ಉರಾನ್ ಬಳಿ ಕಂಡ ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ

Posted By:
Subscribe to Oneindia Kannada

ಮುಂಬೈ, ಸೆ. 23: ಇಲ್ಲಿನ ರಾಜ್ ಘಡ್ ನ ಉರಾನ್ ಸಮುದ್ರ ತೀರದ ಸಮೀಪ ಗುರುವಾರ ಕಾಣಿಸಿಕೊಂಡ ಶಂಕಿತ ಉಗ್ರರಿಗಾಗಿ ತೀವ್ರ ಶೋಧ ಕಾರ್ಯ ಆರಂಭವಾಗಿದೆ. ಮಕ್ಕಳು ನೀಡಿದ ಮಾಹಿತಿ ಆಧಾರಿಸಿ ಶಂಕಿತ ಉಗ್ರರ ರೇಖಾ ಚಿತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ನಾಲ್ವರು ವ್ಯಕ್ತಿಗಳು ಗನ್ ಗಳೊಂದಿಗೆ ಓಡಾಡುತ್ತಿರುವುದನ್ನು ಕಂಡಿದ್ದಾಗಿ ಶಾಲಾ ಮಕ್ಕಳು ಗುರುವಾರ ವರದಿ ಮಾಡಿದ್ದಾರೆ. ತಕ್ಷಣವೇ ಮುಂಬೈನಲ್ಲಿ ನೌಕಾದಳ ಹೈಅಲರ್ಟ್ ಘೋಷಿಸಿತ್ತು.. 26/11 ಮಾದರಿ ದಾಳಿಯ ಶಂಕೆ ವ್ಯಕ್ತವಾಗಿತ್ತು.

Maharashtra on alert as search for suspected terrorsits continues

ಮುಂಬೈ ಬಂದರು ಪ್ರದೇಶದ ಉರಾನ್ ನಲ್ಲಿ ನಾಲ್ವರು ವ್ಯಕ್ತಿಗಳು ಕಪ್ಪು ಬಣ್ಣದ ದಿರಿಸು ತೊಟ್ಟು ಮುಖವನ್ನು ಮುಚ್ಚಿಕೊಂಡಿದ್ದರು. ಎಲ್ಲರ ಬಳಿ ಎಕೆ 47 ಮಾದರಿ ಗನ್ ಗಳಿತ್ತು. ತೀರ ಪ್ರದೇಶದಲ್ಲಿ ಓಡಾಡುತ್ತಿರುವ ಬಗ್ಗೆ ಶಾಲಾ ಮಕ್ಕಳು ಶಂಕೆ ವ್ಯಕ್ತಪಡಿಸಿ ಮಾಹಿತಿ ನೀಡಿದ್ದರು.

ಮುಂಬೈ ನಗರದಲ್ಲಿ ಕಟ್ಟೆಚ್ಚರ ವಿಧಿಸಲಾಗಿದ್ದು, ಶಂಕಿತರ ರೇಖಾ ಚಿತ್ರ ಎಲ್ಲೆಡೆ ರವಾನಿಸಲಾಗಿದೆ. ಶಂಕಿತ ಉಗ್ರರ ನುಸುಳುವಿಕೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿದೆ. ಐಎನ್ಎಸ್ ಅಭಿಮನ್ಯು ಬಳಿ ಇರುವ ಶಸ್ತ್ರಾಗಾರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಮಹಾರಾಷ್ಟ್ರ ಹಾಗೂ ಗುಜರಾತಿನಲ್ಲೂ ಹೈ ಅಲರ್ಟ್ ಜಾರಿಯಲ್ಲಿದೆ. ಪಶ್ಚಿಮ ವಲಯದ ಕಮ್ಯಾಂಡ್ ಗಳು ನವಿ ಮುಂಬೈ, ರಾಯ್ ಗಢ, ಮುಂಭೈ, ಥಾಣೆಯಲ್ಲಿ ಹೆಚ್ಚಿನ ತಪಾಸಣೆ ನಡೆಸಿದ್ದಾರೆ. ಭಾರತೀಯ ಜಲ ಸೇನೆ, ಕೋಸ್ಟ್ ಗಾರ್ಡ್, ಮಹಾರಾಷ್ಟ್ರ ಪೊಲೀಸ್, ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಜಂಟಿ ಶೋಧನಾ ಕಾರ್ಯ ಜಾರಿಯಲ್ಲಿದೆ ಎಂದು ಜಲಸೇನೆ ವಕ್ತಾರರು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Maharashtra on high alert
English summary
Search operations continue around Uran, Maharashtra after two schoolchildren reported spotting four men dressed in black carrying guns on Thursday.
Please Wait while comments are loading...