ಕೊರೊನಾ ಹಾಟ್ ಸ್ಪಾಟ್ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ವಿಸ್ತರಣೆ
ನವದೆಹಲಿ, ಮೇ 17: ದೇಶದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗಿರುವ ಹಾಟ್ ಸ್ಪಾಟ್ ಗಳ ಪೈಕಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲು ಉದ್ಧವ್ ಠಾಕ್ರೆ ಸರ್ಕಾರ ತೀರ್ಮಾನಿಸಿದೆ. ಮೇ 17ಕ್ಕೆ ಮೂರನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದೆ. ಆದರೆ, ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿನಾಯಿತಿಯಿಲ್ಲದೆ ಲಾಕ್ಡೌನ್ ಮೇ 31ರ ತನಕ ವಿಸ್ತರಣೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಮೇ 31ರವರೆಗೂ ವಿಸ್ತರಣೆ ಮಾಡುವ ಇಂಗಿತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್, ಸಚಿವರಾದ ಜಯಂತ್ ಪಾಟೀಲ್, ಏಕನಾಥ ಶಿಂಧೆ, ಸುಭಾಷ್ ದೇಸಾಯಿ, ಬಾಲಾಸಾಹೇಬ್ ಥೋರತ್ ಮತ್ತು ಅಶೋಕ್ ಚವಾಣ್ ಜೊತೆ ನಡೆದ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಮಹಾರಾಷ್ಟ್ರದಲ್ಲೇ ಅತ್ಯಧಿಕ ಸೋಂಕು ಪೀಡಿತರು: ಅಸಲಿ ಕಾರಣ ಏನು?
ಬೃಹನ್ ಮುಂಬೈ ಮಹಾನಗರ ಪಾಲಿಕೆ, ಪುಣೆ, ಸೋಲಾಪುರ, ಔರಂಗಬಾದ್, ಮಾಲೆಗಾಂವ್ ಸೇರಿದಂತೆ ರಾಜ್ಯದಲ್ಲಿ ಗುರುತಿಸಲಾಗಿರುವ ಹಾಟ್‌ಸ್ಪಾಟ್‌ಗಳಲ್ಲಿ ಕಠಿಣ ಲಾಕ್‌ಡೌನ್ ಮುಂದುವರೆಸಲು ಸೂಚನೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತ್ಯಧಿಕ ಪಾಸಿಟಿವ್ ಪ್ರಕರಣಗಳು: ಮಹಾರಾಷ್ಟ್ರದಲ್ಲಿ ಭಾನುವಾರ (ಮೇ 17) ಈ ಸಮಯಕ್ಕೆ 30,706 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 1135 ಮಂದಿ ಮೃತಪಟ್ಟಿದ್ದಾರೆ. 1206 ಪೊಲೀಸರು ಕೊವಿಡ್ 19 ಪಾಸಿಟಿವ್ ಎಂದು ಬಂದಿದೆ. ಭಾರತದಲ್ಲಿ ಒಟ್ಟು 90,927 ಪ್ರಕರಣದಾಖಲಾಗಿದ್ದು, 2872 ಮಂದಿ ಮೃತರಾಗಿದ್ದರೆ, 35,109 ಮಂದಿ ಗುಣಮುಖರಾಗಿದ್ದಾರೆ.
ಪಿಪಿಇ ಕಿಟ್ಗಳ ಉತ್ಪಾದನೆಗಾಗಿ ದಾದ್ರಾ ಘಟಕ ಪುನರಾರಂಭಿಸಿದ ಫಿಲಾಟೆಕ್ಸ್
ಈ ನಡುವೆ ಮಹಾರಾಷ್ಟ್ರದ ಜೈಲಿನಿಂದ 7200 ಕೈದಿಗಳನ್ನು ತಾತ್ಕಾಲಿಕ ಜಾಮೀನು ಅಥವಾ ಪೆರೋಲ್ ಮೇಲೆ ಹೊರಕ್ಕೆ ಬಿಡಲಾಗಿದೆ. ಸುಮಾರು 10,000ಕ್ಕೂ ಅಧಿಕ ಮಂದಿ ಜೈಲಿನಲ್ಲಿದ್ದಾರೆ. ಹೀಗಾಗಿ, ಜೈಲಿನಲ್ಲಿ ಜನದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಲು ಈ ಕ್ರಮ ಅನುಸರಿಸಲಾಗಿದೆ.