• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ-ಚೀನಾ ಗಡಿ ವಿವಾದದ ಮಧ್ಯೆ ಚೀನಾದ ಜತೆ ಮಹಾರಾಷ್ಟ್ರ ಒಪ್ಪಂದ

|

ಮುಂಬೈ, ಜೂನ್ 18: ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಮುಖಾಮುಖಿ ಏರ್ಪಟ್ಟಿದೆ ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಚೀನಾದ ಜೊತೆ 5 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಚೀನಾ ಮೂಲದ ಇತ್ತೀಚೆಗೆ ವಿಶ್ವದ 12 ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು. ಈ ಪೈಕಿ ಚೀನಾ ಮೂಲದ ಮೂರು ಸಂಸ್ಥೆಗಳು ಕೂಡ ಸೇರಿವೆ.

ಚೀನಾದ ಈ ಮೂರು ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಕೋಟಿ ರೂ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದೆ. ಹೆಂಗ್ಲಿ ಎಂಜಿನಿಯರಿಂಗ್, ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್‌, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಜೆ.ವಿ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಮೋದಿ ಮೌನವೇಕೆ? ಏಕೆ ಅಡಗಿಕೊಂಡಿದ್ದಾರೆ? ಪಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15,16 ರಂದು ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, 43 ಮಂದಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ.

ಉದ್ಧವ್ ಠಾಕ್ರೆ ಚೀನಾದ ಜೊತೆ ಒಪ್ಪಂದಕ್ಕೆ ಸಹಿ

ಉದ್ಧವ್ ಠಾಕ್ರೆ ಚೀನಾದ ಜೊತೆ ಒಪ್ಪಂದಕ್ಕೆ ಸಹಿ

GWM ನ ಭಾರತ ವಲಯದ ಅಧ್ಯಕ್ಷ ಜೇಮ್ಸ್ ಪಾರ್ಕಿಂಗ್, ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್ ಯಾಂಗ್, ಭಾರತದಲ್ಲಿನ ಚೀನಾದ ರಾಯಭಾರಿ ಸನ್ ವೀಡಾಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮಹಾರಾಷ್ಟ್ರದಲ್ಲಿ ಎಸ್‌ಯುವಿ ತಯಾರಿಕಾ ಘಟಕ

ಮಹಾರಾಷ್ಟ್ರದಲ್ಲಿ ಎಸ್‌ಯುವಿ ತಯಾರಿಕಾ ಘಟಕ

ತಲೇಗಾಂವ್ ಘಟಕದಲ್ಲಿ ಈಗಾಗಲೇ ಲಾಜಿಸ್ಟಿಕ್ಸ್ ವಿತರಣಾ ಕೇಂದ್ರ, ತರಬೇತಿ ಕೇಂದ್ರ, ಯೋಜನಾ ನಿರ್ವಹಣಾ ಕಟ್ಟಡ, ಆಡಳಿತ ಕಚೇರಿ ಕಟ್ಟಡ ಮತ್ತು ಸಾರ್ವಜನಿಕ ಸೌಲಭ್ಯ ಕೇಂದ್ರದಂತಹ ಸೌಲಭ್ಯಗಳಿವೆ. ಕಳೆದ ವರ್ಷ ಹೆಕ್ಟರ್ ಎಸ್‌ಯುವಿ ಮೂಲಕ ಪಾದಾರ್ಪಣೆ ಮಾಡಿದ ಎಸ್‌ಐಸಿ ಒಡೆತನದ ಎಂಜಿ ಮೋಟಾರ್ ನಂತರ, ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಎರಡನೇ ಪ್ರಮುಖ ಚೀನಾದ ಆಟೋ ಕಂಪನಿ GWM ಆಗಿದೆ. ಒಪ್ಪಂದದ ಪ್ರಕಾರ ಮಹಾರಾಷ್ಟ್ರದ ತಲೇಗಾಂವ್‌ನಲ್ಲಿ ಎಸ್‌ಯುವಿ ತಯಾರಿಕ ಘಟಕ ತಲೆ ಎತ್ತಲಿದೆ. ಇದು ಸುಮಾರು 3,000 ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತದೆ ಎನ್ನಲಾಗಿದೆ. ಇದು 3,770 ಕೋಟಿ ರೂ ಯೋಜನೆ ಇದಾಗಿದೆ.

ಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರ

ಹೆಂಗ್ಲಿ ಸಂಸ್ಥೆಯಿಂದ 250 ಕೋಟಿ ರೂ ಹೂಡಿಕೆ

ಹೆಂಗ್ಲಿ ಸಂಸ್ಥೆಯಿಂದ 250 ಕೋಟಿ ರೂ ಹೂಡಿಕೆ

ಈ ಪೈಕಿ ಹೆಂಗ್ಲಿ ಎಂಜಿನಿಯರಿಂಗ್ ಸಂಸ್ಥೆ ಸುಮಾರು 250 ಕೋಟಿ ರೂಗಳನ್ನು ಹೂಡಿಕೆ ಮಾಡುತ್ತಿದ್ದು, ಪಿಎಂಐ ಸಂಸ್ಥೆ ಆಟೋ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿ ರೂ ಹೂಡಿಕೆ ಮಾಡಲಿದೆ. ಇನ್ನು ಎಸ್‌ಯುವಿ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಗ್ರೇಟ್‌ವಾಲ್ ಮೋಟಾರ್ಸ್ (GWM) ಮಂಗಳವಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ದೊಡ್ಡ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಇತರೆ ದೇಶಗಳೂ ಹೂಡಿಕೆ ಮಾಡಿವೆ

ಇತರೆ ದೇಶಗಳೂ ಹೂಡಿಕೆ ಮಾಡಿವೆ

ಕೇವಲ ಚೀನಾ ಮಾತ್ರವಲ್ಲದೇ ಅಮೆರಿಕ, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಸಂಸ್ಥೆಗಳೂ ಮಹಾರಾಷ್ಟ್ರದಲ್ಲಿ ಆಟೋಮೊಬೈಲ್, ಲಾಜಿಸ್ಟಿಕ್ಸ್, ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ಮೊಬೈಲ್ ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ.

English summary
Three Chinese firms are among the 12 companies from different countries with which the Maharashtra government has signed MoUs collectively worth Rs 16,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X