• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ

|

ಮುಂಬೈ, ಅಕ್ಟೋಬರ್ 14:ಮುಂಬೈ ಪೊಲೀಸ್ ಹಾಗೂ ರಿಪಬ್ಲಿಕ್ ವಾಹಿನಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವಿನ ಶೀತಲ ಸಮರ ಇನ್ನಷ್ಟು ತಾರಕಕ್ಕೇರಿದೆ.

ಅರ್ನಬ್ ವಿರುದ್ಧ ಮುಂಬೈ ಪೊಲೀಸಲು ಇನ್ನೆರೆಡು ಎಫ್‌ಐಆರ್ ದಾಖಲಿಸಿದ್ದಾರೆ.

ಇವರೆಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ 16ಕ್ಕೆ ಖುದ್ದು ವಿಚಾರಣೆಗೆ ಹಾಜರಾಗಿ ಎಂದು ಮುಂಬೈ ಪೊಲೀಸ್ ಸಹಾಯಕ ಆಯುಕ್ತ ಸುದೀಪ್ ಜಂಬಾವ್ಡೇಕರ್ ಸಮನ್ಸ್ ಜಾರಿ ಮಾಡಿದ್ದಾರೆ.

ನಕಲಿ ಟಿಆರ್‌ಪಿ: ರಿಪಬ್ಲಿಕ್‌ ಟಿವಿ ಸಿಎಫ್ಒಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ

ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆ ಹಾಗೂ ಬಾಂದ್ರಾ ವಲಸೆ ಕಾರ್ಮಿಕ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಉದ್ದೇಶಪೂರ್ವಕವಾಗಿ ಕೋಮುವಾದದ ಬಣ್ಣ ನೀಡಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಈ ಎರಡೂ ಘಟನೆಗೆ ಸಂಬಂಧಿಸಿದಂತೆ ಎನ್ಎಂ ಜೋಶಿ ಪೊಲೀಸ್ ಠಾಣೆ ಹಾಗೂ ಪೈದೋನಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಅರ್ನಬ್‌ ಗೋಸ್ವಾಮಿ ನೀಡಿರುವ ನೋಟಿಸ್‌ನಲ್ಲಿ ಮುಂಬೈ ಪೊಲೀಸರು ಕೆಲವು ವಿವರಣೆಗಳನ್ನು ನೀಡಿದ್ದು, ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮಗಳು ಕೋಮು ಪ್ರಚೋದನಕಾರಿಯಾಗಿತ್ತು.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗೆ ಬಂದಿರುವ ಕಾಮೆಂಟ್‌ಗಳಿಂದ ಕೂಡ ವಾಹಿನಿ ಕೋಮು ಪ್ರಚೋದನೆ ಮಾಡಿರುವುದು ಖಾತ್ರಿಯಾಗುತ್ತದೆ. ಈ ಮೂಲಕ ವಾಹಿನಿಯು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದೆ ಹೀಗಾಗಿ ವಾಹಿನಿ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಸಮನ್ಸ್ ನಲ್ಲಿ ಉಲ್ಲೇಖಿಸಲಾಗಿದೆ.

ನೋಟಿಸ್‌ನ ಅನ್ವಯ ಪೊಲೀಸ್ ಅಧಿಕಾರಿಗೆ ದೂರು ಸುಳ್ಳು ಎಂಬುದನ್ನು ಸಾಬೀತುಪಡಿಸಬೇಕು ಹಾಗೂ ಅಗತ್ಯ ವಿವರಣೆಯನ್ನು ನೀಡಬೇಕು, ಇದನ್ನು ಸಾಬೀತುಪಡಿಸಲು ಅರ್ನಬ್ ಗೋಸ್ವಾಮಿ ವಿಫಲರಾದರೆ ಮುಂದಿನ ಒಂದು ವರ್ಷಗಳ ಕಾಲ ಇಂತಹ ಯಾವುದೇ ಕಾರ್ಯಕ್ರಮವನ್ನು ಮಾಡುವುದಿಲ್ಲ ಎಂದು ಬಾಂಡ್‌ನಲ್ಲಿ ಬರೆದುಕೊಡಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ 10 ಲಕ್ಷರೂ ದಂಡ ತೆರಬೇಕಾಗುತ್ತೆ. ಜತೆಗೆ ಇನ್ನೋರ್ವ ವ್ಯಕ್ತಿ ಅರ್ನಬ್ ಹೇಳಿಕೆ ಸಮರ್ಥಿಸಿ ಭದ್ರತಾ ಬಾಂಡ್‌ಗೆ ಸಹಿ ಹಾಕಬೇಕಾಗುತ್ತದೆ.

ಈಗಾಗಲೇ ನಕಲಿ ಟಿಆರ್‌ಪಿ ಹಗಣದ ಕುರಿತು ರಿಪಬ್ಲಿಕ್ ಟಿವಿ ವಿಚಾರಣೆ ನಡೆಯುತ್ತಿದ್ದು, ಈ ಕುರಿತು ಅರ್ನಬ್ ಗೋಸ್ವಾಮಿಯವರನ್ನು ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

English summary
The Mumbai Police has sent a show cause notice to Republic Television editor-in-chief Arnab Goswami asking him why a chapter proceeding under Section 108 of the Criminal Procedure Code should not be initiated against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X