• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ: ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ

By Mahesh
|

ಮುಂಬೈ, ಆ.7: ಜೇಮ್ಸ್ ಬಾಂಡ್ ಚಿತ್ರ ನೋಡಿದ್ದವರಿಗೆ ವಿಲನ್ ಕೈಲಿ ಚಿನ್ನದ ಗನ್ ಇದ್ದಿದ್ದು ನೋಡಿ ಅಚ್ಚರಿ ಪಟ್ಟವರಿಗೇನೂ ಕಮ್ಮಿಯಿಲ್ಲ. ಆದರೆ, ವಿದ್ಯೆಗೆ ನೈವೇದ್ಯ ಹಾಡಿದ್ದ ಒಬ್ಬ ಮಹಾನುಭಾವ ಈಗ ಉದ್ಯಮಿ ಎನಿಸಿಕೊಂಡು ಚಿನ್ನದಲ್ಲಿ ತಯಾರಿಸಿದ ಅಂಗಿಯನ್ನು ತೊಟ್ಟು ಓಡಾಡಿದ ಘಟನೆ ವರದಿಯಾಗಿದೆ.

ಅಚ್ಚರಿಯಾದರೂ ಇದು ನಿಜ. ಮುಂಬೈನ ಗಾರ್ಮೆಂಟ್ ಉದ್ಯಮಿ ಪಂಕಜ್ ಪರಾಕ್ ಎಂಬಾತ ತನ್ನ 45ನೇ ಹುಟ್ಟುಹಬ್ಬಕ್ಕೆ ಮಾಡಿಸಿಕೊಂಡಿರುವ ಬಂಗಾರದ ಶರ್ಟ್ ಇದು. ಈ ಹಿಂದೆ ದತ್ತ ಫುಗೆ ಎಂಬ ಪಿಂಪ್ರಿ ಮೂಲದ ಉದ್ಯಮಿ ಇದೇ ರೀತಿ ಶರ್ಟ್ ಕೊರಳಿಗೆ ಚಿನ್ನದ ದಪ್ಪ ದಪ್ಪ ಚೈನ್ ಹಾಕಿಕೊಂಡು ಪೋಸ್ ನೀಡಿದ್ದರು. ಈಗ ಗಾರ್ಮೆಂಟ್ ಉದ್ಯಮಿ ಪಂಕಜ್ ಪರಾಖ್ ಸರದಿ.

ಸುಮಾರು 4 ಕೆ.ಜಿ ಬಂಗಾರದಿಂದ ತಯಾರಿಸಿರುವ ಈ ಶರ್ಟ್ ನ ಬೆಲೆ 1.30 ಕೋಟಿ ರೂಪಾಯಿ(($214,000). ಶಾಲೆ ಹಂತದಲ್ಲೇ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ್ದ ಉದ್ಯಮಿ ಪಂಕಜ್ ಗೆ ಕೈ ಹಿಡಿದಿದ್ದು ಗಾರ್ಮೆಂಟ್ಸ್ ಉದ್ಯಮ. ಮುಂಬೈನಿಂದ ಸುಮಾರು 260 ಕಿ.ಮೀ ದೂರವಿರುವ ಯೆಯೊಲಾದಲ್ಲಿ ಈತನೇ ಕುಬೇರ.

ಶುಕ್ರವಾರ ನಡೆಯಲಿರುವ ತನ್ನ 45ನೇ ಹುಟ್ಟುಹಬ್ಬದಂದು ಈ ಬಂಗಾರದ ಶರ್ಟ್ ಹಾಕಿಕೊಂಡು ಪಂಕಜ್ ಮಿಂಚಲಿದ್ದಾರೆ. ಈತನ ಹುಟ್ಟುಹಬ್ಬಕ್ಕೆ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಛಗನ್ ಭುಜ್ ಬಲ್ ಸೇರಿದಂತೆ ಅನೇಕ ಗಣ್ಯರು ಬರುತ್ತಿದ್ದಾರೆ.

