• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾ ರಾಜ್ಯಪಾಲರಿಗೆ ಬಂಡಾಯ ಶಾಸಕರು ಬರೆದ ಆ ಪತ್ರದಲ್ಲಿ ಏನೆಲ್ಲಾ ಇದೆ?

|
Google Oneindia Kannada News

ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟಿನ ಮಧ್ಯೆ ಬಂಡಾಯ ನಾಯಕ ಏಕನಾಥ್ ಶಿಂಧೆ ಪರವಾಗಿ ನಿಂತಿರುವ 34 ಶಾಸಕರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಪತ್ರ ಬರೆದಿದ್ದಾರೆ.

   Uddhav Thackeray ಅವರ ಸುದ್ದಿಗೋಷ್ಠಿಯ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ | *India | OneIndia Kannada

   ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂಧೆಯನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಸುವಂತೆ ಬಂಡಾಯ ಶಾಸಕರು ಪತ್ರದ ಮೂಲಕ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

   2019ರಲ್ಲಿ ಏಕನಾಥ್ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಕಳೆದ ಮಂಗಳವಾರ ಅಂಗೀಕರಿಸಲಾದ ನಿರ್ಣಯದಲ್ಲಿ ಹೇಳಿದೆ.

    Explained: ಮಹಾರಾಷ್ಟ್ರದಲ್ಲಿ ಆ 40 ಶಾಸಕರ ಸಹಿ ಸರ್ಕಾರಕ್ಕೆ ಆಗುತ್ತಾ ಕಹಿ!? Explained: ಮಹಾರಾಷ್ಟ್ರದಲ್ಲಿ ಆ 40 ಶಾಸಕರ ಸಹಿ ಸರ್ಕಾರಕ್ಕೆ ಆಗುತ್ತಾ ಕಹಿ!?

   ಭರತ್ ಗೊಗವಾಲೆ ಅವರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಬಂಡಾಯ ಶಾಸಕರ ಪತ್ರ ಮತ್ತು ಅದರಲ್ಲಿ ಉಲ್ಲೇಖಿಸಿದ ಅಂಶಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.

   ರಾಜ್ಯ ಸರ್ಕಾರದ ವಿರುದ್ಧ ಬಂಡಾಯ ಶಾಸಕರು ಉಲ್ಟಾ

   ರಾಜ್ಯ ಸರ್ಕಾರದ ವಿರುದ್ಧ ಬಂಡಾಯ ಶಾಸಕರು ಉಲ್ಟಾ

   ಮಂಗಳವಾರದಿಂದ ನಡೆಯುತ್ತಿರುವ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ ವಿರುದ್ಧ ಶಿವಸೇನೆಯು ಕಠಿಣ ನಿಲುವ ಪ್ರದರ್ಶಿಸಲು ಮುಂದಾಗಿತ್ತು. ಈ ನಿಟ್ಟಿನಲ್ಲಿ ಏಕನಾಥ್ ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದು ಹಾಕುವ ನಿರ್ಧಾರವನ್ನು ಪ್ರಕಟಿಸಿತ್ತು. ಅದಾಗ್ಯೂ, ಬಂಡಾಯ ಶಾಸಕರು ಸ್ವಪಕ್ಷದ ವಿರುದ್ಧವೇ ಉಲ್ಟಾ ಹೊಡೆದಿದ್ದಾರೆ. ಶಿಂಧೆಯನ್ನೇ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮುಂದುವರಿಸುವಂತೆ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

   ಸರ್ಕಾರದಲ್ಲಿ ಶಿವಸೇನೆ ಸಿದ್ಧಾಂತಕ್ಕೆ ಧಕ್ಕೆ ಬಗ್ಗೆ ಆರೋಪ

   ಸರ್ಕಾರದಲ್ಲಿ ಶಿವಸೇನೆ ಸಿದ್ಧಾಂತಕ್ಕೆ ಧಕ್ಕೆ ಬಗ್ಗೆ ಆರೋಪ

   ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಶಿವಸೇನೆಯು ತನ್ನ ಸಿದ್ಧಾಂತವನ್ನು ಮರೆತಂತೆ ತೋರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶಿವಸೇನೆ ಸಿದ್ಧಾಂತಗಳಿಗೆ ಧಕ್ಕೆಯಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಪ್ರಸ್ತುತ ಜೈಲಿನಲ್ಲಿರುವ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಅನ್ನು ಉಲ್ಲೇಖಿಸಿರುವ ಶಾಸಕರು "ಸರ್ಕಾರದಲ್ಲಿನ ಭ್ರಷ್ಟಾಚಾರ" ದ ಬಗ್ಗೆ ತಮ್ಮ ಅಸಮಾಧಾವನ್ನು ಹೊರ ಹಾಕಿದ್ದಾರೆ.

   ಸುನೀಲ್ ಪ್ರಭು ಹೊರಡಿಸಿರುವ ಆದೇಶದ ಬಗ್ಗೆ ಆಕ್ಷೇಪ

   ಸುನೀಲ್ ಪ್ರಭು ಹೊರಡಿಸಿರುವ ಆದೇಶದ ಬಗ್ಗೆ ಆಕ್ಷೇಪ

   ಮಹಾರಾಷ್ಟ್ರದಲ್ಲಿ "ಭರತ್ ಗೋಗವಾಲೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ. ಹಾಗಾಗಿ ಬುಧವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ಸಂಬಂಧಿಸಿದಂತೆ ಸುನೀಲ್ ಪ್ರಭು ಹೊರಡಿಸಿರುವ ಆದೇಶ ಕಾನೂನು ಬಾಹಿರವಾಗಿದೆ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆ ದೂಷಿಸಿದ್ದಾರೆ. ವಿಭಿನ್ನ ಸಿದ್ಧಾಂತಗಳ ಕಾರಣದಿಂದಾಗಿ ಎನ್‌ಸಿಪಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರಲ್ಲಿ ಅಗಾಧ ಅಸಮಾಧಾನವಿದೆ ಎಂದು ಬಂಡಾಯ ಶಿವಸೇನೆ ಶಾಸಕರು ಹೇಳುತ್ತಿದ್ದಾರೆ.

   ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?

   ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?

   ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿವೆ.

   ಮಹಾ ವಿಕಾಸ ಅಘಾಡಿ ಎಂಬ ಸಮ್ಮಿಶ್ರ ಸರ್ಕಾರ ಈಗ ಅಲುಗಾಡುತ್ತಿದೆ. ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ.

   English summary
   Rebel MLAs write a Letter to Maharashtra Governor for Eknath Shinde continues to be legislative party chief amid Maharashtra political crisis.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X