ಬಾಲಕಿ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದ ಮುಂಬೈ ಕನ್ನಡಿಗ ಪತ್ರಕರ್ತರು
ಮುಂಬೈ, ಅಕ್ಟೋಬರ್, 06 : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿಯ ಪುಟ್ಟ ಬಾಲಕಿ ದಿತಿಯಾ ಬಳಂಜಳ ನೋವಿಗೆ ಸ್ಪಂದಿಸಿದ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತ ಸಂಘ ಅಕ್ಟೋಬರ್ 06ರ ಮಂಗಳವಾರದಂದು ಕಾರ್ಯನಿರತ ಪತ್ರಕರ್ತರ ಕಚೇರಿಯಲ್ಲಿ ಆಕೆಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ ನೀಡಿದೆ.
ಕನ್ನಡಿಗ ಪತ್ರಕರ್ತ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಮತ್ತು ಸಂಘದ ಭವನ ಸಮಿತಿ ಕಾರ್ಯಾಧ್ಯಕ್ಷ ಶಿವ ಮೂಡಿಗೆರೆ ಉಪಸ್ಥಿತಿಯಲ್ಲಿ ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಪುತ್ರಿ ದಿತಿಯಾಳಿಗೆ 1,11,111 ರೂ ಹಸ್ತಾಂತರಿಸಿ ಮಾನವೀಯತೆ ಮೆರೆದರು.[ಐಎಸ್ಐಎಸ್ ಸೇರಿದ ಕೇರಳದ ಪತ್ರಕರ್ತ?]

ಮನೋಹರ್ ಬಳಂಜ ಅವರ ಕೋರಿಕೆಯ ಮೇರೆಗೆ ಕನ್ನಡಿಗ ಪತ್ರಕರ್ತ ಸಂಘದ ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ವಾವರು ಮುಂತಾದ ದಾನಿಗಳು ಮತ್ತು ಸಂಸ್ಥೆಗಳಿಂದ ಈ ಆರೋಗ್ಯ ನಿಧಿಯನ್ನು ಸಂಗ್ರಹಿಸಿದ್ದು ಆಕೆಯ ಉತ್ತಮ ಆರೋಗ್ಯಕ್ಕೆ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ದಿತಿಯಾ ಗೆ ಸಹಾಯ ಮಾಡಿದ ಚಂದ್ರಶೇಖರ ಪಾಲೆತ್ತಾಡಿ, ರೋನ್ಸ್ ಬಂಟ್ವಾಳ್ , ಪ್ರೇಮ್ ಬಿ.ಶೆಟ್ಟಿ ಮುಂಡ್ಕೂರು, ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಇನ್ನು ಹಲವಾರು ಮಹನೀಯರು ಪಾಲ್ಗೊಂಡಿದ್ದರು.












Click it and Unblock the Notifications