ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಂಪುಟ ವಿಸ್ತರಣೆಯಲ್ಲಿ ಎನ್ಸಿಪಿಗೆ ಸಿಂಹಪಾಲು!

|
Google Oneindia Kannada News

ಮುಂಬೈ, ಜನವರಿ 05: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿಕೂಟ ಸರ್ಕಾರದ ಸಂಪುಟ ವಿಸ್ತರಣೆ ಕಾರ್ಯವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಶಿವಸೇನಾ ಎನ್ಸಿಪಿ- ಕಾಂಗ್ರೆಸ್ ಪಕ್ಷಗಳ ನಾಯಕರಲ್ಲಿ ಅಸಮಾಧಾನ ಕಡೆಯ ನಡುವೆಯೇ 34 ಮಂದಿ ಉದ್ಧವ್ ಠಾಕ್ರೆ ಸಂಪುಟ ಸೇರ್ಪಡೆಯಾಗಿದ್ದಾರೆ

"ಮಹಾ ಸಚಿವರ ರಾಜೀನಾಮೆ, ಇದೇ ಸರ್ಕಾರ ಪತನಕ್ಕೆ ನಾಂದಿ"

ಮಹಾರಾಷ್ಟ್ರ ವಿಕಾಸ್ ಅಖಾಡಿ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗಿಲ್ಲವೇಕೆ ಎಂದು ವಿಪಕ್ಷ ಬಿಜೆಪಿ ಪ್ರಶ್ನೆ ಮಾಡಿತ್ತು. ಶನಿವಾರ ಸಂಜೆ ವೇಳೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಉದ್ಧವ್ ಠಾಕ್ರೆ ಸಚಿವ ಸಂಪುಟ ಸದಸ್ಯರ ಪಟ್ಟಿಯನ್ನು ಕಳಿಸಲಾಗಿದೆ ಎಂದು ಎನ್ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಪ್ರತಿಕ್ರಿಯಿಸಿದ್ದರು. ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಲೋಕೋಪಯೋಗಿ ಇಲಾಖೆ ಸಿಗುವ ನಿರೀಕ್ಷೆಯಿತ್ತು. ಈಗ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ನಂತರ ಯಾರಿಗೆ ಯಾವ ಖಾತೆ ಎಂಬುದು ಸ್ಪಷ್ಟವಾಗಿದೆ.

Maharashtra Portfolios finalised: NCP scores big; Ajit Pawar gets finance, Anil Dehmukh new HM

* ಉದ್ಧವ್ ಠಾಕ್ರೆ: ಮುಖ್ಯಮಂತ್ರಿ, ಕಾನೂನು ಮತ್ತು ಸುವ್ಯವಸ್ಥೆ
* ಅಜಿತ್ ಪವಾರ್ (ಎನ್‌ಸಿಪಿ): ಉಪ ಮುಖ್ಯಮಂತ್ರಿ, ಹಣಕಾಸು ಮತ್ತು ಯೋಜನೆ
* ಆದಿತ್ಯ ಠಾಕ್ರೆ (ಶಿವಸೇನಾ): ಪರಿಸರ ಮತ್ತು ಪ್ರವಾಸ
* ಅನಿಲ್ ದೇಶಮುಖ್ (ಎನ್‌ಸಿಪಿ): ಗೃಹ ಖಾತೆ

* ಜಯಂತ್ ಪಾಟೀಲ್ (ಎನ್‌ಸಿಪಿ): ನೀರಾವರಿ
* ದಿಲೀಪ್ ವಲ್ಸೆ ಪಾಟೀಲ್ (ಎನ್‌ಸಿಪಿ): ಕಾರ್ಮಿಕ ಮತ್ತು ಅಬಕಾರಿ
* ಛಗನ್ ಭುಜ್‌ಬಲ್ (ಎನ್‌ಸಿಪಿ): ಆಹಾರ ಮತ್ತು ನಾಗರಿಕ ಪೂರೈಕೆ

