ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯನ್ಸ್ ಡ್ರಗ್ಸ್‌ ಕೇಸ್: ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದ ಕೋರ್ಟ್

|
Google Oneindia Kannada News

ಮುಂಬೈ, ನವೆಂಬರ್ 01: ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದು ಮುಂಬೈ ವಿಶೇಷ ನ್ಯಾಯಾಲಯ ತಿಳಿಸಿದೆ.

ಆಚಿತ್ ಕುಮಾರ್ ಅವರು ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಅವರಿಗೆ ಡ್ರಗ್ಸ್‌ ಪೂರೈಕೆ ಮಾಡಿದ್ದಾರೆ ಎಂಬುದನ್ನು ಕೇವಲ ವಾಟ್ಸಾಪ್ ಮಾತುಕತೆಗಳ ಆಧಾರದಲ್ಲಿ ಹೇಳಲು ಆಗುವುದಿಲ್ಲ ಎಂದು ಇಲ್ಲಿನ ವಿಶೇಷ ಹೇಳಿದೆ.

 ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್? ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್?

ಪ್ರಕರಣದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ದಾಖಲೆಗಳ ಸತ್ಯಾಸತ್ಯತೆಯ ಬಗ್ಗೆ ನ್ಯಾಯಾಲಯಪ್ರಶ್ನಿಸಿದ್ದು ದಾಖಲೆಗಳನ್ನು ಸೃಷ್ಟಿಸಲಾಗಿದ್ದು, ಅವು ಅನುಮಾನಾಸ್ಪದವೆಂದು ತೋರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

Mumbai cruise drugs case: WhatsApp Chats Not Proof Enough Says Court

ನ್ಯಾಯಾಲಯ ತನ್ನ ವಿಸ್ತೃತ ಆದೇಶದಲ್ಲಿ ಈ ಹೇಳಿಕೆ ನೀಡಿದ್ದು, ಇದರ ನಕಲು ಪ್ರತಿ ಭಾನುವಾರ ಲಭ್ಯವಾಗಿದೆ. ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣದಲ್ಲಿ ಕೇವಲ ವಾಟ್ಸಾಪ್ ಮಾತುಕತೆಗಳು ಮಾತ್ರ ಪ್ರಮುಖ ಆರೋಪಿಗಳಾದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಅವರಿಗೆ ಆರೋಪಿ ಆಚಿತ್ ಕುಮಾರ್ ಡ್ರಗ್ಸ್‌ ಪೂರೈಕೆ ಮಾಡಿದ್ದ ಎಂಬುದಕ್ಕೆ ಸಾಕ್ಷಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಆರೋಪಿಗಳಿಗೆ ಅಥವಾ ಇತರರಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಅವರು ಜಾಮೀನಿಗೆ ಅರ್ಹವಾಗಿದ್ದಾರೆ ಎಂದು ಹೇಳಿದೆ.

ಆರ್ಯನ್ ಖಾನ್ ಮತ್ತು ಕುಮಾರ್ ನಡುವೆ ಪಿತೂರಿ ನಡೆದಿದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ. ಆರ್ಯನ್ ಖಾನ್‌ಗೆ ಜಾಮೀನು ನೀಡಿದರೆ, ಸಮಾನತೆ ಆಧಾರದಲ್ಲಿ ಆಚಿತ್ ಕುಮಾರ್ ಅವರನ್ನು ಬಿಡುಗಡೆ ಮಾಡಬಹುದು ಎಂದೂ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸಮುದ್ರದಲ್ಲಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಡ್ರಗ್ಸ್ ಪತ್ತೆಯಾಗಿ ಎನ್ ಸಿಬಿ ಅಧಿಕಾರಿಗಳಿಂದ ಕಳೆದ ಅಕ್ಟೋಬರ್ 2ರಂದು ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಜೈಲುವಾಸದಿಂದ ಮುಕ್ತಿ ಸಿಕ್ಕಿದೆ.

ಇಂದು ಮುಂಬೈಯ ಅರ್ಥೂರ್ ರೋಡ್ ಜೈಲಿನಿಂದ ಆರ್ಯನ್ ಖಾನ್ ನನ್ನು ಅಧಿಕಾರಿಗಳು ಬಿಡುಗಡೆ ಪತ್ರಗಳನ್ನು ಪಡೆಯುವ ಮೂಲಕ ಕೆಲವು ಕ್ರಮಗಳನ್ನು ಅನುಸರಿಸಿ ಬಿಡುಗಡೆ ಮಾಡಿದ್ದಾರೆ. ಇಂದು ನಸುಕಿನ ಜಾವ 5.30ರ ಸುಮಾರಿಗೆ ಜೈಲಿನ ಅಧಿಕಾರಿಗಳು ಜೈಲಿನ ಹೊರಗೆ ಜಾಮೀನು ಪಡೆಯುವ ಪತ್ರಗಳನ್ನು ಹಾಕಿದ ಬಾಕ್ಸ್ ಗಳನ್ನು ತೆರೆದು ಕೆಲವು ಹೊತ್ತಿನಲ್ಲಿ ಬಿಡುಗಡೆಯ ವಿಧಾನಗಳನ್ನು ಪಾಲಿಸಿದರು.

ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳಿಂದ ಬಂಧನಕ್ಕೊಳಗಾದ ನಂತರ ಅಕ್ಟೋಬರ್ 8ರಂದು ಆರ್ಯನ್ ಖಾನ್ ನನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ತಕ್ಷಣ ಹೊರಗೆ ತಮಗಾಗಿ ಕಾಯುತ್ತಿದ್ದ ಕಾರಿಗೆ ಹತ್ತಿ ಮುಂಬೈ ಉಪ ನಗರ ಬಂದ್ರಾದಲ್ಲಿರುವ ಮನ್ನತ್ ಗೆ ತೆರಳಿದರು. ಶಾರೂಕ್ ಖಾನ್ ನಿವಾಸ ಮನ್ನತ್ ನ ಹೊರಗೆ ಅಭಿಮಾನಿಗಳು ಜಮಾಯಿಸಿ ಆರ್ಯನ್ ಖಾನ್ ನನ್ನು ಸ್ವಾಗತಿಸಿದರು.

ಆರ್ಯನ್ ಖಾನ್ ಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ. ಐದು ಪುಟಗಳ ಆದೇಶದಲ್ಲಿ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್ ಮತ್ತು ಇತರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚ ಅವರನ್ನು 1 ಲಕ್ಷ ರೂಪಾಯಿ ವೈಯಕ್ತಿಕ ಶ್ಯೂರಿಟಿಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಹೈಕೋರ್ಟ್ ನಿಗದಿಪಡಿಸಿದ ಷರತ್ತುಗಳ ಪ್ರಕಾರ, ಮೂವರು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮತ್ತು ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆಯದೆ ಭಾರತವನ್ನು ತೊರೆಯಬಾರದು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು ಎಂಬ ನಿಯಮವನ್ನು ಹೇರಲಾಗಿದೆ.

ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ ದಾಳಿಯ ವೇಳೆ ಬಂಧಿಸಲ್ಪಟ್ಟ ದಿನಗಳ ನಂತರ ಆರ್ಯನ್ ಖಾನ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು.

English summary
A special court here while granting bail to Aachit Kumar last week in the drugs-on-cruise case said merely on the basis of WhatsApp chats, it cannot be gathered that he had supplied drugs to co-accused Aryan Khan, the son of Bollywood superstar Shah Rukh Khan, and Arbaaz Merchant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X