ಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯ: ವಿಮಾನದಲ್ಲಿ ಪ್ರಯಾಣಿಕರ ಪರದಾಟ
Recommended Video

ಮುಂಬೈ, ಸೆಪ್ಟೆಂಬರ್ 20: ಮುಂಬೈ ಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ನ 9W 0697 ವಿಮಾನದಲ್ಲಿ ಸಿಬ್ಬಂದಿಯು ಕ್ಯಾಬಿನ್ ಪ್ರೆಶರ್ ನಿರ್ವಹಣೆಯನ್ನು ಮರೆತ ಕಾರಣ 30 ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಮಾನದೊಳಗೆ ಕ್ಯಾಬಿನ್ ಪ್ರೆಶರ್ ನ ಸಮತೋಲನ ಕಾಯುವ ಸ್ವಿಚ್ ಅನ್ನು ಅದುಮಲು ಸಿಬ್ಬಂದಿ ಮರೆತಿದ್ದೇ ಈ ಎಲ್ಲಾ ಅವಾಂತರಕ್ಕೂ ಕಾರಣ.
ವಿಮಾನದಲ್ಲಿದ್ದ 166 ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 30 ಪ್ರಯಾಣಿಕಿಗೆ ಮೂಗು ಮತ್ತು ಕಿವಿ ಸೋರುತ್ತಿರುವ ಅನುಭವವಾಗಿತ್ತು. ಜೊತೆಗೆ ಕೆಲವರು ವಿಪರೀತ ತಲೆನೋವಿನಿಂದ ಬಳಲುವಂತಾಯ್ತು.
Panic situation due to technical fault in @jetairways 9W 0697 going from Mumbai to Jaipur. Flt return back to Mumbai after 45 mts. All passengers are safe including me. pic.twitter.com/lnOaFbcaps
— Darshak Hathi (@DarshakHathi) September 20, 2018
ಆಕ್ಸಿಜನ್ ಮಾಸ್ಕ್ ಅನ್ನು ಧರಿಸುವಂತೆ ಸೂಚಿಸಲಾಗಿತ್ತಾದರೂ ಹಲವು ಪ್ರಯಾಣಿಕರು ಆತಂಕಗೊಂಡಿದ್ದು ಕಂಡುಬಂತು. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಈ ಘಟನೆಯ ನಂತರ ತಕ್ಷಣವೇ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ವಾಪಸ್ ಲ್ಯಾಂಡ್ ಮಾಡಲಾಯಿತು. ಮುಂಬೈ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸುತ್ತಿದ್ದಂತೆಯೇ ಎಲ್ಲಾ 166 ಪ್ರಯಾಣಿಕರೆಲ್ಲರ ಆರೋಗ್ಯ ತಪಾಸಣೆಯನ್ನು ವಿಮಾನ ನಿಲ್ದಾಣದಲ್ಲೇ ಮಾಡಿ, ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆಯನ್ನೂ ನೀಡಲಾಯಿತು. ಸದ್ಯಕ್ಕೆ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಜೆಟ್ ಏರ್ವೇಸ್ ಆಡಳಿತ ಮಂಡಳಿ ತಿಳಿಸಿದೆ.












Click it and Unblock the Notifications