ನಟಿ ಮಮತಾ ಕುಲಕರ್ಣಿ ಕೂಡಾ ಡ್ರಗ್ಸ್ ದಂಧೆಯಲ್ಲಿ ಭಾಗಿ!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 29:ಹಿಂದಿ ಚಿತ್ರರಂಗದಲ್ಲಿ ಒಂದುಕಾಲದಲ್ಲಿ ಗ್ಲಾಮರ್ ತಾರೆಯಾಗಿ ಕಾಣಿಸಿಕೊಂಡಿದ್ದ ನಟಿ ಮಮತಾ ಕುಲಕರ್ಣಿ ಅವರ ಪತಿ ವಿಕ್ಕಿ ಗೋಸ್ವಾಮಿ ಅವರು ಡ್ರಗ್ಸ್ ಮಾಫಿಯಾ ಕಿಂಗ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜತೆಗೆ ಮಮತಾ ಕೂಡಾ ಸಕ್ರಿಯವಾಗಿ ಮಾದಕ ದ್ರವ್ಯ ವ್ಯಾಪಾರಿ ಎನ್ನಲಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಪೊಲೀಸರು ಸೋಲಾಪುರದ ಫ್ಯಾಕ್ಟರಿಯೊಂದರಿಂದ 20 ಟನ್ ಎಫೆಡ್ರಾಯಿನ್ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಈ ಡೀಲಿಂಗ್ ನಲ್ಲಿ ಪತಿ ವಿಕ್ಕಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಪತಿಯ ಡ್ರಗ್ ಡೀಲಿಂಗ್ ಗೆ ಮಮತಾ ಕೂಡಾ ಸಾಥ್ ನೀಡುತ್ತಿದ್ದರು ಎಂಬ ಮಾಹಿತಿ ಇದೆ.[ದಾವೂದ್ ಕರೆ ಸ್ವೀಕರಿಸಿದ ರಾಜಕಾರಣಿಗೆ ಯಾರು?]

ಮೊದಲಿಗೆ ಆಫ್ರಿಕಾದಲ್ಲಿ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಗೋಸ್ವಾಮಿ ನಂತರ ಅಮೆರಿಕಕ್ಕೂ ಮಾದಕ ದ್ರವ್ಯ ಪೂರೈಕೆ ಮಾಡತೊಡಗಿದ. ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್ ಫೋರ್ಸ್ ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಕೂಡಾ ವಿಕ್ಕಿಯನ್ನು ಹುಡುಕುತ್ತಿದೆ. ಸುಮಾರು 2,500 ಕೋಟಿ ರು ಮೌಲ್ಯದ ಎಫೆಡ್ರೈನ್ 18.5 ಟನ್ ಹಾಗೂ ಅಸಿಟಿಕ್ ಅನ್ ಹೈಡ್ರೈಡ್ 2.5 ಟನ್ ಸದ್ಯಕ್ಕೆ ಜಪ್ತಿ ಮಾಡಲಾಗಿದೆ.[ತಿಹಾರ್ ಜೈಲಿನಲ್ಲಿ ಛೋಟಾ ರಾಜನ್]

ಸದ್ಯ ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿಯನ್ನು ಗಡಿಪಾರು ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ.ಮನೋಜ್ ಜೈನ್, ಪುನೀತ್ ಶ್ರಿಂಗಿ, ಪ್ರದೀಪ್ ಸಿಂಗ್ ಗಿಲ್ ಮುಂತಾದವರು ಸಹ ಆರೋಪಿಗಳಾಗಿದ್ದಾರೆ. ಇಂಟರ್ ಪೋಲ್ ನೋಟಿಸ್ ಪಡೆದಿರುವ ವಿಕ್ಕಿ ತನ್ನ ಜಾಲದ ವಿವರವನ್ನು ಪತ್ನಿ ಮಮತಾಗೆ ಹೇಳಿರುವ ಸಾಧ್ಯತೆಯಿದೆ. [ಮಮತಾ ಕುಲಕರ್ಣಿ ಫ್ಲ್ಯಾಶ್ ಬ್ಯಾಕ್]

ವಿಶ್ವದ ಅನೇಕ ಕಡೆ ಗ್ರಾಹಕರನ್ನು ಹೊಂದಿರುವ ವಿಕ್ಕಿ

ವಿಶ್ವದ ಅನೇಕ ಕಡೆ ಗ್ರಾಹಕರನ್ನು ಹೊಂದಿರುವ ವಿಕ್ಕಿ

ಅಲ್ಲದೆ, ಆಕೆಯನ್ನು ದುಬೈ, ಸಿಂಗಪುರ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್ ಕ್ಲೈಂಟ್ ಜತೆ ಸಭೆ ನಡೆಸಲು ಕಳಿಸಿದ್ದ ಎಂಬ ಮಾಹಿತಿ ಕೂಡಾ ಇದೆ. ಮಮತಾ ಹೆಸರಿನಲ್ಲೇ ಬ್ಯಾಂಕ್ ವ್ಯವಹಾರಗಳನ್ನು ಆತ ನಡೆಸುತ್ತಿದ್ದ. 2014ರಲ್ಲ್ಲಿ ಮಮತಾ ಹಾಗೂ ಗೋಸ್ವಾಮಿ ಅವರನ್ನು ಕೀನ್ಯಾ ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದರು. ಆದರೆ, ನಂತರ ಬಿಡುಗಡೆಯಾಗಿದ್ದರು.

