IPL 2022: ಐಪಿಎಲ್ ಭದ್ರತೆಗೆ ನಿಯೋಜಿಸಿದ್ದ ಇಬ್ಬರು ಮುಂಬೈ ಪೇದೆಗಳ ಮೇಲೆ ದೂರು ದಾಖಲು
ಮುಂಬೈ, ಏಪ್ರಿಲ್ 13: ಐಪಿಎಲ್ ಕ್ರಿಕೆಟ್ ಆಟಗಾರರು ಕುಳಿತುಕೊಂಡಿದ್ದ ಗ್ಯಾಲರಿಯ ಬಳಿ ಮದ್ಯಪಾನದ ಅಮಲಿನಲ್ಲಿ ಫೋಟೋ ಕ್ಲಿಕಿಸಿದ ಪೋಲಿಸ್ ಪೇದೆಗಳಿಬ್ಬರ ವಿರುದ್ಧ ಮುಂಬೈ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮುಂಬೈನ ಡಿ.ವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗುಜರಾತ್ ಟೈಟಾನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ನಡುವೆ ಸೋಮವಾರದಂದು ಈ ಘಟನೆ ನಡೆದಿದೆ. ಕ್ರಿಕೆಟ್ ನೋಡಲು ಬರುವ ಸಾರ್ವಜನಿಕರ ಭದ್ರತೆಗಾಗಿ ಈ ಇಬ್ಬರು ಪೋಲಿಸ್ ಪೇದೆಗಳನ್ನು ನಿಯೋಜಿಸಲಾಗಿತ್ತು ಎಂದು ಮುಂಬೈ ಪೋಲಿಸರು ತಿಳಿಸಿದ್ದಾರೆ.

ಪೋಲಿಸ್ ಪೇದೆಗಳು ಮದ್ಯದ ಅಮಲಿನಲ್ಲಿದ್ದರು ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದು, ಈ ಪೋಲಿಸರು ಕರ್ತವ್ಯದ ವೇಳೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಪೋಲಿಸ್ ಪೇದೆಗಳ ಮೇಲೆ ಸೆಕ್ಷನ್ 85(1)ರ ಅಡಿಯಲ್ಲಿ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಪ್ರಕರಣ ದಾಖಲಿಸಲಾಗಿದೆ, ಮುಂದಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೋಲಿಸರು ತಿಳಿಸಿದ್ದಾರೆ.












Click it and Unblock the Notifications