ಥಾಣೆ: ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಮೂವರು ಸಾವು

Posted By:
Subscribe to Oneindia Kannada

ಥಾಣೆ (ಮಹಾರಾಷ್ಟ್ರ), ಮೇ 26: ಥಾಣೆಯ ದೊಂಬಿವಾಲಿ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಗುರುವಾರ ಬೆಂಕಿ ಅಪಘಾತ ಸಂಭವಿಸಿದೆ. ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿಗೆ ತೀವ್ರವಾದ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ದೊಂಬಿವಾಲಿ ಪೂರ್ವ ಪ್ರದೇಶದಲ್ಲಿರುವ ಆಚಾರ್ಯ ಕೆಮಿಕಲ್ ಕಾರ್ಖಾನೆಯಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಬಾಯ್ಲರ್ ಸ್ಪೋಟಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ ಎಂದು ಥಾಣೆ ಪೊಲೀಸ್ ಜಂಟಿ ಆಯುಕ್ತ ಆಶುತೋಶ್ ದಂಬಾರೆ ಹೇಳಿದ್ದಾರೆ.

Massive explosion in chemical factory in Maharashtra; 3 dead, several injured

ಘಟನೆ ಬಗ್ಗೆ ತಿಳಿದ ಕೂಡಲೇ ಅಗ್ನಿಶಾಮಕ ದಳದ ವಾಹನಗಳು, ಆಂಬ್ಯುಲೆನ್ಸ್ ಹಾಗೂ ವಾಟರ್ ಟ್ಯಾಂಕರ್ ಸ್ಥಳಕ್ಕೆ ಕಳಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡದಲ್ಲಿರುವ ಬಹುತೇಕ ವಸ್ತುಗಳು ನಾಶವಾಗಿವೆ.


ಬಾಯ್ಲರ್​ನ ಲೋಹದ ಚೂರುಗಳು ಸ್ಪೋಟದ ತೀವ್ರತೆಗೆ ಕಾರ್ವಿುಕರಿಗೆ ತಗುಲಿ ಗಾಯಗೊಂಡಿದ್ದಾರೆ. ಅಕ್ಕ ಪಕ್ಕದ ಮನೆಗಳ ಗಾಜುಗಳು ಚೂರಾಗಿವೆ.
-
ಥಾಣೆ: ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಮೂವರು ಸಾವು

ಥಾಣೆ: ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಮೂವರು ಸಾವು

-
-
-
-
-
-
-

ಎರಡು ಕಿ.ಮೀ ವ್ಯಾಪ್ತಿಯ ತನಕ ದಟ್ಟವಾದ ಹೊಗೆ ವ್ಯಾಪಿಸಿದ್ದು, ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three persons were feared dead while 50 were injured in a massive explosion which happened in a boiler room of the Acharya Chemicals factory in MIDC area in Dombivali (East).
Please Wait while comments are loading...