರಿ ತಿಂಗಳಿನಲ್ಲಿ ಸುಶಾಂತ್ ಗೆ ಜೀವ ಬೆದರಿಕೆ ಬಗ್ಗೆ ಸೂಚಿಸಲಾಗಿತ್ತು. ಜೂನ್ ತಿಂಗಳಿನಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.

Recommended Video

ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ | Oneindia Kannada

ಸುಶಾಂತ್ ಸಾವಿಗೂ ಮುನ್ನ ಏನೇನು ಹುಡುಕಾಡಿದ್ದರು ಎಂಬ ಗೌಪ್ಯ ಮಾಹಿತಿಯನ್ನು ಮುಂಬೈ ಪೊಲೀಸರು ಸೋಮವಾರದಂದು ಬಹಿರಂಗಪಡಿಸಿದ್ದಾರೆ. ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ, ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಅಪ್ಡೇಟ್ ನೀಡಿದ್ದಾರೆ.

ಸುಶಾಂತ್ ಗೆಳತಿ ರಿಯಾ ವಿರುದ್ಧ ಎಫ್ಐಆರ್ ದಾಖಲುಸುಶಾಂತ್ ಗೆಳತಿ ರಿಯಾ ವಿರುದ್ಧ ಎಫ್ಐಆರ್ ದಾಖಲು

ಸಾಯುವುದಕ್ಕೂ ಎರಡು ಗಂಟೆಗಳಿಗೂ ಮುನ್ನ ಗೂಗಲ್ ನಲ್ಲಿ ಏನೇನು ಸರ್ಚ್ ಮಾಡಿದ್ದರು ಎಂಬ ವಿಷಯವನ್ನು ಇದೀಗ ಬಹಿರಂಗ ಪಡಿಸುವ ಪ್ರಮೇಯವಾದರೂ ಏನಿತ್ತು? ಎಂಬ ಪ್ರಶ್ನೆಯೂ ಎದ್ದಿದೆ. ಬಿಹಾರದ ತನಿಖಾಧಿಕಾರಿ ಕ್ವಾರಂಟೈನ್, ಇಷ್ಟು ದಿನ ಇರದ ಮಾಹಿತಿ ಇದೀಗ ಸಾರ್ವಜನಿಕರಿಗೆ ನೀಡುತ್ತಿರುವುದು, ಸಿಬಿಐ ತನಿಖೆ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಪಟ್ಟು ಹಿಡಿದಿರುವುದು ಎಲ್ಲವೂ ಸುಶಾಂತ್ ಸಿಂಗ್ ಕುಟುಂಬಸ್ಥರು, ಅಭಿಮಾನಿಗಳಿಗೆ ಅನುಮಾನ ಹುಟ್ಟಿಸಿದೆ.

ದಿಶಾ ಸಾಲಿಯಾನ್ ಸಾವು ಕೂಡಾ ಸುಶಾಂತರನ್ನು ಕಾಡಿತ್ತು

ದಿಶಾ ಸಾಲಿಯಾನ್ ಸಾವು ಕೂಡಾ ಸುಶಾಂತರನ್ನು ಕಾಡಿತ್ತು

ತನ್ನ ಮಾಜಿ ಆಪ್ತ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಸುಶಾಂತರನ್ನು ಕಾಡಿತ್ತು. ಹೀಗಾಗಿ, ನೋವುರಹಿತ ಸಾವು, ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಸುಶಾಂತ್ ಅವರು ಮಾನಸಿಕ ಖಿನ್ನತೆಗಾಗಿ ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಮುಂಬೈ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಕೆಕೆ ಸಿಂಗ್ ವಿಡಿಯೋದಲ್ಲಿ ಏನಿದೆ?

