ಮುದ್ರಣವಾಗಿದೆಯೇ ರೂ.2 ಸಾವಿರ ಮುಖಬೆಲೆಯ ನೋಟು?

Posted By:
Subscribe to Oneindia Kannada

ಮುಂಬೈ, ನವೆಂಬರ್, 7: ನಕಲಿ ನೋಟು ತಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೂ. 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ ಎಂಬ ಸುದ್ದಿ ಇದೀಗ ಟ್ಟಿಟ್ಟರ್ ನಲ್ಲಿ ಹರಿದಾಡುತ್ತಿದೆ.

ಇನ್ನೂ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲದಿದ್ದರೂ ಸಹ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಪರಿಹಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ. ನೋಟುಗಳು ನೋಡಲು ಭಿನ್ನವಾಗಿದ್ದು, ಗುಲಾಬಿ ವರ್ಣದಿಂದ ಕೂಡಿವೆ. [ಸದ್ಯದಲ್ಲೆ ಚಲಾವಣೆಗೆ ಬರಲಿದೆ 2,000 ಮುಖಬೆಲೆ ನೋಟು!]

Is this new Rs2,000 bank note from RBI?

ಹಣ ವರ್ಗಾವಣೆ ಸೇರಿದಂತೆ ಸಾರ್ವಜನಿಕರು ತಮ್ಮ ಪ್ರತಿನಿತ್ಯದ ಹಣಕಾಸು ವ್ಯವಹಾರದಲ್ಲಿ ಹೆಚ್ಚಾಗಿ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನೇ ಬಳಸುತ್ತಿದ್ದಾರೆ. ಇದರಿಂದ ನಕಲಿ ನೋಟುಗಳ ಹಾವಳಿಯೂ ಸಹ ಹೆಚ್ಚಾಗಿದೆ.

500ರೂ. ಮತ್ತು 1,000ರೂ. ಮುಖಬೆಲೆಯ ನಕಲಿ ನೋಟುಗಳನ್ನು ಚಲಾವಣೆ ತಪ್ಪಿಸಲೆಂದೇ 2ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ತರುತ್ತಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ 2ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿದೆ ಎಂದು ಹೇಳಲಾಗಿದೆ

ಪ್ರಸ್ತುತ 500ರೂ. ಮತ್ತು 1,000ರೂ. ಮುಖಬೆಲೆಯ ನೋಟುಗಳು ಶೇ.86ರಷ್ಟು ಚಲಾವಣೆಯಾಗುತ್ತಿವೆ. 2ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದರೆ ಮುದ್ರಣ ವೆಚ್ಚವೂ ಸಹ ಕಡಿಮೆಯಾಗಲಿದ್ದು, ಇದರಿಂದ ಅನುಕೂಲಗಳೆ ಹೆಚ್ಚು ಎಂದು ಹೇಳಲಾಗಿದೆ. ಮೈಸೂರು ಮುದ್ರಣಾಲಯದಲ್ಲಿ ಈಗಾಗಲೇ ನೋಟುಗಳನ್ನು ಮುದ್ರಿಸಲಾಗಿದೆ ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twitter is abuzz with images of several bundles of pink-and-white notes posing as the new Rs 2,000 denomination that the Reserve Bank of India reportedly intends to release into circulation soon.
Please Wait while comments are loading...