ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಮುಗಿತು ಇನ್ನು ಗೋವಾದಲ್ಲಿ ಪವಾಡ: ಸಂಜಯ್ ರಾವುತ್

|
Google Oneindia Kannada News

ಮುಂಬೈ, ನವೆಂಬರ್ 29: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಶಿವಸೇನೆಯ ಉದ್ಧವ್ ಠಾಕ್ರೆ ಈ ಮೈತ್ರಿಕೂಟದ ಮುಖ್ಯಮಂತ್ರಿಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ಮತ್ತೊಂದು ರಾಜ್ಯದಲ್ಲಿ ಪವಾಡ ನಡೆಯಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

ಹೌದು, ಮಹಾರಾಷ್ಟ್ರದ ನಂತರ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕೆಡವಲು ಶಿವಸೇನೆಯು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಲಿದೆ ಎಂದು ತಿಳಿಸಿದ್ದಾರೆ. ಗೋವಾ ರಾಜ್ಯದಲ್ಲಿನ ಹೊಸ ರಾಜಕೀಯ ರಂಗ ಕುರಿತು ಮಾತನಾಡಿದ ರಾವುತ್, ಗೋವಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿಯ ನಾಯಕ ವಿಜಯ್ ಸರ್ದೇಸಾಯಿ ನಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

ಮಹದಾಯಿ ವಿವಾದ; ಗೋವಾ ಸಿಎಂ ಸ್ಫೋಟಕ ಹೇಳಿಕೆಮಹದಾಯಿ ವಿವಾದ; ಗೋವಾ ಸಿಎಂ ಸ್ಫೋಟಕ ಹೇಳಿಕೆ

ಮಹಾರಾಷ್ಟ್ರದಲ್ಲಿ ನಡೆದಂತೆಯೇ ಗೋವಾದಲ್ಲಿಯೂ ಪವಾಡ ಸಂಭವಿಸಿದ್ದು, ನಂತರ ಇತರ ರಾಜ್ಯಗಳತ್ತ ಮುಖಮಾಡುತ್ತೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇಡೀ ದೇಶದಾದ್ಯಂತ ಬಿಜೆಪಿಯೇತರ ರಾಜಕೀಯ ರಂಗ ಸ್ಥಾಪನೆಯ ಚಿಂತನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

Maharashtra Is Over, Miracle In Goa: Sanjay Raut

ನಾನು ಸಂಜಯ್ ರಾವುತ್ ರನ್ನು ನಾನು ಭೇಡಿಯಾಗಲಿದ್ದೇನೆ, ಮಹಾರಾಷ್ಟ್ರದಲ್ಲಿ ಆದಂತೆ ಗೋವಾದಲ್ಲಿಯೂ ಆಗಲಿ ಎಂದು ಬಯಸುತ್ತೇನೆ, ವಿಪಕ್ಷಗಳು ಒಂದಾಗಬೇಕು, ಬಿಜೆಪಿ ಪಕ್ಷವನ್ನು ಸರ್ಕಾರದಿಂದ ಹೊರಗಿಡಬೇಕು ಎಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತ್ತು, ಆದರೂ ಬಿಜೆಪಿ ಸರ್ಕಾರ ರಚನೆಗೆ ಗೋವಾ ಫಾರ್ವರ್ಡ್ ಪಾರ್ಟಿ ಸಹಕಾರ ಕೊಟ್ಟಿತ್ತು, ಕಾಂಗ್ರೆಸ್ 17 ಸ್ಥಾನ ಗಳಿಸಿದ್ದರೆ, ಬಿಜೆಪಿ 13 ಸ್ಥಾನಗಳಲ್ಲಿ ಜಯ ಗಳಿಸಿತ್ತು, ಬಿಜೆಪಿ ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತ್ತು.

ಛತ್ರಪತಿ ಶಿವಾಜಿ ಸಮಾಧಿ ಇರುವ ಪ್ರದೇಶ ಅಭಿವೃದ್ಧಿಗೆ 20 ಕೋಟಿಛತ್ರಪತಿ ಶಿವಾಜಿ ಸಮಾಧಿ ಇರುವ ಪ್ರದೇಶ ಅಭಿವೃದ್ಧಿಗೆ 20 ಕೋಟಿ

ಸದ್ಯ ಗೋವಾದಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ 27 ಸದಸ್ಯರನ್ನು ಬಿಜೆಪಿ ಹೊಂದಿದ್ದು, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಶಿವಸೇನೆಯ ನಡುವಿನ ಮೈತ್ರಿಯ ಯಾವುದೇ ಹೊಡೆತಕ್ಕೆ ಸಿಲುಕುವುದಿಲ್ಲ.

English summary
In Maharashtra Shiv Sena-NCP-Congress Parties Formed An Alliance And Formed a Government. Shiv Senas Uddhav Thackeray Is The Chief Minister Of The Alliance. Shiv Sena Leader Sanjay Raut Said The Miracle Would Take Place In Another BJP Ruled State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X