ನಾನು ಎಂದೂ ಮೋದಿಯನ್ನು ಬೆಂಬಲಿಸಿಲ್ಲ, ಬೆಂಬಲಿಸಲ್ಲ ಎಂದ ಪವಾರ್

ಮುಂಬೈ, ಅಕ್ಟೋಬರ್ 1: "ನಾನು ಅವರನ್ನು (ಪ್ರಧಾನಿ ಮೋದಿ) ಬೆಂಬಲಿಸಿದ್ದೇನೆ ಎಂದು ಕೆಲವರು ನನ್ನನ್ನು ಟೀಕಿಸಿದ್ದಾರೆ. ಆದರೆ ನಾನು ಅವರನ್ನು ಬೆಂಬಲಿಸಿಲ್ಲ ಮತ್ತು ಎಂದೂ ಬೆಂಬಲಿಸಲ್ಲ" ಎಂದು ಮರಾಠಾವಾಡ ಭಾಗದಲ್ಲಿ ನಡೆದ ಎನ್ ಸಿಪಿ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ತಮ್ಮ ನಿಲುವು ಸ್ಪಷ್ಟ ಪಡಿಸಿ, ಅವರು (ಸರಕಾರ) ವಿಮಾನ ಖರೀದಿಸಿದ್ದಾರೆ. ಎಲ್ಲ ಸ್ಪಷ್ಟನೆಯೊಂದಿಗೆ ನಾನು ಹೇಳುತ್ತಿರುವುದು ಏನೆಂದರೆ, ಯುದ್ಧ ವಿಮಾನದ ಬೆಲೆ 650 ಕೋಟಿ ರುಪಾಯಿಯಿಂದ 1600 ಕೋಟಿಗೆ ಏರಿಕೆ ಆಗಿದ್ದು ಏಕೆ ಎಂಬುದನ್ನು ಸಂಸತ್ ಮುಂದೆ ವಿವರಿಸಬೇಕು ಎಂದು ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು. ಮೂವತ್ತಾರು ಯುದ್ಧ ವಿಮಾನ ಖರೀದಿಯ ಬೆಲೆಯನ್ನು ಬಹಿರಂಗ ಮಾಡಬೇಕು ಎಂದು ಪವಾರ್ ಹೇಳಿದ್ದಾರೆ.

I would never support Narendra Modi, Sharad Pawar retracts Rafale remark

ಮೋದಿ ಉದ್ದೇಶದ ಬಗ್ಗೆ ಜನರಲ್ಲಿ ಸಂದೇಹವಿಲ್ಲ ಎಂದು ಪವಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆ ನಂತರ ಎನ್ ಸಿಪಿಯ ಸಂಸದ ತಾರೀಕ್ ಅನ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನೇ ತೊರೆದರು. ಈ ಮಧ್ಯೆ ಕೇಂದ್ರ ಸರಕಾರ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ರೈತರ ಸಾಲ ಮನ್ನಾ ವಿಚಾರವಾಗಿ ತರಾಟೆಗೆ ತೆಗೆದುಕೊಂಡು, ಈ ಹಿಂದೆ ಯುಪಿಎ ಸರಕಾರ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಮಾಡಿತ್ತು ಎಂದು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+