* ಏಕನಾಥ್ ಶಿಂಧೆ (ಶಿವಸೇನಾ): ಮಹಾರಾಷ್ಟ್ರ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ
* ಸುಭಾಶ್ ದೇಸಾಯಿ (ಶಿವಸೇನಾ): ಕೈಗಾರಿಕೆ
* ಬಾಳಾಸಾಹೇಬ್ ಥೋರಟ್ (ಕಾಂಗ್ರೆಸ್): ಕಂದಾಯ
* ಅಶೋಕ್ ಚವಾಣ್ (ಕಾಂಗ್ರೆಸ್): ಲೋಕೋಪಯೋಗಿ
* ಅಮಿತ್ ದೇಶಮುಖ್ (ಕಾಂಗ್ರೆಸ್): ಪ್ರಾಥಮಿಕ ಶಾಲಾ ಶಿಕ್ಷಣ
* ನಿತಿನ್ ರಾವತ್ (ಕಾಂಗ್ರೆಸ್): ವಿದ್ಯುತ್
* ಯಶೋಮತಿ ಠಾಕೂರ್ (ಕಾಂಗ್ರೆಸ್): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
* ನವಾಬ್ ಮಲಿಕ್ (ಎನ್‌ಸಿಪಿ): ಅಲ್ಪಸಂಖ್ಯಾತ ವ್ಯವಹಾರ
* ಜಿತೇಂದ್ರ ಅವ್ಹಾದ್ (ಎನ್‌ಸಿಪಿ): ಗೃಹ ನಿರ್ಮಾಣ ಅಭಿವೃದ್ಧಿ
* ಸುಭಾಷ್ ದೇಸಾಯಿ: ಕೈಗಾರಿಕೆ
* ರಾಜೇಂದ್ರ ಶಿಂಗಾನೆ: ಆಹಾರ ಮತ್ತು ಡ್ರಗ್ಸ್ ನಿಯಂತ್ರಣ
* ರಾಜೇಶ್ ತೋಪೆ: ಸಾರ್ವಜನಿಕ ಆರೋಗ್ಯ
* ವರ್ಷಾ ಗಾಯಕ್ವಾಡ್: ಶಾಲಾ ಶಿಕ್ಷಣ
* ಸುನೀಲ್ ಕೇದಾರ್: ಪಶು ಸಂಗೋಪಣೆ ಹಾಗೂ ಹೈನುಗಾರಿಕೆ
* ವಿಜಯ್ ವಾಡೆಟ್ಟಿವಾರ್: ಒಬಿಸಿ
* ಅಮಿತ್ ದೇಶಮುಖ್: ವೈದ್ಯಕೀಯ ಶಿಕ್ಷಣ
* ಉದಯ್ ಸಮಾಂತ್: ಉನ್ನತ ಹಾಗೂ ತಾಂತ್ರಿಕ ಶಿಕ್ಷಣ
* ದಾದಾ ಭುಸೆ: ಕೃಷಿ
* ಸಂಜಯ್ ರಾಥೋಡ್: ಅರಣ್ಯ, ಪುನರ್ವಸತಿ
* ಗುಲಾಬ್ ರಾವ್ ಪಾಟೀಲ್ : ಜಲ ಪೂರೈಕೆ ಹಾಗೂ ಒಳ ಚರಂಡಿ ವ್ಯವಸ್ಥೆ
* ಕೆಸಿ ಪಾಡ್ವಿ: ಬುಡಕಟ್ಟು ಜನಾಂಗ
* ಸಂದೀಪನ್ ಭುಮಾರೆ: ಉದ್ಯೋಗ ಖಾತ್ರಿ ಯೋಜನೆ
* ಬಾಳಾಸಾಹೇಬ್ ಪಾಟೀಲ್: ಸಹಕಾರ, ಮಾರುಕಟ್ಟೆ
* ಅನಿಲ್ ಪರಾಬ್: ಸಾರಿಗೆ, ಸಂಸದೀಯ ವ್ಯವಹಾರ
* ಅಸ್ಲಾಂ ಶೇಖ್: ಜವಳಿ, ಬಂದರು
* ಶಂಕರ್ ರಾವ್ ಗಡಖ್: ಜಲ ಸಂರಕ್ಷಣೆ
* ಧನಂಜಯ್ ಮುಂಡೆ: ಸಾಮಾಜಿಕ ನ್ಯಾಯ

English summary
Maharashtra Governor Bhagat Singh Koshyari has approved the allocation of portfolios as proposed by Chief Minister Uddhav Thackeray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X