ಮುಂಬೈ ರೂಪದರ್ಶಿ ಕೊಲೆ: ಇಬ್ಬರು ಆರೋಪಿಗಳು ಪೊಲೀಸ್ ಬಲೆಗೆ
ಮುಂಬೈ, ಜುಲೈ 10: ಶಂಕಾಸ್ಪದವಾಗಿ ಮುಂಬೈಯ ಅಂಧೇರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಮೃತರಾದ ರೂಪದರ್ಶಿ ಕೃತಿಕಾ ಚೌಧರಿ(27) ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಕೊಲೆ ರಹಸ್ಯದ ಬಗ್ಗೆ ಇನ್ನೂ ಸರಿಯಾದ ಮಾಹಿತಿ ದೊರಕಿಲ್ಲ್.
ಕಳೆದ ಜುನ್ 12 ರಂದು ಮುಂಬೈಯ ಅಂಧೇರಿಯ ಬಂಗಲೆಯೊಂದರಲ್ಲಿ ಕೃತಿಕಾ ಚೌಧರಿ ಅವರ ಮೃತದೇಹ ಕೊಳೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ಪತ್ತೆಯಾದ ನಾಲ್ಕು ದಿನ ಮೊದಲೇ ನಟಿಯ ಹತ್ಯೆ ನಡೆದಿರಬಹುದೆಂದು ಊಹಿಸಲಾಗಿತ್ತು.

ರೂಪದರ್ಶಿಯ ಮನೆಗೆ ಹೊರಗಡೆಯಿಂದ ಬೀಗ ಹಾಕಿದ್ದಿದ್ದು ಮತ್ತು ಯಾವುದೇ ಡೆತ್ ನೋಟ್ ಸಿಗದಿದ್ದರಿಂದ ಇದು ಪೂರ್ವಯೋಜಿತ ಕೊಲೆಯೇ ಎಂಬ ಅನುಮಾನ ಪೊಲೀಸರಲ್ಲಿ ಹುಟ್ಟಿತ್ತು. ಆದ್ದರಿಂದಲೇ ಭಾರತೀಯ ದಂಡ ಸಂಹಿತ 302 ರ ಅನ್ವಯ ಕೊಲೆ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಸಂಶಯದ ಜಾಡು ಹಿಡಿದು ಹೊರಟ ಪೊಲೀಸರ ಬಲೆಯಲ್ಲಿ ಇಬ್ಬರು ಆರೋಪಿಗಳು ಬಿದ್ದಿದ್ದು., ಅವರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications