ಕಾಂಗ್ರೆಸ್ ನೀಡಿದ ಬಂದ್‌ಗೆ ಬೆಂಬಲ ಘೋಷಿಸಿದ ಠಾಕ್ರೆಯ ಎಂಎನ್‌ಎಸ್ ಪಕ್ಷ
ಮುಂಬೈ, ಸೆಪ್ಟೆಂಬರ್ 09: ಕಾಂಗ್ರೆಸ್ ಪಕ್ಷವನ್ನು ಕಂಡರೆ ಉರಿದು ಬೀಳುತ್ತಿದ್ದ ಮಹರಾಷ್ಟ್ರದ ಎಂಎನ್‌ಎಸ್ ಪಕ್ಷವು ಇದೀಗ ಕಾಂಗ್ರೆಸ್ ನೀಡಿರುವ ಭಾರತ ಬಂದ್‌ಗೆ ಬೆಂಬಲ ನೀಡಿದೆ.
ಮಹರಾಷ್ಟ್ರ ನವನಿರ್ಮಾಣ ಸೇನೆ ಸಂಘಟನೆ ಅಧ್ಯಕ್ಷ ರಾಜ್ ಠಾಕ್ರೆ ಮಾತನಾಡಿ, ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್‌ಗೆ ಎಂಎನ್‌ಎಸ್‌ನ ಸಂಪೂರ್ಣ ಬೆಂಬಲ ಇದೆ. ನಮ್ಮ ಎಲ್ಲ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದಿದ್ದಾರೆ.
ತೈಲ ಬೆಲೆ ಹೆಚ್ಚಳ ಮಾಡಿರುವುದರಿಂದ ಸಾಮಾನ್ಯ ಜನರಿಗೆ ಹೊರೆ ಆಗಿದೆ. ತೈಲ ಬೆಲೆಯನ್ನೇ ವಿಷಯವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕೇಂದ್ರ ತನ್ನ ಭರವಸೆಯನ್ನು ಮರೆತಿದೆ ಎಂದು ಅವರು ಹೇಳಿದ್ದಾರೆ.

ಒಂದು ಕಾಲದ ಬಿಜೆಪಿಯ ಮಿತ್ರವಾಗಿದ್ದ ಎಂಎನ್‌ಎಸ್ ಇತ್ತೀಚೆಗೆ ಅದರ ವಿರುದ್ಧ ನಿಂತಿದ್ದು. ಲೋಕಸಭೆ ಚುನಾವಣೆಯಲ್ಲಿ ಎದುರಾಗಿ ಸ್ಪರ್ಧಿಸುವುದಾಗಿ ಈಗಾಗಲೆ ಹೇಳಿದೆ.
ಆದರೆ ಕಾಂಗ್ರೆಸ್‌ನ ಬಂದ್‌ಗೆ ಬೆಂಬಲ ನೀಡುವ ಮೂಲಕ ಎಂಎನ್‌ಎಸ್ ಪಕ್ಷ ಯುಪಿಎ ಮೈತ್ರಿಕೂಟವನ್ನು ಸೇರುತ್ತದೆಯಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.












Click it and Unblock the Notifications