ಯುಎಇ ಜೈಲಿನಲ್ಲಿದ್ದ ಮಮತಾ ಪತಿ ವಿಕ್ಕಿ

ಯುಎಇ ಜೈಲಿನಲ್ಲಿದ್ದ ಮಮತಾ ಪತಿ ವಿಕ್ಕಿ

1997 ರಲ್ಲಿ ನಿಷೇಧಿತ ಮ್ಯಾಂಡ್ರಕ್ಸ್ 11.5 ಟನ್ ಗಳಷ್ಟು ಸಾಗಿಸುತ್ತಿದ್ದ ಗೋಸ್ವಾಮಿಯನ್ನು ಬಂಧಿಸಿದ್ದ ಯುಎಇ ಪೊಲೀಸರು 25 ವರ್ಷ ಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. 2012ರ ನವೆಂಬರ್ 15 ರಂದು ಬಿಡುಗಡೆಯಾಗಿದ್ದ 2012ರಲ್ಲಿ 52 ವರ್ಷ ವಯಸ್ಸಿನ ವಿಕ್ಕಿಯನ್ನು ಮಮತಾ (ಈಗ 44 ವರ್ಷ) ಮದುವೆಯಾಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಮತಾ ಮತಾಂತರಗೊಂಡಿದ್ದರು.

ಮಮತಾ ಕುಲಕರ್ಣಿ ಮೇಲೆ ಡಿ ಕಂಪನಿ ವಾರ್

ಮಮತಾ ಕುಲಕರ್ಣಿ ಮೇಲೆ ಡಿ ಕಂಪನಿ ವಾರ್

90ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗೆ ಪತಿ ವಿಕ್ಕಿ ಗೋಸ್ವಾಮಿ ಜೊತೆ ಬಂಧನವಾದ ಸುದ್ದಿ ಈಗಾಗಲೇ ಜಗತ್ತಿಗೆ ತಿಳಿದಿದೆ. ದುಬೈ ಜೈಲಿನಲ್ಲಿ ಸುಮಾರು 15 ವರ್ಷಗಳ ಕಾಲ ವಿಕ್ಕಿ ಗೋಸ್ವಾಮಿ ಕಾಲದೂಡಿದ್ದರೂ ಮತ್ತೆ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದ. ವಿಕ್ಕಿಗೆ ಛೋಟಾ ರಾಜನ್ ಸಾಥ್ ನೀಡಿದ್ದ, ಬದ್ಧವೈರಿ ರಾಜನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಡೀಲಿಂಗ್ ಬಗ್ಗೆ ಪೊಲೀಸರಿಗೆ ಡಿ ಕಂಪನಿ ಮಾಹಿತಿ ನೀಡಿತ್ತು

ಮುಳುವಾದ ಕೀನ್ಯಾ ಡ್ರಗ್ ಡೀಲಿಂಗ್

ಮುಳುವಾದ ಕೀನ್ಯಾ ಡ್ರಗ್ ಡೀಲಿಂಗ್

ಕೀನ್ಯಾದ ಡ್ರಗ್ ಮಾಫಿಯಾ ಕಿಂಗ್ ಬರಾಕತ್ ಅಕ್ಷಾ ಹಾಗೂ ಪಾಕಿಸ್ತಾನದ ಡ್ರಗ್ ಡೀಲರ್ ಗುಲಾಂ ಹುಸೇನ್ ಡೀಲಿಂಗ್ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕಲು ಡಿ ಕಂಪನಿ ಮಹಮ್ಮದ್ ಬಷೀರ್ ಸುಲೇಮಾನ್(ಎಂಬಿಎಸ್) ನೆರವು ಪಡೆದುಕೊಂಡಿತ್ತು. ಕೀನ್ಯಾ ಪೊಲೀಸರು ಯುಎಸ್ ಡ್ರಗ್ ನಿಗ್ರಹ ದಳಕ್ಕೆ ಮಾಹಿತಿ ಕಳಿಸಿದರು. ಈಗ ಯುಎಸ್ ನ ಕ್ರಿಮಿನಲ್ ಪಟ್ಟಿಯಲ್ಲಿ ವಿಕ್ಕಿ ಹೆಸರು ಟಾಪ್ ನಲ್ಲಿದೆ.

ಬಾಲಿವುಡ್ ನಟಿಗಿತ್ತು ಭೂಗತ ಜಗತ್ತಿನ ನಂಟು

ಬಾಲಿವುಡ್ ನಟಿಗಿತ್ತು ಭೂಗತ ಜಗತ್ತಿನ ನಂಟು

ಕನ್ನಡದಲ್ಲಿ ವಿಷ್ಣು ವಿಜಯ ಚಿತ್ರದಲ್ಲಿ ನಟಿಸಿದ್ದ ಮಮತಾ ಅವರು ಹಿಂದಿಯಲ್ಲಿ ಅನೇಕ ಜನಪ್ರಿಯ ನಟರ ಜೊತೆ ನಟಿಸಿದ್ದರೂ ನಟನೆಗಿಂತ ಮಾದಕತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಳು. ಬಾಲಿವುಡ್ ಬೆಡಗಿಯರ ಭೂಗತ ಜಗತ್ತಿನ ನಂಟು ತುಂಬಾ ಹಳೆಯ ಇತಿಹಾಸ. ಹಾಜಿ ಮಸ್ತಾನ್ ನಿಂದ ಹಿಡಿದು ಅಬು ಸಲೇಂ ತನಕ ಕಥೆ ಮುಂದುವರೆಯುತ್ತಲೇ ಇದೆ. ಮುಂಬೈನ ರಿಯಲ್ ಎಸ್ಟೇಟ್ ದಂಧೆ ಕೂಡಾ ಕೊರಳಿಗೆ ಉರುಳಾಗುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Bollywood actress Mamata Kulkarni has embroiled herself into a major controversy as her husband Vicky Goswami has emerged to be an international drug lord.
Please Wait while comments are loading...