• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಆಡಳಿತ ಸರ್ವಾಧಿಕಾರಿಯಂತೆ ಇದೆ : ಮಲ್ಲಿಕಾರ್ಜುನ ಖರ್ಗೆ

|

ಮುಂಬೈ, ನವೆಂಬರ್ 05 : 'ಹಿಟ್ಲರ್ ಜರ್ಮನಿಯಲ್ಲಿ ಏನು ಮಾಡಿದರೂ ಅದೇ ರೀತಿ ಭಾರತವನ್ನು ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಕಾಂಗ್ರೆಸ್‌ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಮುಂಬೈ ಕಾಂಗ್ರೆಸ್ ಬಾಂದ್ರಾದಲ್ಲಿ ಭಾನುವಾರ 'ಸಂವಿಧಾನ ಬಚಾವೋ ಪರಿಷದ್' ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಿಂದ ಸಿಬಿಐ ದುರ್ಬಳಕೆ: ಮಲ್ಲಿಕಾರ್ಜುನ ಖರ್ಗೆ ಆರೋಪ

'ಬಿಜೆಪಿ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ಆರ್‌ಎಸ್‌ಎಸ್, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನವನ್ನು ನಾಶ ಮಾಡಲು ಬಿಡುವುದಿಲ್ಲ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಿಬಿಐ ವಿವಾದ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಾನೂನು ಸಮರ!

'ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಾತನಾಡುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನಾಶ ಮಾಡಿದೆ. ದೇಶದಲ್ಲಿ ಸರ್ವಾಧಿಕಾರದ ಆಡಳಿತ ತರಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ: ಸಂಶೋಧಕ ಡೇವಿಡ್ ಫ್ರಾಲಿ

ಸಂವಿಧಾನ ಎಲ್ಲರಿಗೂ ಸೇರಿದ್ದು

ಸಂವಿಧಾನ ಎಲ್ಲರಿಗೂ ಸೇರಿದ್ದು

'ಭಾರತದ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನ ಒಂದು ಜಾತಿ, ಸಮುದಾಯದ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಎಲ್ಲರಿಗೂ ಇದು ಸಮಾನ ಹಕ್ಕುಗಳನ್ನು ನೀಡಿದೆ. ಸ್ವತಂತ್ರವಾಗಿ ಬದುಕುವ ಯಾವ ಹಕ್ಕನ್ನು ಬಿಜೆಪಿ ಆಡಳಿತ ಜನರಿಗೆ ನೀಡಿದೆ?' ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಕಾಂಗ್ರೆಸ್ ಕೇಳುವ ನೈತಿಕತೆ ಇಲ್ಲ

ಕಾಂಗ್ರೆಸ್ ಕೇಳುವ ನೈತಿಕತೆ ಇಲ್ಲ

'ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರಿಯಾದ ದಿಕ್ಕಿನಲ್ಲಿ 4 ಹೆಜ್ಜೆ ಇಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನತ್ತ ಬೆರಳು ತೋರಿಸಿ 70 ವರ್ಷದಲ್ಲಿ ಏನು ಮಾಡಿದ್ದೀರಿ?' ಎಂದು ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ' ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಸರ್ವಾಧಿಕಾರಿ ಆಡಳಿತ

ಸರ್ವಾಧಿಕಾರಿ ಆಡಳಿತ

'ಬಿಜೆಪಿ ದೇಶದಲ್ಲಿ ಸರ್ವಾಧಿಕಾರದ ಆಡಳಿತ ತರಲು ಪ್ರಯತ್ನ ನಡೆಸಿದೆ. ಹಿಟ್ಲರ್ ಜರ್ಮನಿಯನ್ನು ಮಾಡಿದಂತೆ ಭಾರತವನ್ನು ಮಾಡಲು ಪ್ರಧಾನಿ ಮೋದಿ ಬಯಸಿದ್ದಾರೆ. ದೇಶದ ಸಂವಿಧಾನ ಅಪಾಯದಲ್ಲಿದೆ ಕಾಂಗ್ರೆಸ್ ಸಂವಿಧಾನ ಉಳಿಸಲು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಸಂವಿಧಾನ ದೇಶದ ಜೀವಾಳ

ಸಂವಿಧಾನ ದೇಶದ ಜೀವಾಳ

'ಸಂವಿಧಾನ ದೇಶದ ಜೀವಾಳ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಇದನ್ನು ಹಾಳು ಮಾಡುವ ಕೆಲಸ ಮಾಡಿದೆ. ಹಲವು ಹೊಸ ಕಾನೂನನ್ನು ತನ್ನ ಇಚ್ಛೆಯಂತೆ ಜಾರಿಗೆ ತಂದಿದೆ. ದೇಶದ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದೆ' ಎಂದು ಖರ್ಗೆ ಆರೋಪ ಮಾಡಿದರು.

ರವಿಶಂಕರ್ ಪ್ರಸಾದ್ ತಿರುಗೇಟು

ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಸರ್ವಾಧಿಕಾರಿಯಂತೆ ದೇಶವನ್ನು ಆಳಿದ್ದು ಇಂದಿರಾ ಗಾಂಧಿ ಎಂದು ಟಾಂಗ್ ನೀಡಿದ್ದಾರೆ.

English summary
Senior Congress leader Mallikarjun Kharge said that, The Constitution of India is in danger. BJP is trying to bring dictatorship in the country. PM Modi wants to do to India what Adolf Hitler did to Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X