ಮುಂಬೈ ತುಳು ಕನ್ನಡಿಗರ ಮಮತೆಯ 'ಅಮ್ಮ' ಇನ್ನಿಲ್ಲ

Posted By:
Subscribe to Oneindia Kannada

ಮುಂಬೈ, ಜನವರಿ 02 : ತುಳು ಕನ್ನಡಿಗರ ಅಮ್ಮ ಎಂದೇ ಹೆಸರುವಾಸಿಯಾಗಿರುವ ಸಮಾಜ ಸೇವಕಿ, ಕಲಾರಾಧಕಿ, ಬಹುಮುಖ ಪ್ರತಿಭೆ ರತ್ನ ಗುರುರಾಜ ಆಚಾರ್ಯ (87) ಅವರು ಮುಂಬೈನಲ್ಲಿರುವ ಸ್ವನಿವಾಸದಲ್ಲಿ ಭಾನುವಾರ ನಿಧನರಾದರು.

ಬಿ.ಎಸ್.ಕೆ.ಬಿ ಅಸೋಸಿಯೇಶನ್, ಗೋಕುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಮಾಜಿ ಅಧ್ಯಕ್ಷ ಯು.ಗುರುರಾಜ ಆಚಾರ್ಯ (ದಿವಂಗತರು) ಅವರ ಧರ್ಮಪತ್ನಿ, ಗೋಕುಲ ರತ್ನ' ಪ್ರಶಸ್ತಿ ವಿಜೇತೆ, ಮಧ್ವೇಶ ಭಜನ ಮಂಡಳಿಯ ಅಧ್ಯಕ್ಷೆ, ರತ್ನ ಗುರುರಾಜ್ ಆಚಾರ್ಯ (87) ಅವರು ಭಾನುವಾರ (ಜ.1) ರಾತ್ರಿ ಅಂಧೇರಿ ಪಶ್ಚಿಮದ ಶಾಂತಿ ನಿಕೇತನ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿಯ ಶ್ರೀ ಸನ್ನಿಧಿ ಸ್ವನಿವಾಸದಲ್ಲಿ ನಿಧನರಾದರು.

ಮೂಲತಃ ಕಟಪಾಡಿ ಅಚ್ಚಡ ಗ್ರಾಮಸ್ಥ ಯು.ಗುರುರಾಜ ಆಚಾರ್ಯ ಅವರ ಪತ್ನಿ ಆಗಿದ್ದ ರತ್ನ ಆಚಾರ್ಯರು ಪಡುಬಿದ್ರಿ ಸಾಂತೂರು ನಿವಾಸಿ ಆಗಿದ್ದು, ಮುಂಬಯಿ ಮಹಾನಗರದ ಜನತೆಗೆಲ್ಲಾ ಅಕ್ಕರೆಯ ರತ್ನಕ್ಕ' ಎಂದೇ ಜನಜನಿತರಾಗಿದ್ದರು. [ಕನ್ನಡ-ಮರಾಠಿ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್ ಇನ್ನಿಲ್ಲ]

Mumbai Kannadati Rathna Gururaj Acharya is no more

ಸದಾ ಹಸನ್ಮುಖಿಯಾಗಿ ಲವಲವಿಕೆಯಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರತ್ನಕ್ಕಯವರನ್ನು, ಬಿಎಸ್‌ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 2016ರಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂಜೀವಿನಿ ಟ್ರಸ್ಟ್ ವಾರ್ಷಿಕವಾಗಿ ಕೊಡ ಮಾಡುವ ಗೋಕುಲ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮೃತರು ಲಕ್ಷ್ಮೀಶ್ ಆಚಾರ್ಯ (ಸಂಜೀವಿನಿ ಟ್ರಸ್ಟ್‌ನ ವಿಶ್ವಸ್ಥ ಸದಸ್ಯ) ಮತ್ತು ಜಗದೀಶ್ ಆಚಾರ್ಯ ಎಂಬಿಬ್ಬರು ಗಂಡು ಮಕ್ಕಳು, ಉಷಾ ಚಡಗ ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ (ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ನಿರ್ದೇಶಕಿ) ಎಂಬಿಬ್ಬರು ಹೆಣ್ಣುಮಕ್ಕಳು, ಅಳಿಯಂದಿರಾದ ರಾಮಕೃಷ್ಣ ಚಡಗ, ಕೃಷ್ಣಮೂರ್ತಿ ಐತಾಳ್, ಡಾ| ಸುರೇಶ್ ಎಸ್.ರಾವ್ ಕಟೀಲು (ಅಂಧೇರಿ ಪೂರ್ವದ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ) ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ. [ಮುಂಬೈ ಖಾಲ್ಸಾ ಕಾಲೇಜಿನ ನೆನಪುಗಳು-1]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Kannadati Rathna Gururaj Acharya (87), who was fondly called as 'Amma' by Tulunada Kannadigaru is no more. The social activist, Gokula Rathna awardee Rathna Acharya was ill for some time. She expired at her residence in Mumbai.
Please Wait while comments are loading...