ವಂಚನೆ ಪ್ರಕರಣ: IL&FS ಮಾಜಿ ಅಧಿಕಾರಿಗಳನ್ನು ವಶಕ್ಕೆ ಪಡೆದ ED
ಮುಂಬೈ, ಜೂನ್ 20: ವಂಚನೆ ಮತ್ತು ಹಣಕಾಸು ಅವ್ಯವಹಾರದ ಆರೋಪದ ಎದುರಿಸುತ್ತಿರುವ IL&FS ನ ಇಬ್ಬರು ಮಾಜಿ ಉನ್ನತಾಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
IL&FS ಫೈನಾನ್ಶಿಯಲ್ ಸರ್ವಿಸ್ ನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಶಾ ಮತ್ತು IL&FS ಟ್ರಾನ್ಸ್ಪೋರ್ಟೇಶನ್ ನೆಟ್ ವರ್ಕ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಆರ್ ರಾಮಚಂದ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ IL&FS ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಸಾಲ ಮರುಪಾವತಿಗೆ ವಿಫಲವಾಗಿತ್ತು. ರ್ಥಿಕ ಅಪರಾಧ ದಳ (ಎಕನಾಮಿಕ್ ಅಫೆನ್ಸಸ್ ವಿಂಗ್) ಕಳೆದ ವರ್ಷ ಡಿಸೆಂಬರ್ ನಲ್ಲಿ ದೆಹಲಿ ಪೊಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿತ್ತು.12.6 ಬಿಲಿಯನ್ ಯುಎಸ್ ಡಾಲರ್ ಸಾಲವನ್ನು IL&FS ಕಂಪನಿ ಹೊಂದಿದೆ.












Click it and Unblock the Notifications