Meet the man with a shirt made of gold Pankaj Parakh

ಏಳು ಚಿನ್ನದ ಬಟನ್ ಇರುವ ಅಂಗಿ ತೊಟ್ಟ ಪಂಕಜ್ ರನ್ನು ಈ ಬಗ್ಗೆ ಕೇಳಿದರೆ ಹೆಮ್ಮೆಯಿಂದ ತಮ್ಮ ಸಾಧನೆ ಹೇಳಿಕೊಳ್ಳುತ್ತಾರೆ. ಚಿಕ್ಕಂದಿನಿಂದಲೂ ನನಗೆ ಚಿನ್ನದ ಮೇಲೆ ಮೋಹವಿತ್ತು. ಐದು ವರ್ಷದವನಾಗಿದ್ದ ನನಗೆ ಚಿನ್ನವನ್ನು ಹೊಂದುವ ಕನಸು ಕಾಣುತ್ತಿದ್ದೆ. 8ನೇ ಕ್ಲಾಸಿನ ನಂತರ ಓದಲಾಗಲಿಲ್ಲ. ಯೆಯೆಲೊದಲ್ಲಿ ಉದ್ಯಮ ಕೈ ಹಿಡಿಯಿತು. ಎನ್ ಸಿಪಿಯಿಂದ ಕಾರ್ಪೋರೇಟರ್ ಕೂಡಾ ಆಗಿದ್ದೆ. ಈಗ ನನ್ನ ಕನಸು 45ನೇ ವರ್ಷದ ಹುಟ್ಟಹಬ್ಬದಂದು ಈಡೇರಿದೆ ಎಂದು ಐಎಎನ್ ಎಸ್ ಸುದ್ದಿಗಾರರರ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ನಾಸಿಕ್ ವಿನ್ಯಾಸಗಾರರು: ನಾಸಿಕ್ ಮೂಲದ ಬಾಫ್ನಾ ಜ್ಯುವೆಲ್ಲರ್ಸ್ ನವರು ಈ ಚಿನ್ನದ ಶರ್ಟ್ ವಿನ್ಯಾಸಗೊಳಿಸಿದ್ದಾರೆ. ಅಂಗಿಗೆ ಬಳಸಲಾದ ಚಿನ್ನ(18-22 ಕ್ಯಾರೆಟ್) ವನ್ನು ಮುಂಬೈನ ಪಾರೆಲ್ ನಲ್ಲಿರುವ ಶಾಂತಿ ಜ್ಯುವೆಲ್ಲರ್ಸ್ ನಿಂದ ಖರೀದಿಸಲಾಗಿದೆ. ಸುಮಾರು 20 ಕ್ಕೂ ಅಧಿಕ ವಿನ್ಯಾಸಗಾರರು, ದರ್ಜಿಗಳು ಸುಮಾರು 3,200 ಗಂಟೆಗಳ ಕಾಲ ಕಳೆದ ಎರಡು ತಿಂಗಳು ಈ ಚಿನ್ನದ ಅಂಗಿ ಹೊಲೆಯುವುದರಲ್ಲಿ ನಿರತರಾಗಿದ್ದರು.

23 ವರ್ಷಗಳ ಹಿಂದೆ ಪಂಕಜ್ ಮದುವೆಯಲ್ಲಿ ವಧುವಿಗಿಂತ ಹೆಚ್ಚು ಬಂಗಾರ ತೊಟ್ಟಿದ್ದ ಪಂಕಜ್ ಎಲ್ಲರ ಗಮನ ಸೆಳೆದಿದ್ದರು. ಪಂಕಜ್ ಪತ್ನಿ ಪ್ರತಿಭಾ ಅವರು ಮಕ್ಕಳಾದ ಸಿದ್ದಾರ್ಥ್(22), ರಾಹುಲ್(19) ಅವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಪಂಕಜ್ ಗೆ ಇರುವ ಚಿನ್ನದ ವ್ಯಾಮೋಹದ ಬಗ್ಗೆ ಕುಟುಂಬಕ್ಕೇನೂ ಆಕ್ಷೇಪವಿಲ್ಲ ಆದರೆ, ಆ ಬಗ್ಗೆ ಹೆಚ್ಚಿನ ಆಸಕ್ತಿಯೂ ಇಲ್ಲ ಎಂದು ತಿಳಿದು ಬಂದಿದೆ.

ಈ ಹಿಂದೆ 1.27 ಕೋಟಿ ರು ಮೌಲ್ಯದ ಶರ್ಟ್ ತೊಟ್ಟಿದ್ದ ದತ್ತ ಫುಗೆ ದಾಖಲೆಯನ್ನು 1.30 ಕೋಟಿ ರು ಮೌಲ್ಯದ ಚಿನ್ನದ ಅಂಗಿ ತೊಟ್ಟು ಪಂಕಜ್ ಮುರಿದಿದ್ದು ಲಿಮ್ಕಾ, ಗಿನ್ನಿಸ್ ದಾಖಲೆ ನಿರೀಕ್ಷೆಯಲ್ಲಿದ್ದಾರೆ.

English summary
Meet the man with a shirt made of gold Pankaj Parakh. This school dropout is acquiring a golden shirt that weighs four kilograms and costs a staggering Rs. 1.30 crore ($214,000).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X