ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಾಬ್ ಮಲಿಕ್ ಸಲ್ಲಿಸಿದ ದಾಖಲೆಗಳಿಂದ ವಾಂಖೆಡೆ 'ಮುಸ್ಲೀಂ' ಎಂದು ಸ್ಪಷ್ಟ

|
Google Oneindia Kannada News

ಮುಂಬೈ, ನವೆಂಬರ್ 18: ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ವಾಂಖೆಡೆ ಅವರ ತಂದೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ವಕೀಲರು ಗುರುವಾರ ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಕೋಟಾದಡಿಯಲ್ಲಿ ಉದ್ಯೋಗ ಪಡೆಯಲು ತಾನು ಹಿಂದೂ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ್ದೇನೆ ಎಂದು ತೋರಿಸಲು ವಾಂಖೆಡೆ ನಕಲಿ ಜಾತಿ ಪ್ರಮಾಣಪತ್ರವನ್ನು ಒದಗಿಸಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಲು ಸಾಕ್ಷಿಯಾಗಿರುವ ದಾಖಲೆಗಳನ್ನು ಒದಗಿಸಿದ್ದಾರೆ. ಇಂದು ಮಲಿಕ್ ಅವರು ತಮ್ಮ ವಕೀಲರಾದ ಅತುಲ್ ದಾಮ್ಲೆ ಮತ್ತು ಕುನಾಲ್ ದಾಮ್ಲೆ ಮೂಲಕ ಮೂರು ದಾಖಲೆಗಳನ್ನು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠಕ್ಕೆ ಸಲ್ಲಿಸಿದರು.

ಮುಂಬೈ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ನಿಜವಾದ ಹೆಸರು ಸಮೀರ್ ದಾವೂದ್ ವಾಂಖೆಡೆಯಾಗಿದ್ದು, ಅವರು ಮುಸ್ಲೀಂ ಎಂದು ಸಾಬೀತುಪಡಿಸುವ ಶಾಲಾ ಪ್ರಯಮಾಣ ಪತ್ರಗಳು ಗುರುವಾರ ಬೆಳಿಕಿಗೆ ಬಂದಿವೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಗುರುವಾರ ಸಮೀರ್ ವಾಂಖೆಡೆಗೆ ಸೇರಿದ ಎರಡು ಶಾಲಾ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದೆ. ಶಾಲೆಯ ಪ್ರಮಾಣಪತ್ರಗಳಲ್ಲಿ ಸಮೀರ್ ಹೆಸರಿನ ನಡುವೆ 'ದಾವೂದ್' ಎಂದಿದೆ. ವಡಾಲಾದ ಸೇಂಟ್ ಜೋಸೆಫ್ ಹೈಸ್ಕೂಲ್, ದಾದರ್‌ನ ಸೇಂಟ್ ಪಾಲ್ಸ್ ಹೈಸೂಲ್ಕಲ್ ಪ್ರಮಾಣಪತ್ರಗಳಲ್ಲಿ ಸಮೀರ್ 'ದಾವೂದ್' ವಾಂಖೆಡೆ ಪ್ರಮಾಣಪತ್ರದ ಧರ್ಮ ಅಂಕಣದಲ್ಲಿ "ಮುಸ್ಲಿಂ" ಎಂದು ಬರೆಯಲಾಗಿದೆ.

ಎನ್‌ಸಿಪಿ ಪಕ್ಷ ಬಿಡುಗಡೆ ಮಾಡಿದ 1995ರ ಶಾಲಾ ಪ್ರಮಾಣಪತ್ರದಲ್ಲಿ ಅವರ ಹೆಸರು ವಾಂಖೆಡೆ ಸಮೀರ್ ದ್ಯಾನ್ ದೇವ್ ಎಂದೂ, ಅವರ ಜಾತಿ 'ಮಹೆರ್', ಎಂದು ಇದೆ. ಆರ್ಯನ್ ಖಾನ್ ಬಂಧನವಾದ ನಂತರ ಸಮೀರ್ ವಾಂಖೆಡೆ ವಿರುದ್ಧ ಮುಗಿಬಿದ್ದರುವ ಎನ್‌ಸಿಪಿ ಸವಚಿವ ನವಾಬ್ ಮಲಿಕ್ ಈಗ ಎನ್‌ಸಿಪಿ ಅಧಿಕಾರಿ ಮುಸ್ಲೀಂ ಎಂದು ಆರೋಪಿಸಿದ್ದಾರೆ. ವಾಂಖೆಡೆ ಮುಸ್ಲೀ ಆಗಿ ಜನಿಸಿದ್ದಾರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಸ್‌ಸಿ ಕೋಟಾದಡಿ ಉದ್ಯೋಗಪಡೆದುಕೊಳ್ಳಲು ಹಿಂದೂ ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂದು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ಈ ಹಿಂದೆ ನವಾಬ್ ಆರೋಪಿಸಿದ್ದರು. ಸಮೀರ್ ವಾಂಖೆಡೆ ಅವರ ಜನ್ಮ ಪ್ರಮಾಣ ಪತ್ರದ ಪ್ರತಿಯನ್ನು ಸಹ ಬಿಡುಗಡೆ ಮಾಡಿದ್ದರು.

