• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಎ ವಿರುದ್ಧ ನಿರ್ಣಯ ತೆಗೆದುಕೊಳ್ಳುವುದಿಲ್ಲ; ಅಜಿತ್ ಪವಾರ್

|

ಮುಂಬೈ, ಮಾರ್ಚ್ 2: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿಎಎ ಕಾಯ್ದೆಯಿಂದ ಯಾರ ಪೌರತ್ವಕ್ಕೂ ದಕ್ಕೆ ಬರುವುದಿಲ್ಲ. ಯಾರೂ ಬಯಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಹಾ ವಿಕಾಸ್ ಅಗಾಡಿ ಅಡಿ ಮೈತ್ರಿ ಪಕ್ಷಗಳು ಚರ್ಚಿಸಿದ್ದು, ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಸಿಎಎ ವಿರೋಧಿ ಬರಹ

ಸಿಎಎ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವಂತೆ ನಮ್ಮನ್ನು ಯಾರೂ ಒತ್ತಾಯಿಸಿಲ್ಲ. ಇದೊಂದು ವದಂತಿ ಅಷ್ಟೇ. ಆದರೆ ಹಲವರಿಲ್ಲಿ ಈ ಹೊಸ ಕಾಯ್ದೆ ಬಗ್ಗೆ ಭಯ ಹಾಗೂ ಅಪನಂಬಿಕೆ ಇದೆ. ಇದನ್ನು ಹೋಗಲಾಡಿಸಲು ಜನಜಾಗೃತಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಸಿಎಎ ಬಗ್ಗೆ ಬಿಹಾರ ಸರ್ಕಾರ ಅನುಸರಿಸಿರುವ ನೀತಿಯನ್ನೂ ನಾವು ಅನುಸರಿಸುವುದಿಲ್ಲ ಎಂದು ಎನ್‌ಸಿಪಿ ಮುಖಂಡರೂ ಆಗಿರುವ ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ.

English summary
Maharastra DCM Ajit Pawar Defends CAA, says no need to pass resolution in Maharashtra Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X