ಮುಂಬೈ ಹೈ ಅಲರ್ಟ್ ! ಉರಾನ್ ಬಳಿ ಉಗ್ರರು ಇರುವ ಶಂಕೆ ?

Posted By:
Subscribe to Oneindia Kannada

ಮುಂಬೈ, ಸೆ. 22: ಇಲ್ಲಿನ ರಾಜ್ ಘಡ್ ನ ಉರಾನ್ ಸಮುದ್ರ ತೀರದ ಸಮೀಪ ನಾಲ್ವರು ವ್ಯಕ್ತಿಗಳು ಗನ್ ಗಳೊಂದಿಗೆ ಓಡಾಡುತ್ತಿರುವುದನ್ನು ಕಂಡು ಶಾಲಾ ಮಕ್ಕಳು ವರದಿ ಮಾಡಿದ್ದಾರೆ. ತಕ್ಷಣವೇ ಮುಂಬೈನಲ್ಲಿ ನೌಕಾದಳ ಹೈಅಲರ್ಟ್ ಘೋಷಿಸಿದೆ. 26/11 ಮಾದರಿ ದಾಳಿಯ ಶಂಕೆ ವ್ಯಕ್ತವಾಗಿದೆ.

ಮುಂಬೈ ಬಂದರು ಪ್ರದೇಶದ ಉರಾನ್ ನಲ್ಲಿ ನಾಲ್ವರು ವ್ಯಕ್ತಿಗಳು ಕಪ್ಪು ಬಣ್ಣದ ದಿರಿಸು ತೊಟ್ಟು ಮುಖವನ್ನು ಮುಚ್ಚಿಕೊಂಡಿದ್ದರು. ಎಲ್ಲರ ಬಳಿ ಎಕೆ 47 ಮಾದರಿ ಗನ್ ಗಳಿತ್ತು. ತೀರ ಪ್ರದೇಶದಲ್ಲಿ ಓಡಾಡುತ್ತಿರುವ ಬಗ್ಗೆ ಶಾಲಾ ಮಕ್ಕಳು ಶಂಕೆ ವ್ಯಕ್ತಪಡಿಸಿ ಮಾಹಿತಿ ನೀಡಿದ್ದಾರೆ.

Men with arms spotted near naval base at Uran: Highest alert declared in Mumbai

ಐಎನ್ ಎಸ್ ಅಭಿಮನ್ಯು ಶಸ್ತ್ರಾಗಾರ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರು ಶಂಕಾಸ್ಪದ ವ್ಯಕ್ತಿಗಳು ಪಠಾಣರ ಮಾದರಿ ಡ್ರೆಸ್ ಹಾಕಿಕೊಂಡಿದ್ದರು ಎಂದು ಮಕ್ಕಳು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Navy is on the highest alert after schoolchildren reported that they had seen four men dressed in black carrying guns in the Uran area of Mumbai. The schoolchildren reported to their school that they had seen four men at around 7 PM near the naval base in Uran.
Please Wait while comments are loading...