ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲೆಟ್‌ ಟ್ರೈನ್‌ಗಾಗಿ ಭಾರತದ ಮೊದಲ ಸಮುದ್ರ ಸುರಂಗ ಮಾರ್ಗ, ಎಲ್ಲಿ?

|
Google Oneindia Kannada News

ಮುಂಬೈ, ಸೆಪ್ಟೆಂಬರ್‌ 23: ನ್ಯಾಶನಲ್ ಹೈಸ್ಪೀಡ್ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಅಥವಾ ಎನ್‌ಎಚ್‌ಎಸ್‌ಆರ್‌ಸಿಎಲ್ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗಾಗಿ 21 ಕಿಮೀ ಉದ್ದದ ಸುರಂಗವನ್ನು ನಿರ್ಮಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಅದರಲ್ಲಿ ಏಳು ಕಿಮೀ ಸಮುದ್ರದ ಅಡಿಯಲ್ಲಿ ಇರುತ್ತದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾದ ನಂತರ ಬುಲೆಟ್ ಟ್ರೈನ್ ಕಾರಿಡಾರ್‌ನ ಕೆಲಸವು ವೇಗವನ್ನು ಪಡೆದುಕೊಂಡಿದೆ. ಈ ಹಿಂದೆ ಹಿಂತೆಗೆದುಕೊಳ್ಳಲಾದ ಟೆಂಡರ್‌ಗಳನ್ನು ಮತ್ತೆ ನವೀಕರಿಸಲಾಗಿದೆ ಎಂದು ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿವೆ. ಯೋಜನೆಯ ಪ್ರಮುಖ ಅಂಶವೆಂದು ಪರಿಗಣಿಸಿ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾದಲ್ಲಿ ಭೂಗತ ನಿಲ್ದಾಣದ ನಡುವೆ ಸುರಂಗವನ್ನು ನಿರ್ಮಿಸಲಾಗುವುದು ಎನ್ನಲಾಗಿದೆ.

ರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನರೈಲ್ವೆಯಲ್ಲಿ ಆಹಾರ ಖರೀದಿಗೆ ಡಿಜಿಟಲ್‌ ವಹಿವಾಟಿಗೆ ಉತ್ತೇಜನ

ಟೆಂಡರ್ ಡಾಕ್ಯುಮೆಂಟ್ ಪ್ರಕಾರ ಸುರಂಗ ಕೊರೆಯುವ ಯಂತ್ರ ಮತ್ತು ನ್ಯೂ ಆಸ್ಟ್ರಿಯನ್ ಟನೆಲಿಂಗ್ ವಿಧಾನ (NATM) ಬಳಸಿ ಸುರಂಗವನ್ನು ನಿರ್ಮಿಸಲಾಗುವುದು ಎನ್ನಲಾಗಿದೆ. ಥಾಣೆ ಕ್ರೀಕ್‌ನಲ್ಲಿರುವ ಏಳು ಕಿಮೀ ಸಮುದ್ರದೊಳಗಿನ ಸುರಂಗವು ದೇಶದಲ್ಲಿ ಬರಲಿರುವ ಮೊದಲ ಸಮುದ್ರದೊಳಗಿನ ಸುರಂಗವಾಗಿದೆ.

Indias first sea tunnel for bullet train, know where it is

ಕಳೆದ ವರ್ಷ ನವೆಂಬರ್‌ನಲ್ಲಿ ಎನ್‌ಎಚ್‌ಎಸ್‌ಆರ್‌ಸಿಎಲ್ ಯೋಜನೆಗಾಗಿ ಭೂಗತ ಸುರಂಗ ಕಾಮಗಾರಿಗೆ ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ ಅಧಿಕಾರಿಗಳು "ಆಡಳಿತಾತ್ಮಕ ಕಾರಣಗಳನ್ನು" ಉಲ್ಲೇಖಿಸಿ ಈ ವರ್ಷ ಅದನ್ನು ರದ್ದುಗೊಳಿಸಲಾಯಿತು. 2019 ರಲ್ಲಿ ಎನ್‌ಎಚ್‌ಎಸ್‌ಆರ್‌ಸಿಎಲ್ ಯೋಜನೆಗೆ ಮೊದಲು ಟೆಂಡರ್‌ಗಳನ್ನು ಆಹ್ವಾನಿಸಿತ್ತು. ಆದರೆ ಯಾವುದೇ ಬಿಡ್‌ದಾರರನ್ನು ಆಕರ್ಷಿಸಲಿಲ್ಲ. ಇದು ಮತ್ತೆ ನವೆಂಬರ್ 2021 ರಲ್ಲಿ ಟೆಂಡರ್ ಅನ್ನು ಕರೆಯಿತು.

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಸೇರಿದಂತೆ ಮಹಾರಾಷ್ಟ್ರದಲ್ಲಿ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳುವುದು ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ತೀವ್ರ ಸಮಸ್ಯೆಯಾಗಿತ್ತು ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

English summary
The National High Speed ​​Railway Corporation Limited or NHSRCL has invited bids to construct a 21 km long tunnel for the Mumbai-Ahmedabad High Speed ​​Rail Corridor. Seven km of it is under the sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X