ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 4ರಂದು ಏಕನಾಥ್ ಶಿಂಧೆಗೆ ವಿಶ್ವಾಸಮತ ಪರೀಕ್ಷೆ; ಭಿನ್ನಮತೀಯರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಬಣ

|
Google Oneindia Kannada News

ನವದೆಹಲಿ, ಜುಲೈ 1: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಲೈ 4, ಸೋಮವಾರದಂದು ಬಹುಮತ ಸಾಬೀತುಪಡಿಸಲು ಸೂಚಿಸಲಾಗಿದೆ. ಇದರೊಂದಿಗೆ ಏಕನಾಥ್ ಶಿಂಧೆಗೆ ಬಹುಮತ ಸಾಬೀತು ಮಾಡಲು ಮೂರು ದಿನ ಮಾತ್ರ ಕಾಲಾವಕಾಶ ಇದೆ.

ಇದೇ ವೇಳೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದವರು ಶುಕ್ರವಾರ ಏಕನಾಥ್ ಶಿಂಧೆ ಸೇರಿದಂತೆ 16 ಭಿನ್ನಮತೀಯ ಶಾಸಕರನ್ನು ವಜಾಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಶಾಸಕರನ್ನು ಅನರ್ಹತೆಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಬಣದವರೂ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರವೇ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ.

ಒಲ್ಲದ ಮನಸ್ಸಿನಲ್ಲೇ ಡಿಸಿಎಂ ಹುದ್ದೆ ಒಪ್ಪಿಕೊಂಡರೇ ಮಾಜಿ ಸಿಎಂ ದೇವೇಂದ್ರ?ಒಲ್ಲದ ಮನಸ್ಸಿನಲ್ಲೇ ಡಿಸಿಎಂ ಹುದ್ದೆ ಒಪ್ಪಿಕೊಂಡರೇ ಮಾಜಿ ಸಿಎಂ ದೇವೇಂದ್ರ?

ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದು ಇದೀಗ ಬಿಜೆಪಿ ಜೊತೆ ಸರಕಾರ ರಚಿಸಿರುವ ಏಕನಾಥ್ ಶಿಂದೆ ಬಣದಲ್ಲಿ ೫೦ ಶಾಸಕರಿದ್ದಾರೆ. ಬಿಜೆಪಿ 106 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾದ 145 ಸ್ಥಾನಗಳು ಶಿಂಧೆ ಸರಕಾರದ ಬಳಿ ಇದೆ.

ಆದರೆ, ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನಾ ಭಿನ್ನಮತೀಯರನ್ನು ಅನರ್ಹಗೊಳಿಸಿದರೆ ಆಗ ಹೊಸ ಸಾಧ್ಯತೆ ತೆರೆದುಕೊಳ್ಳಬಹುದು. ಆದರೆ, ಶಿವಸೇನೆಯ 55 ಶಾಸಕರಲ್ಲಿ 39 ಮಂದಿ ತಮ್ಮ ಜೊತೆ ಇದ್ದಾರೆ. ಆದ್ರಿಂದ ತಮ್ಮದೇ ಶಿವಸೇನೆಯ ಅಧಿಕೃತ ಬಣ ಎಂಬುದು ಏಕನಾಥ್ ಶಿಂಧೆ ವಾದ. ಒಂದು ವೇಳೆ ಶಿಂಧೆ ಬಣಕ್ಕೆ ಮಾನ್ಯತೆ ಸಿಕ್ಕರೆ ಉದ್ಧವ್ ಠಾಕ್ರೆ ಮತ್ತವರ ಬೆಂಬಲಿಗರು ಬೇರೆ ಪಕ್ಷ ನಿರ್ಮಾಣ ಮಾಡಿಕೊಳ್ಳಬೇಕಾಗಬಹುದು.

