ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಎತ್ತು ಏರಿಗೆ, ಕೋಣ ನೀರಿಗೆ!
Recommended Video
ಮುಂಬೈ, ನವೆಂಬರ್.24: ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತೆ ಅನ್ನೋ ಮಾತನ್ನು ಕೇಳಿದ್ದೀರಾ ಅಲ್ಲವಾ. ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಕೂಡಾ ಹಾಗೆ ಆಗುತ್ತಿವೆ. ಒಬ್ಬರು ಒಂದು ರಾಗ ಹಾಡುತ್ತಿದ್ದರೆ, ಮತ್ತೊಬ್ಬರು ಮತ್ತೊಂದು ರಾಗ ಹಾಡುತ್ತಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸ್ಥಿರ ಆಡಳಿತ ನೀಡುತ್ತೇವೆ ಎಂದು ನೂತನ ಉಪ ಮುಖ್ಯಮಂತ್ರಿ ಹಾಗೂ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಸಾಲು ಸಾಲು ಟ್ವೀಟ್ ಮಾಡುತ್ತಿದ್ದಾರೆ. ಇದಕ್ಕೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕೆರಳಿ ಕೆಂಡವಾಗಿದ್ದಾರೆ.
ಅಂದು ಕರ್ನಾಟಕ, ಇಂದು ಮಹಾರಾಷ್ಟ್ರ: ವಿಶ್ವಾಸ ಗೆಲ್ಲುತ್ತಾರಾ ಫಡ್ನವೀಸ್?
ಬಿಜೆಪಿ ಜೊತೆಗಿನ ಮೈತ್ರಿ ಎಂಬುದೆಲ್ಲ ಸುಳ್ಳು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿ ಕಾರಿದ್ದಾರೆ. ಮುಂಬೈನಲ್ಲಿ ಮಾತನಾಡಿರುವ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಸಾಧ್ಯವೇ ಇಲ್ಲ. ಇನ್ನು, ಸ್ಥಿರ ಆಡಳಿತ ವಿಚಾರವಂತೂ ದೂರದ ಮಾತು ಎಂದಿದ್ದಾರೆ.

ಡಿಸಿಎಂ ಅಜಿತ್ ಪವಾರ್ ತಪ್ಪಿಸುತ್ತಿದ್ದಾರಾ ಹಾದಿ?
ಬಿಜೆಪಿ ಜೊತೆ ಎನ್ ಸಿಪಿ ಯಾವುದೇ ರೀತಿಯಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ತಮ್ಮದೇ ಪಕ್ಷದ ಮುಖಂಡರಾಗಿರುವ ಅಜಿತ್ ಪವಾರ್ ಎಲ್ಲರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
ಈ ಮೊದಲೇ ಚರ್ಚೆ ನಡೆಸಿದಂತೆ ಶಿವಸೇನೆಗೆ ಸರ್ಕಾರ ರಚಿಸಲು ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಲು ತೀರ್ಮಾನಿಸಿದೆ. ನಮ್ಮ ಪಕ್ಷ ಯಾವಾಗಲೂ ಬಿಜೆಪಿ ಜೊತೆ ಹೋಗಲು ಸಾಧ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.













Click it and Unblock the Notifications