ಮುಂಬೈನಲ್ಲಿ ಸೇತುವೆ ಕುಸಿತ : ಕೊಚ್ಚಿ ಹೋದ ಬಸ್ಸು, ಕಾರು

Posted By:
Subscribe to Oneindia Kannada

ಮುಂಬೈ, ಆಗಸ್ಟ್ 02 : ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಭಾರೀ ಮಳೆಗೆ ಕುಸಿದುಬಿದ್ದಿದೆ. ಎರಡು ಬಸ್ ಮತ್ತು 2 ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದ್ದು, ಹುಡುಕಾಟ ನಡೆಯುತ್ತಿದೆ.

ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಸೇತುವೆ ಕುಸಿದುಬಿದ್ದಿದೆ. ಸೇತುವೆಯ ಶೇ 80ರಷ್ಟು ಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.

rain

ಸೇತುವೆ ಮೇಲಿದ್ದ ರಾಜಾಪುರ-ಬೋರಿವೇಲಿ, ಜಯಗಡ-ಮುಂಬೈ ಮಾರ್ಗದ ಎರಡು ಎಂಎಸ್‌ಆರ್‌ಟಿಸಿ ಬಸ್ಸುಗಳು ಮತ್ತು 2 ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಶಂಕಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A bridge on the Mumbai-Goa highway collapsed. According to initial reports, two cars and two MSRTC buses are reportedly missing.
Please Wait while comments are loading...