In Maliks record it is clear that Sameer is a Muslim

ಜೊತೆಗೆ ಸಮೀರ್ ವಾಂಖೆಡೆಯನ್ನು ಪ್ರತಿನಿಧಿಸುವ ವಕೀಲರಾದ ಅರ್ಷದ್ ಶೇಖ್ ಮತ್ತು ದಿವಾಕರ್ ರೈ ಕೂಡ ನ್ಯಾಯಾಲಯಕ್ಕೆ ಎರಡು (BMC ನೀಡಿದ ಡಿಜಿಟೈಸ್ಡ್ ಜನನ ಪ್ರಮಾಣಪತ್ರ ಮತ್ತು ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಅವರ ಜಾತಿ ಪ್ರಮಾಣಪತ್ರ) ದಾಖಲೆಗಳನ್ನು ನೀಡಿದರು. ಮತ್ತೊಂದೆಡೆ ವಕೀಲ ಶೇಖ್ ಅವರು ವಾಂಖೆಡೆ ಜೂನಿಯರ್ ಪ್ರಮಾಣಪತ್ರಗಳಲ್ಲಿನ ತಪ್ಪನ್ನು ವಾಂಖೆಡೆ ಹಿರಿಯರು ಅರಿತುಕೊಂಡಿದ್ದಾರೆ ಮತ್ತು ಅದನ್ನು ಬದಲಾಯಿಸಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ ಎಂದು ನ್ಯಾಯಮೂರ್ತಿ ಜಾಮ್ದಾರ್ ಮುಂದೆ ಒತ್ತಿ ಹೇಳಿದರು.

"ಮಲಿಕ್ ಅವರು ಸಮೀರ್ ವಾಂಖೆಡೆ ಅವರನ್ನು ದಾವೂದ್ ಎಂದು ಕರೆಯುವುದನ್ನು ಮುಂದುವರಿಸಬಾರದು, ಅದನ್ನು ದ್ಯಾನ್‌ದೇವ್ ಎಂದು ಸರಿಪಡಿಸಲಾಗಿದೆ. ಹೇಗೋ ಕಳೆದ ನಾಲ್ಕು ದಿನಗಳಿಂದ ಅವನು ಮೌನವಾಗಿದ್ದರು. ನಂತರ ಅವರು ಮತ್ತೆ ಮಾತನ್ನು ಪ್ರಾರಂಭಿಸಿದ್ದಾರೆ" ಎಂದು ಶೇಖ್ ಹೇಳಿದರು. ಜೊತೆಗೆ "ಅವರ ಜನನ ಪ್ರಮಾಣ ಪತ್ರ ಸರಿಯೇ ಅಥವಾ ಸಮೀರ್ ವಾಂಖೆಡೆ ಪ್ರಮಾಣ ಪತ್ರ ಸರಿಯೇ ಎಂಬುದನ್ನು ನೋಡಬೇಕಾಗಿದೆ" ಎಂದು ಅವರು ಹೇಳಿದರು. ಶಾಲೆಯಿಂದ ಪ್ರಮಾಣಪತ್ರದ ಪ್ರತಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಮತ್ತು ಅದು ಮಲಿಕ್‌ಗೆ ಹೇಗೆ ತಲುಪಿದೆ ಎಂದು ಆಶ್ಚರ್ಯ ಪಡುವ ವಿಷಯವನ್ನು ಶೇಖ್ ಪ್ರಸ್ತಾಪಿಸಿದರು.

In Maliks record it is clear that Sameer is a Muslim

Recommended Video

ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು ? | Oneindia Kannada

10 ನಿಮಿಷಗಳಲ್ಲಿ ನ್ಯಾಯಮೂರ್ತಿ ಜಾಮ್ದಾರ್ ಅವರ ಕೊಠಡಿಯೊಳಗೆ ವಾದವನ್ನು ಮುಗಿಸಿದ ಶೇಖ್, "ಮಲಿಕ್ ಅವರು ಸಮೀರ್ ವಾಂಖೆಡೆ ಅವರನ್ನು ದಾವೂದ್ ಎಂದು ಕರೆಯುವುದನ್ನು ಮುಂದುವರಿಸಬಾರದು" ಎಂದು ಪುನರುಚ್ಚರಿಸಿದರು. ಪೀಠವು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡಿದೆ ಮತ್ತು ನ್ಯಾಯಮೂರ್ತಿ ಜಾಮ್ದಾರ್ ಅವರು ನವೆಂಬರ್ 22 ರಂದು ಸಂಜೆ 5.30 ಕ್ಕೆ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದರು. ಇನ್ನು ಮುಂದೆ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

English summary
Narcotics Control Bureau Zonal Director Sameer Wankhede's lawyers submitted additional documents to the Bombay High Court on Thursday in connection with the defamation suit filed by Wankhede's father against NCP leader Nawab Malik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X