ಮಾಜಿ ಪ್ರಿಯಕರನ ಮೇಲೆ ಆಸಿಡ್ ದಾಳಿ ನಡೆಸಿದ ಮುಂಬೈನ ಯುವತಿ
ಮುಂಬೈ, ಜೂನ್ 10: ತನ್ನ ಮಾಜಿ ಪ್ರಿಯಕರನ ಮೇಲೆ ಆಸಿಡ್ ದಾಳಿ ನಡೆಸಿದ ಯುವತಿಯೊಬ್ಬರನ್ನು ಜೂನ್ 9 ರಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಓಂ ಸಿಂಗ್ ಸೋಲಂಕಿ(26) ಮತ್ತು ಮೀರಾ ಶರ್ಮಾ(25) ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ವೈಮನಸ್ಯದಿಂದಾಗಿ ಇಬ್ಬರ ನಡುವೆ ಇತ್ತೀಚೆಗೆ ಸಂಬಂಧ ಮುರಿದುಬಿದ್ದಿತ್ತು.

ಇದರಿಂದ ಅತಿಯಾಗಿ ಬೇಸರಗೊಂಡಿದ್ದ ಮೀರಾ ಶರ್ಮಾ, ಓಂ ಸಿಂಗ್ ಮೇಲೆ ಆಸಿಡ್ ದಾಳಿ ನಡೆಸಿದ್ದು, ಸದ್ಯಕ್ಕೆ ಓಂ ಸಿಂಗ್ ರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಓಂ ಸಿಂಗ್ ಅವರಿಗೆ ಮುಖ ಮತ್ತು ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀರಾ ಶರ್ಮಾ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications