ಮುಂಬೈ ಬೆಂಕಿ ಅವಘಡ: ಓರ್ವ ವ್ಯಕ್ತಿ ಬಂಧನ
ಮುಂಬೈ, ಡಿಸೆಂಬರ್ 19: 12 ಮಂದಿಯನ್ನು ಬಲಿತೆಗೆದುಕೊಂಡ ಮುಂಬೈಯ ಕೈರಾಣಿ ರಸ್ತೆಯಲ್ಲಿ ನಿನ್ನೆ(ಡಿ.18) ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೈರಾಣಿ ರಸ್ತೆಯಲ್ಲಿರುವ ಬಿಸ್ಕೇಟ್ ಫ್ಯಾಕ್ಟರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ 12 ಕಾರ್ಮಿಕರು ದಾರುಣ ಅಂತ್ಯ ಕಂಡಿದ್ದರು.

ಈ ರಸ್ತೆಯಲ್ಲಿ ಬೇನಾಮಿ ಕಾರ್ಖಾನೆಗಳೇ ಹೆಚ್ಚಿದ್ದು, ನಿರ್ಲಕ್ಷ್ಯದಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ಅಂದಾಜಿಸಲಾಗಿದೆ.











Click it and Unblock the Notifications