ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದ ಡಿಸಿಎಂ ಅಜಿತ್ ಪವಾರ್

ಮುಂಬೈ, ನವೆಂಬರ್ 24: ಮಹಾರಾಷ್ಟ್ರದ ರಾಜಕೀಯ ಚಿತ್ರಣ ರಾತ್ರೋರಾತ್ರಿ ಉಲ್ಟಾ ಹೊಡೆದಿದೆ. ಗದ್ದುಗೆ ದಕ್ಕುತ್ತೆ ಎಂದುಕೊಂಡವರು ಬಾಯಿ ಬಾಯಿ ಬಡೆದುಕೊಳ್ಳುವಂತಾಗಿದೆ. ಕೇಂದ್ರ ಬಿಜೆಪಿ ನಾಯಕರು ಕೊಟ್ಟ ಮಾಸ್ಟರ್ ಸ್ಟ್ರೋಕ್ ಗೆ ಮಿತ್ರಪಕ್ಷಗಳೇ ಪತರ್ ಗುಟ್ಟಿವೆ.

ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳೆಲ್ಲ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಅಂತಾ ಸಾಲು ಸಾಲು ಸಭೆಗಳನ್ನು ನಡೆಸಿ ತಂತ್ರಗಳ ಮೇಲೆ ತಂತ್ರ ಹೆಣೆದರು. ಇನ್ನೇನು ಮೈತ್ರಿ ಸರ್ಕಾರ ರಚನೆ ಆಗಬೇಕು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಪಟ್ಟಾಭಿಷೇಕ ಆಗಬೇಕು. ಅಷ್ಟರಲ್ಲೇ ಎಲ್ಲವೂ ತಲೆ ಕೆಳಗಾಗಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂಡ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಪಿಯ ಅಜಿತ್ ಪವಾರ್ ಪ್ರಯಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 5.47ಕ್ಕೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದಿದ್ದು, ಅದಾಗಿ ಎರಡೇ ಗಂಟೆಗಳಲ್ಲಿ ಅಂದ್ರೆ 7.30 ಹೊತ್ತಿಗೆ ಆಗಲೇ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಅಜಿತ್ ಪವಾರ್ ಗೆ ಉಪಮುಖ್ಯಮಂತ್ರಿ ಸೀಟ್

ಅಜಿತ್ ಪವಾರ್ ಗೆ ಉಪಮುಖ್ಯಮಂತ್ರಿ ಸೀಟ್

ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡರೂ ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಗೆ ಉಪ ಮುಖ್ಯಮಂತ್ರಿ ಸ್ಥಾನ ಫಿಕ್ಸ್ ಎನ್ನಲಾಗಿತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಶಿವಸೇನೆ ಸಹವಾಸಕ್ಕೆ ಗುಡೈ ಬೈ ಹೇಳಿದ ಎನ್ ಸಿಪಿ ಮುಖಂಡ ಬಿಜೆಪಿ ಜೊತೆ ಕೈ ಜೋಡಿಸಿದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪದಗ್ರಹಣ ಮಾಡಿದರು.

ಶರದ್ ಪವಾರ್ ಅವರೇ ನಮ್ಮ ನಾಯಕರು!

ಶರದ್ ಪವಾರ್ ಅವರೇ ನಮ್ಮ ನಾಯಕರು!

ನಾನು ಎನ್ ಸಿಪಿಯಲ್ಲೇ ಮುಂದುವರಿಯಲಿದ್ದೇನೆ, ಶರದ್ ಪವಾರ್ ಅವರೇ ನಮ್ಮ ನಾಯಕರು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಒಂದಂಡೆ ಶರದ್ ಪವಾರ್ ಕಾಂಗ್ರೆಸ್-ಶಿವಸೇನೆ ಜೊತೆ ಮೈತ್ರಿಗೆ ಮಾತುಕತೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರವನ್ನೇ ರಚಿಸಿಯೇ ಬಿಟ್ಟಿರುವ ಅಜಿತ್ ಪವಾರ್, ಯಾವುದೇ ಕಾರಣಕ್ಕೂ ಎನ್ ಸಿಪಿಯಿಂದ ದೂರ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ-ಎನ್ ಸಿಪಿ ಮೈತ್ರಿ ಉದ್ದೇಶವೇ ಸ್ಥಿರ ಆಡಳಿತ

ಬಿಜೆಪಿ-ಎನ್ ಸಿಪಿ ಮೈತ್ರಿ ಉದ್ದೇಶವೇ ಸ್ಥಿರ ಆಡಳಿತ

ಬಿಜೆಪಿ ಹಾಗೂ ಎನ್ ಸಿಪಿ ಮೈತ್ರಿ ಮಾಡಿಕೊಂಡಿರುವ ಉದ್ದೇಶವೇ ಸ್ಥಿರ ಆಡಳಿತವಾಗಿದೆ. ರಾಜ್ಯದ ಜನರಿಗೆ ಸ್ಥಿರ ಆಡಳಿತ ನೀಡುವ ಉದ್ದೇಶದಿಂದಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗೋದಿಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತಾ ಆಡಳಿತ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ಅಜಿತ್ ಪವಾರ್ 'ನಮೋ' ನಮಃ

ಟ್ವಿಟ್ಟರ್ ನಲ್ಲಿ ಅಜಿತ್ ಪವಾರ್ 'ನಮೋ' ನಮಃ

ಇನ್ನು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದ್ದೇ ಆಗಿದ್ದು. ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಡಿಸಿಎಂ ಅಜಿತ್ ಪವಾರ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬಂತು. ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ನಾಯಕರೆಲ್ಲ ಶುಭಾಷಯ ಕೋರಿದರು. ಎಲ್ಲರಿಗೂ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್, ಧನ್ಯವಾದ ಅರ್ಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+