'ಮಹಾ' ರಾಜಕೀಯ ಬಿಕ್ಕಟ್ಟು: ನಿಜವಾಯ್ತಾ ಕಂಗನಾ ನುಡಿದ ಭವಿಷ್ಯ?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ನಡುವೆ ಬಾಲಿವುಡ್ ವಿವಾದಾತ್ಮಕ ನಟಿ ಕಂಗನಾ ರಣಾವತ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಗ್ಗೆ ಕಂಗನಾ ನುಡಿದ ಭವಿಷ್ಯ ನಿಜವಾಯ್ತಾ ಎನ್ನುವ ಪ್ರಶ್ನೆ ಮೂಡಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು ತಮ್ಮ ಕುಟುಂಬ ನಿವಾಸ ಮಾತೋಶ್ರೀಗೆ ಮರಳಿದರು. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹಳೆಯ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ಕಂಗನಾ, "ಉದ್ಧವ್ ಠಾಕ್ರೆ, ನಿಮಗೆ ಏನನಿಸುತ್ತದೆ? ಫಿಲ್ಮ್ ಮಾಫಿಯಾಗಳೊಂದಿಗೆ ಶಾಮೀಲಾಗಿ ನನ್ನ ಮನೆಯನ್ನು ಕೆಡವುವ ಮೂಲಕ ನೀವು ದೊಡ್ಡ ಸೇಡು ತೀರಿಸಿಕೊಂಡಿದ್ದೀರಾ? ಇಂದು ನನ್ನ ಮನೆಯನ್ನು ಕೆಡವಲಾಗಿದೆ, ಇದು ನಾಳೆ ನಿಮ್ಮ ಹೆಮ್ಮೆಯನ್ನು ನಾಶಪಡಿಸುತ್ತದೆ. ಇದು ಎಲ್ಲಾ ಸಮಯದಲ್ಲೂ ನೆನಪಿಡಿ" ಎಂದಿದ್ದಾರೆ.

ಟ್ವಿಟ್ಟರ್ ಬಳಕೆದಾರರು ಕಂಗನಾ ರಣಾವತ್ ಅವರ ಹಳೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. 2020 ರಲ್ಲಿ ಕಂಗನಾ ಅವರ ಕಚೇರಿಯನ್ನು ಬೃಹತ್ ‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೆಲಸಮಗೊಳಿಸಿದಾಗ ಬಾಲಿವುಡ್ ನಟಿ ಕಂಗನಾ ಉದ್ಧವ್ ಠಾಕ್ರೆ ಅವರ ಭವಿಷ್ಯವನ್ನು ನುಡಿದಿದದರು.

Maharashtra Political Crisis: Kanganas prediction about Chief Minister Uddhav Thackeray

ಕಂಗನಾ ರಣಾವತ್ ಅವರ ಮತ್ತೊಂದು ಹಳೆಯ ವಿಡಿಯೊ ಸದ್ದು ಮಾಡುತ್ತಿದೆ, ಇದರಲ್ಲಿ ವಿವಾದಾತ್ಮಕ ನಟಿ ಹೀಗೆ ಹೇಳಿದ್ದಾರೆ- "ಹೆಣ್ಣನ್ನು ಅವಮಾನಿಸುವವನು ಅವನತಿ ಹೊಂದುತ್ತಾನೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ರಾವಣ ಸೀತೆಯನ್ನು ಅವಮಾನಿಸಿದ, ಕೌರವರು ದ್ರೌಪದಿಯನ್ನು ಅವಮಾನಿಸಿದರು. ನಾನು ಆ ಮಹಿಳೆಯರಿಗೆ ಎಲ್ಲಿಯೂ ಹತ್ತಿರವಾಗಿಲ್ಲ. ಆದರೆ ನಾನು ಕೂಡ ಒಬ್ಬ ಮಹಿಳೆ ಮತ್ತು ನಾನು ನನ್ನ ಸಮಗ್ರತೆಯನ್ನು ರಕ್ಷಿಸಿದ್ದೇನೆ, ನಾನು ಯಾರನ್ನೂ ನೋಯಿಸಿಲ್ಲ. ಆದರೂ ನೀವು ಮಹಿಳೆಯನ್ನು ಅಗೌರವಿಸಿದ್ದೀರಿ. ಹೀಗಾಗಿ ನಿಮ್ಮ ನಾಶವು ಗ್ಯಾರಂಟಿ ಎಂದು ನಾನು ನಂಬುತ್ತೇನೆ'' ಎಂದಿದ್ದರು.

Maharashtra Political Crisis: Kanganas prediction about Chief Minister Uddhav Thackeray

ತಮ್ಮದೇ ಪಕ್ಷದ ಸದಸ್ಯರಿಂದ ಬಂಡಾಯ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಬುಧವಾರ ಸಿಎಂ ನಿವಾಸದಿಂದ ಹೊರಬಂದು ತಮ್ಮ ಕುಟುಂಬದ ನಿವಾಸ ಮಾತೋಶ್ರೀಗೆ ತೆರಳಿದರು. ಬುಧವಾರದ ನೇರ ಭಾಷಣದಲ್ಲಿ ಉದ್ಧವ್, ತಮ್ಮ ಪಕ್ಷವು ಹಿಂದುತ್ವದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಗೆ ಹಾತೊರೆಯುವುದಿಲ್ಲ ಮತ್ತು ಇನ್ನೊಬ್ಬ ಶಿವಸೈನಿಕರಿಗೆ ಸಂತೋಷದಿಂದ ದಾರಿ ಮಾಡಿಕೊಡುವುದಾಗಿ ಹೇಳಿದರು. ಜೊತೆಗೆ ಉದ್ಧವ್ ಅವರು ತಮ್ಮ ರಾಜೀನಾಮೆ ಪತ್ರ ಸಿದ್ಧವಾಗಿದೆ ಮತ್ತು ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರಾದ ಆದಿತ್ಯ ಠಾಕ್ರೆ ಮತ್ತು ತೇಜಸ್ ಠಾಕ್ರೆ ಅವರೊಂದಿಗೆ ಸಂಜೆ ಸಿಎಂ ಅಧಿಕೃತ ನಿವಾಸದಿಂದ ತೆರಳುವುದಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+