ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ಮಹಾರಾಷ್ಟ್ರ; 10ರಲ್ಲಿ 9 ಮಂಕಿಫಾಕ್ಸ್ ಪ್ರಕರಣಗಳು ನೆಗಟಿವ್

|
Google Oneindia Kannada News

ಮುಂಬೈ, ಜುಲೈ, 29: ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾದ ಶಂಕಿತ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳಲ್ಲಿ ಹತ್ತರಲ್ಲಿ ಒಂಬತ್ತು ಮಾದರಿಗಳು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿವೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಒಬ್ಬ ರೋಗಿಯ ಫಲಿತಾಂಶ ಇನ್ನೂ ಲಭ್ಯವಿಲ್ಲ ಎಂದು ಮಹಾರಾಷ್ಟ್ರದ ಸಾಂಕ್ರಾಮಿಕ ಪೀಡಿತ ರೋಗಗಳ ಕಣ್ಗಾವಲು ಅಧಿಕಾರಿ ಡಾ.ಪ್ರದೀಪ್ ಅವತೆ ಹೇಳಿದ್ದಾರೆ.

ಇದುವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಮಂಕಿಫಾಕ್ಸ್ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಶಂಕಿತ ಈ ಹತ್ತು ಮಂಕಿಫಾಕ್ಸ್ ಮಾದರಿಗಳನ್ನು ಕಳೆದ ತಿಂಗಳು ಎನ್‌ಐವಿಗೆ ಕಳುಹಿಸಲಾಗಿತ್ತು ಎಂದು ಡಾ. ಪ್ರದೀಪ್ ಅವತೆ ಹೇಳಿದ್ದಾರೆ.

 Maharashtra: 9 Out Of 10 Suspected Monkeypox Patients Test Negative

ರಾಜ್ಯ ಆರೋಗ್ಯ ಇಲಾಖೆ ಶಂಕಿತ ರೋಗಿಗಳ ವಿವರ ಮತ್ತು ಸ್ಥಳವನ್ನು ಬಹಿರಂಗಪಡಿಸುತ್ತಿಲ್ಲ ಆದ್ದರಿಂದ ಅವರು ಯಾವುದೇ ಕಿರುಕುಳವನ್ನು ಎದುರಿಸುವುದಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಮಂಕಿಫಾಕ್ಸ್ ಸೋಂಕಿನ ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ಹಿಂದಿರುಗುತ್ತಿರುವ ರೋಗಿಗಳ ಮೇಲೆ ನಿಗಾ ಇಡುವಂತೆ ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಇನ್ನು, ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಂಕಿತ ಮಂಕಿಪಾಕ್ಸ್ ಕಾಯಿಲೆಯ ರೋಗಿಯನ್ನು ಗುರುವಾರ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. 30 ವರ್ಷದ ಗಾಜಿಯಾಬಾದ್ ವ್ಯಕ್ತಿಗೆ ಮಂಕಿಪಾಕ್ಸ್ ಬದಲು ಚಿಕನ್‌ಪಾಕ್ಸ್ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳದ ಮೂವರು ಸೇರಿದಂತೆ ದೇಶದಲ್ಲಿ ಇದುವರೆಗೆ ನಾಲ್ಕು ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಪರೋಕ್ಷ ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತದೆ. ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಚರ್ಮದ ದದ್ದುಗಳು (ಇವುಗಳು ಮುಖದಿಂದ ಪ್ರಾರಂಭವಾಗುತ್ತದೆ ಮತ್ತು ತೋಳುಗಳು, ಕಾಲುಗಳು, ಅಂಗೈಗಳು ಮತ್ತು ಅಡಿಭಾಗಗಳಿಗೆ ಹರಡುತ್ತದೆ), ದುಗ್ಧರಸ ಗ್ರಂಥಿಯ ಹಿಗ್ಗುವಿಕೆ, ತಲೆನೋವು, ಸ್ನಾಯು ನೋವು, ಅಥವಾ ಬಳಲಿಕೆ, ಕೆಮ್ಮು ಮತ್ತು ಗಂಟಲು ನೋವು.

Recommended Video

Karnataka: ನೆಟ್ಟಾರು ಅಂಗಡಿಯಲ್ಲಿ ಕೆಲಸಕಿದ್ದ ವನ ಪುತ್ರನಿಂದಲೆ ಸ್ಕೆಚ್!! | Politics | OneIndia Kannada

English summary
Maharashtra Monkeypox update: Nine out of ten samples of suspected monkeypox infection sent to the National Institute of Virology (NIV) have tested negative. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X