ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಲಕ್ಷ ಕೋಟಿ ರೂಪಾಯಿ ಘೋಷಿಸಿಕೊಂಡ ನಾಲ್ವರಿರುವ ಕುಟುಂಬ

ಆದಾಯ ಘೋಷಣಾ ಯೋಜನೆ(ಐಡಿಎಸ್) ಅಡಿಯಲ್ಲಿ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಘೋಷಿಸಿದ್ದ ಕುಟುಂಬದ ಒಂದು ಪ್ರತಿಯನ್ನು ಆದಾಯ ತೆರಿಗೆ ಇಲಾಖೆಯು ತನಿಖೆಗೊಳಪಡಿಸುತ್ತಿದೆ

By Mahesh
|
Google Oneindia Kannada News

ಮುಂಬೈ, ಡಿಸೆಂಬರ್ 04: ಆದಾಯ ಘೋಷಣಾ ಯೋಜನೆ(ಐಡಿಎಸ್) ಅಡಿಯಲ್ಲಿ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಘೋಷಿಸಿದ್ದ ಕುಟುಂಬದ ಒಂದು ಪ್ರತಿಯನ್ನು ಆದಾಯ ತೆರಿಗೆ ಇಲಾಖೆಯು ತನಿಖೆಗೊಳಪಡಿಸುತ್ತಿದೆ.

ಮುಂಬೈಯ ನಾಲ್ಕು ಮಂದಿ ಸದಸ್ಯರು ಇರುವ ಕುಟುಂಬವೊಂದು 2 ಲಕ್ಷ ಕೋಟಿ ರೂಪಾಯಿ ಕಪ್ಪುಹಣವನ್ನು ಘೋಷಣಾ ಯೋಜನೆಯ ಅಡಿಯಲ್ಲಿ ಘೋಷಿಸಿತ್ತು.

IT department probing Rs 2 lakh crore declaration under IDS

ಅಬ್ದುಲ್ ರಜಾಕ್ ಮೊಹಮ್ಮದ್ ಸಯದ್(ಸ್ವಂತ-ಘೋಷಣೆದಾರ), ಮೊಹಮ್ಮದ್ ಆರಿಫ್ ಅಬ್ದುಲ್ ರಜಾಕ್ ಸಯದ್ (ಮಗ), ರುಕ್ಸಾನಾ ಅಬ್ದುಲ್ ರಜಾಕ್ ಸಯದ್ (ಪತ್ನಿ) ಹಾಗೂ ನೂರ್ ಜಹಾನ್ ಮೊಹಮ್ಮದ್ ಸಯದ್ (ತಂಗಿ) ಎಲ್ಲರೂ ಬಾಂದ್ರಾದ ನಿವಾಸಿಗಳಾಗಿದ್ದು, 2 ಲಕ್ಷ ಕೋಟಿ ರು ಘೋಷಿಸಿದ್ದರು, ನಾಲ್ಕು ಪ್ಯಾನ್ ನಂಬರ್ ಗಳಲ್ಲಿ ಮೂರು ಅಜ್ಮೇರ್ ಮೂಲದ್ದಾಗಿದ್ದು, ಸೆಪ್ಟೆಂಬರ್ 2015 ರಲ್ಲಿ ಮುಂಬೈಗೆ ವರ್ಗವಾಗಿದೆ.

ಇನ್ನೊಂದು ಆದಾಯ ತೆರಿಗೆ ಘೋಷಣೆಯಲ್ಲಿ ಅಹಮದಾಬಾದ್ ನಿವಾಸಿ ಮಹೇಶಕುಮಾರ್ ಚಂಪಕಲಾಲ್ ಷಾ ಅವರು 13,860 ಕೋಟಿ ರೂಪಾಯಿ ಮೊತ್ತದ ಕಾಳಧನವನ್ನು ಘೋಷಿಸಿದ್ದರು.

ತನಿಖೆಯ ಬಳಿಕ ಈ ವ್ಯಕ್ತಿಗಳು ಸಂಶಯಾಸ್ಪದ ವ್ಯಕ್ತಿಗಳಾಗಿದ್ದು, ಸಣ್ಣ ಪ್ರಮಾಣದ ಆದಾಯ ಮೂಲಗಳನ್ನು ಹೊಂದಿದ್ದಾರೆ ಮತ್ತು ಆದಾಯ ಘೋಷಣೆ ಯೋಜನೆಯನ್ನು ದುರುಪಯೋಗಿಸಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು, ಎಲ್ಲವನ್ನು ತಡೆ ಹಿಡಿಯಲಾಗಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.

English summary
The income tax department has put on hold a declaration of Rs 2 lakh crore made by a family from Mumbai. The declaration was made under the Income Declaration Scheme (IDS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X