ಜೂನ್ 14ರಂದು ಮೊದಲಿಗೆ ಕೇಸ್ ದಾಖಲಿಸಿ, ಬಾಂದ್ರಾ ಪೋಲಿಸರಿಗೆ ಲಿಖಿತ ದೂರು ದಾಖಲಿಸಲು ತಿಳಿಸಲಾಯಿತು. ಫೆಬ್ರವರಿ 25ಕ್ಕೆ ಮೌಖಿಕ, ಸಂದೇಶದ ಮೂಲಕ ದೂರು ನೀಡಿದ್ದರೂ ನಿರ್ಲಕ್ಷಿಸಿದ್ದರು. ಆದರೆ, ಲಿಖಿತ ದೂರು ಹಾಗಿರಲಿ, ಯಾವುದೇ ದೂರನ್ನು ಸ್ವೀಕರಿಸಿಲ್ಲ. ನನ್ನ ಮಗನ ಜೀವ ಅಪಾಯದಲ್ಲಿದೆ ಎಂದು ಹೇಳಿದರೂ ಕ್ರಮ ಕೈಗೊಳ್ಳಲಿಲ್ಲ. ಜೂನ್ 14ರಂದು ನಾನು ನೀಡಿದ ದೂರಿನಲ್ಲಿ ದಾಖಲಿಸಿದ ಶಂಕಿತ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಕೋರಿದ್ದೆ. ಆದರೆ, 40 ದಿನವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಚಾರಣೆ ಮಾಡುತ್ತಿರುವುದು ಬರೀ ನಾಟಕ, ಹೀಗಾಗಿ, ನಾನು ಪಾಟ್ನಾದಲ್ಲಿ ಎಫ್ಐಆರ್ ದಾಖಲಿಸಿದೆ ಎಂದಿದ್ದಾರೆ.

ಸುಶಾಂತ್ ಸಿಂಗ್ ಕೇಸ್: ಗೆಳತಿ ರಿಯಾ ಚಕ್ರವರ್ತಿಗೆ ಬಂಧನದ ಭೀತಿ!ಸುಶಾಂತ್ ಸಿಂಗ್ ಕೇಸ್: ಗೆಳತಿ ರಿಯಾ ಚಕ್ರವರ್ತಿಗೆ ಬಂಧನದ ಭೀತಿ!

ಬಿಹಾರ ತನಿಖಾಧಿಕಾರಿ ಕ್ವಾರಂಟೈನ್

ಬಿಹಾರ ತನಿಖಾಧಿಕಾರಿ ಕ್ವಾರಂಟೈನ್ ವಿಷಯದಲ್ಲಿ ಯಾವುದೇ ಲೋಪವಾಗಿಲ್ಲ, ಐಸಿಎಂಆರ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಂತೆ ನಡೆದುಕೊಂಡಿದ್ದೇವೆ. ಯಾರನ್ನು ಬಲವಂತವಾಗಿ ಕ್ವಾರಂಟೈನ್ ನಲ್ಲಿ ಇರಿಸಿಲ್ಲ, ಹೋಟೆಲ್ ಅಥವಾ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಅವರು ಬಿಹಾರದ ತನಿಖಾಧಿಕಾರಿ ವಿನಯ್ ತಿವಾರಿ ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಿಬಿಐ ತನಿಖೆಗೆ ವಹಿಸುವುದು ಸೂಕ್ತ

ಈ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವುದು ಸೂಕ್ತ, ಸುಶಾಂತ್ ಸಿಂಗ್ ಅವರ ತಂದೆ ಈ ಬಗ್ಗೆ ನಿರ್ಧರಿಸಬೇಕಿದೆ, ನಾನು ಸಿಬಿಐ ತನಿಖೆ ಪರ ಇದ್ದೀನಿ ಎಂದು ಸುಶಾಂತ್ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ.

ಸುಶಾಂತ್ ಕೇಸ್: ತನಿಖೆಗಾಗಿ ಮುಂಬೈಗೆ ಬಂದ ಬಿಹಾರ ಪೊಲೀಸ್‌ಗೆ ಕ್ವಾರಂಟೈನ್!ಸುಶಾಂತ್ ಕೇಸ್: ತನಿಖೆಗಾಗಿ ಮುಂಬೈಗೆ ಬಂದ ಬಿಹಾರ ಪೊಲೀಸ್‌ಗೆ ಕ್ವಾರಂಟೈನ್!

English summary
In a startling claim, Sushant Singh Rajput's father said on Monday that Mumbai police was warned about threat to the actors life way back in February but it failed to take note of it and also did not act upon complaints against named persons a day after his death in June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X