ಭಾರತದಲ್ಲಿ ಗಾನಸುಧೆ ಹರಿಸಲು ಬರಲಿದ್ದಾರೆ ಜಸ್ಟಿನ್ ಬೀಬರ್

Subscribe to Oneindia Kannada

ನವದೆಹಲಿ, ಫೆಬ್ರವರಿ 15: ಕೊನೆಗೆ ಜಸ್ಟಿನ್ ಬೀಬರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ದಿನ ಹತ್ತಿರ ಬಂದಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಮಾರ್ಚ್ 10ರಂದು ಮುಂಬೈನಲ್ಲಿ ತಮ್ಮ ಗಾನ ಸುಧೆ ಹರಿಸಲಿದ್ದಾರೆ.

ಜಸ್ಟಿನ್ ಬೀಬರ್ ಕಾರ್ಯಕ್ರಮಗಳ ಪ್ರಾಯೋಜಕರಾದ ಫಾಕ್ಸ್ ಇಂಡಿಯಾ ಈ ಸುದ್ದಿಯನ್ನು ಖಚಿತ ಪಡಿಸಿದ್ದು ಮಾರ್ಚ್ 10 ರಂದು ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಕೆನಾಡದ 22 ವರ್ಷದ ಮಾಂತ್ರಿಕ ಹಾಡುಗಾರ ಬೀಬರ್ ಅಂದು ತಮ್ಮ ಅತ್ಯಮೋಘ ಕಾರ್ಯಕ್ರಮ ನೀಡಲಿದ್ದಾರೆ. ಲಕ್ಷಾಂತರ ಜನ ಈ ಕಾರ್ಯಕ್ರಮಕ್ಕೆ ಖುದ್ದು ಹಾಜರಾಗುವ ನಿರೀಕ್ಷೆ ಇದೆ.[ಹಾವಿನ ಜತೆ ಫೋಟೋ ಹಾಕಿದ ಟಿವಿ ನಟಿಯ ಬಂಧನ!]

Justin Bieber Performance in India on May 10th

ಬೀಬರ್ ಭಾರತಕ್ಕೆ ಮಾತ್ರ ಬರುತ್ತಿಲ್ಲ. ಭಾರತದ ಜತೆಗೆ ಇಸ್ರೇಲಿನ ಟೆಲ್ ಅವಿವ್, ದುಬೈನಲ್ಲಿಯೂ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಮುಂಬೈ ಕಾರ್ಯಕ್ರಮದ ಟಿಕೆಟ್ ಗಳ ಬುಕ್ಕಿಂಗ್ ಫೆಬ್ರವರಿ 22ರಿಂದ ಆರಂಭವಾಗಲಿದೆ.[ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ]

ವೇರ್ ಆರ್ ಯೂ ನೌ, ಬಾಯ್ ಫ್ರೆಂಟ್, ಲವ್ ಯುವರ್ ಸೆಲ್ಫ್, ಕಂಪೆನಿ, ಆಸ್ ಲಾಂಗ್ ಆಸ್ ಯು ಲವ್ ಮಿ, ವಾಟ್ ಡೂ ಯೂ ಮೀನ್?, ಬೇಬಿ, ಪರ್ಪಸ್ ಮುಂತಾದ ಟಾಪ್ ಹಿಟ್ ಹಾಡುಗಳನ್ನು ಮುಂಬೈನಲ್ಲಿ ಬೀಬರ್ ಕಡೆಯಿಂದ ನಿರೀಕ್ಷೆ ಮಾಡಬಹುದಾಗಿದೆ.

ಸುಮಾರು 6 ತಿಂಗಳು ಒದ್ದಾಡಿ ಕೊನೆಗೂ ಫಾಕ್ಸ್ ಇಂಡಿಯಾ ಈ ಕಾರ್ಯಕ್ರಮ ಆಯೋಜನೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After 6 months of wait, it is officially confirmed that Grammy award winner and global pop sensation Justin Bieber will perform in Mumbai on May 10, 2017.
Please Wait while comments are loading...