ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಲ್ಲಿ ಮುಂಬೈ ಕರ್ನಾಟಕ ಭವನದ ಉದ್ಘಾಟನೆ

|
Google Oneindia Kannada News

ಮುಂಬೈ, ಜೂ. 15 : ನವ ದೆಹಲಿಯ ಮಾದರಿಯಲ್ಲಿ ಮುಂಬೈನಲ್ಲಿ ಕರ್ನಾಟಕ ಭವನ ನಿರ್ಮಾಣಗೊಂಡಿದೆ. 22 ಕೋಟಿ ವೆಚ್ಚದಲ್ಲಿ, ನಿರ್ಮಾಣವಾದ ಐದು ಅಂತಸ್ತಿನ ಕಟ್ಟಡದ ಅಂತಿಮ ಕಾಮಗಾರಿಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಕರ್ನಾಟಕ ಭವನ ಉದ್ಘಾಟನೆಯಾಗಲಿದೆ.

ಮಹಾರಾಷ್ಟ್ರ ಸರ್ಕಾರ ನವೀ ಮುಂಬೈನಲ್ಲಿ ನೀಡಿದ 27,000 ಚದರ ಅಡಿ ಜಾಗದಲ್ಲಿ ಕರ್ನಾಟಕ ಭವನ ತಲೆ ಎತ್ತಿದೆ. ಮುಂಬೈಗೆ ಭೇಟಿ ನೀಡುವ ಸಚಿವರು, ಅಧಿಕಾರಿಗಳು ವಾಸ್ತವ್ಯ ಹೂಡಲು ಅನುಕೂಲವಾಗುವಂತೆ 24 ಕೊಠಡಿಗಳನ್ನು ನಿರ್ಮಿಸಲಾಗಿದೆ. [ಗಂಡುಮೆಟ್ಟಿನ ನಾಡಿನ ಹೈದ ಬೆಂದ ಊರು..! ಕಂಡಿದ್ದು ಹೀಗೆ]

karnataka

ಮಹಾರಾಷ್ಟ್ರ ಕರ್ನಾಟಕದ ಲೋಕೋಪಯೋಗಿ ಇಲಾಖೆಗೆ ನೀಡಿದ್ದ ಜಾಗವನ್ನು ಎಂಎಸ್‌ಐಎಲ್‌ಗೆ ಹಸ್ತಾಂತರ ಮಾಡಲಾಗಿದೆ. ಎಂಎಸ್‌ಐಎಲ್ ಕರ್ನಾಟಕ ಭವನದ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದು, ಭವನದಲ್ಲಿ ಮಳಿಗೆಯನ್ನು ತೆರೆಯಲಿದೆ. [ಕನ್ನಡ ವಿಜ್ಞಾನ - ತಂತ್ರಜ್ಞಾನ ಸಮ್ಮೇಳನದಲ್ಲಿ ಏನಿತ್ತು?]

22 ಕೋಟಿ ವೆಚ್ಚದ ಭವನದಲ್ಲಿ ನಿರ್ಮಾಣವಾದ ಭವನದಲ್ಲಿ 24 ಕೊಠಡಿ, 8 ವಿಶೇಷ ಕೊಠಡಿ, ರೆಸ್ಟೋರೆಂಟ್, ಕಾನ್ಫರೆನ್ಸ್ ಹಾಲ್, ಜಿಮ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಆಗಸ್ಟ್‌ನಲ್ಲಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.

ಮುಂಬೈ ಕರ್ನಾಟಕ ಭವನ ದೆಹಲಿಯ ಕರ್ನಾಟಕ ಭವನಕ್ಕಿಂತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಶಾಸಕರ ವಾಸ್ತವ್ಯಕ್ಕಾಗಿ 20 ಕೊಠಡಿಗಳನ್ನು ಮೀಸಲಾಗಿಡಲಾಗುತ್ತದೆ.

'ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್, ಒಳಚರಂಡಿ ಸಂಪರ್ಕ, ಟೈಲ್ಸ್ ಆಳವಡಿಕೆ ಸೇರಿದಂತೆ ಇತರ ಕಾಮಗಾರಿಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಲಿದೆ' ಎಂದು ಎಂಎಸ್ಐಎಲ್ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಹೇಳಿದ್ದಾರೆ.

English summary
The Karnataka Bhavan is built at a cost of Rs 22 core on a 27,000 sq ft plot at Navi Mumbai. Bhavan will be ready for inauguration in August 2015. The land is allotted by benevolent Maharashtra Government to the Kannada speaking communities in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X