ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತಿಹಾದ್ ವಿಮಾನದಲ್ಲೇ ಮಗು ಹೆತ್ತ ಮಹಿಳೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

|
Google Oneindia Kannada News

ಮುಂಬೈ, ಅಕ್ಟೋಬರ್ 24: ಇಂಡೋನೇಷ್ಯಾದ ಮಹಿಳೆಯೊಬ್ಬರು ಎತಿಹಾದ್ ವಿಮಾನ ಯಾನ ಸಂಸ್ಥೆಯ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆ ವಿಮಾನವು ಬುಧವಾರದಂದು ಬೆಳಗ್ಗೆ ಅಬುಧಾಬಿಯಿಂದ ಜಕಾರ್ತಕ್ಕೆ ತೆರಳುತ್ತಿತ್ತು ಎಂದು ಮುಂಬೈನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ತುರ್ತು ಕಾರಣಕ್ಕಾಗಿ ವಿಮಾನವನ್ನು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಆ ನಂತರ ಮುಂಬೈನ ಅಂಧೇರಿ ಪೂರ್ವದಲ್ಲಿ ಇರುವ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ತಾಯಿ ಹಾಗೂ ಮಗುವಿನ ಚಿಕಿತ್ಸೆ ನಡೆಯುತ್ತಿದೆ.

ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ

ಅಂದ ಹಾಗೆ ಎತಿಹಾದ್ EY-474 ವಿಮಾನವು ನಿಗದಿಯಾದ ಸಮಯಕ್ಕಿಂತ ಕನಿಷ್ಟ ಎರಡು ಗಂಟೆ ತಡವಾಗಿ ಜಕಾರ್ತವನ್ನು ತಲುಪಿದೆ. ಅಂದರೆ ಈ ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 3.05ಕ್ಕೆ ಜಕಾರ್ತವನ್ನು ತಲುಪಬೇಕಿತ್ತು. ಆದರೆ ವೈದ್ಯಕೀಯ ತುರ್ತಿನ ಕಾರಣ ಹೀಗೆ ತಡವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Indonesia woman delivers on board Etihad flight, plane diverted to Mumbai

ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ! ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!

ಈ ರೀತಿ ವಿಮಾನದಲ್ಲೇ ಹೆರಿಗೆಯಾದರೆ ಆ ಮಕ್ಕಳಿಗೆ ವಿಮಾನ ಯಾನ ಸಂಸ್ಥೆಯು ವಿಶೇಷ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

English summary
An Indonesian woman delivered a baby on-board an Etihad Airways flight from Abu Dhabi to Jakarta today morning, officials said in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X