Maharashtra CM Eknath Shinde Told To Prove Majority on July 4th

ಮಹಾ ಡ್ರಾಮಾ
ಶಿವಸೇನಾ ಪಕ್ಷದೊಳಗೆ ಏಕನಾಥ್ ಶಿಂಧೆ ಬಂಡಾಯ ಎದ್ದು 50ಕ್ಕೂ ಹೆಚ್ಚು ಶಾಸಕರು ಅವರ ಬಳಿ ಸೇರಿಕೊಂಡಾಗ ಉದ್ಧವ್ ಠಾಕ್ರೆ ಅಧಿಕಾರದಿಂದ ಕೆಳಗಿಳಿಯದೇ ಬೇರೆ ವಿಧಿ ಇರಲಿಲ್ಲ. ಬಹುಮತ ಪರೀಕ್ಷೆ ನಡೆಯಬೇಕೆಂದು ರಾಜ್ಯಪಾಲರು ಸೂಚಿಸಿದ ಬೆನ್ನಲ್ಲೇ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆ ಬಳಿಕ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಹಾಗು ಬಿಜೆಪಿ ವರಿಷ್ಠರ ಮಧ್ಯೆ ಮಾತುಕತೆಯಾಯಿತು. ಫಡ್ನವಿಸ್ ಸಿಎಂ ಎಂದೂ ಶಿಂಧೆ ಡಿಸಿಎಂ ಎಂದೂ ನಿಶ್ಚಯವಾಗಿತ್ತು. ಆದರೆ, ದಿಢೀರನೇ ಬದಲಾದ ನಿರ್ಧಾರದಲ್ಲಿ ಏಕನಾಥ್ ಶಿಂಧೆ ಸಿಎಂ ಆಗಿ ಘೋಷಿತರಾದರು. ಫಡ್ನವಿಸ್ ಡಿಸಿಎಂ ಆಗುವಂತೆ ಜೆಪಿ ನಡ್ಡಾ ಸೂಚಿಸಿ ಒಪ್ಪಿಸಿದರು.

ಮಹಾರಾಷ್ಟ್ರ ಸಿಎಂ, ಡಿಸಿಎಂಗೆ ಉದ್ಧವ್ ಠಾಕ್ರೆ ಟ್ವೀಟ್ ಶುಭಾಶಯಮಹಾರಾಷ್ಟ್ರ ಸಿಎಂ, ಡಿಸಿಎಂಗೆ ಉದ್ಧವ್ ಠಾಕ್ರೆ ಟ್ವೀಟ್ ಶುಭಾಶಯ

ನಿನ್ನೆ ಸಂಜೆಯ ನಂತರ ಇಬ್ಬರೂ ಕೂಡ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು. ಆ ಬಳಿಕ ಸಂಪುಟ ಸಭೆಯಲ್ಲಿ ಆರೆ ಅರಣ್ಯ ಪ್ರದೇಶದಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮೊದಲು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಬಿಜೆಪಿ ರಣತಂತ್ರ
ಠಾಕ್ರೆ ಕುಟುಂಬಕ್ಕೆ ಸೇರದ ಒಬ್ಬ ವ್ಯಕ್ತಿಯನ್ನು ಸಿಎಂ ಆಗಿ ಮಾಡುವ ಮೂಲಕ ಬಿಜೆಪಿ ಆ ಕುಟುಂಬಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಠಾಕ್ರೆ ಕುಟುಂಬ ಶಿವಸೇನಾ ಪಕ್ಷದಲ್ಲಿ ಸಂಪೂರ್ಣ ಹಿಡಿತ ಹೊಂದುವುದನ್ನು ತಪ್ಪಿಸಲು ಬಿಜೆಪಿ ನಡೆಸಿದ ಪ್ಲಾನ್ ಇದು.

ಹಾಗೆಯೇ, ಬಿಜೆಪಿ ತಾನು ಅಧಿಕಾರದ ವ್ಯಾಮೋಹ ಹೊಂದಿಲ್ಲ ಎಂಬುದನ್ನು ಬಿಂಬಿಸುವ ಪ್ರಯತ್ನವೂ ಇದಾಗಿದೆ. ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ಸರಕಾರ ರಚಿಸಲು ಯತ್ನಿಸಿದಾಗ ಅನೇಕರು ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂದು ಟೀಕಿಸಿದ್ದರು. ಆದರೆ, ಈಗ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ಬಿಜೆಪಿ ತನಗೆ ಅಧಿಕಾರ ಮಾತ್ರವೇ ಮುಖ್ಯವಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಈಗ ಸುಪ್ರೀಂಕೋರ್ಟ್ ಸೋಮವಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಠಾಕ್ರೆ ಬಣದ ಪರ ಕಪಿಲ್ ಸಿಬಲ್ ವಕಾಲತು ವಹಿಸಿದ್ಧಾರೆ. ತುರ್ತು ವಿಚಾರಣೆ ನಡೆಸಬೇಕೆಂದು ಸಿಬಲ್ ಕೋರಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
New Maharashtra Chief Minister Eknath Shinde is asked to prove majority on Monday. This comes after Uddhav Thackeray faction of Shiv Sena approached Supreme Court to dismiss rebel MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X