• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಮಾಲ್‌ನಲ್ಲಿ ಭಾರಿ ಅಗ್ನಿ ಅನಾಹುತ

|

ಮುಂಬೈ, ಅಕ್ಟೋಬರ್ 23: ದಕ್ಷಿಣ ಮುಂಬೈನ ಸಿಂಟಿ ಸೆಂಟರ್ ಮಾಲ್‌ನಲ್ಲಿ ಗುರುವಾರ ರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಮಾಲ್ ಒಳಗೆ 200-300 ಜನರಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ರಾತ್ರಿ 8.53ರ ಸುಮಾರಿಗೆ ನಾಲ್ಕು ಮಹಡಿಯ ಮಾಲ್‌ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಮಾಲ್ ಒಳಭಾಗ ಹಾಗೂ ಹೊರಗೆ ಆವರಿಸಿತ್ತು. ಇದರಿಂದ ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲಾರಂಭಿಸಿದ್ದರು.

ಕೂಡಲೇ 20 ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಿಂದಿಸುವ ಕಾರ್ಯ ಆರಂಭಿಸಿದವು. ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲ ಹಂತದಲ್ಲಿ ಮಾತ್ರ ಆವರಿಸಿದ್ದ ಬೆಂಕಿ, ರಾತ್ರಿ 10.45ರ ವೇಳೆಗೆ ಮೂರನೇ ಹಂತದವರೆಗೂ ಭುಗಿಲೆದ್ದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನೂ ಪೊಲೀಸರು ಸ್ಥಳಾಂತರಗೊಳಿಸಿದ್ದರು.

ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಮಾಲ್‌ನಲ್ಲಿ ಹೆಚ್ಚಿನ ಅಂಗಡಿಗಳು ಮೊಬೈಲ್ ಬಿಡಿಭಾಗಗಳ ಮಾರಾಟ ಮಾಡುತ್ತಿದ್ದವು. ಅಗ್ನಿಯ ಜ್ವಾಲೆಗೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಕೋಟಿಗಟ್ಟಲೆ ಹಣ ನಷ್ಟವಾಗಿದೆ.

English summary
A major fire breaks out at South Mumbai's City Centre Mall on Thursday night. No casualty reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X