'ನಾನು ಯಾರನ್ನೂ ಅನುಮಾನಿಸುವುದಿಲ್ಲ' ಸಲ್ಮಾನ್ ಖಾನ್ ಹೇಳಿಕೆ
ಮುಂಬೈ ಜೂ.7: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಬಂದಿದ್ದು, ಬಳಿಕ ಮುಂಬೈ ಪೊಲೀಸರು ಕ್ರಮ ಕೈಗೊಂಡು ಭದ್ರತೆ ಹೆಚ್ಚಿಸಿದ್ದಾರೆ. ಪೊಲೀಸರು ಸಲ್ಮಾನ್ ಖಾನ್ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.
ಸಿದ್ದು ಮೂಸೆವಾಲಾ ಅವರಂತೆ ಸಲ್ಮಾನ್ ಖಾನ್ ಅವರನ್ನೂ ಕೊಲೆ ಮಾಡಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ. ಇದೀಗ ಈ ಬಗ್ಗೆ ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಸಲ್ಮಾನ್ ಖಾನ್ ಹೀಗೆ ಹೇಳಿದ್ದಾರೆ - ಬೆದರಿಕೆ ಪತ್ರದ ಬಗ್ಗೆ ನಾನು ಯಾರನ್ನೂ ಅನುಮಾನಿಸುವುದಿಲ್ಲ. ನನಗೆ ಯಾರೊಂದಿಗೂ ದ್ವೇಷವಿಲ್ಲ. ಲಾರೆನ್ಸ್ ಬಿಷ್ಣೋಯ್ ಅವರು ನನಗೆ ಮೊದಲ ಬಾರಿಗೆ ಬೆದರಿಕೆ ಹಾಕಿದ್ದನು ಎಂದು 2018 ರ ವರ್ಷದಲ್ಲಿ ಪೊಲೀಸ್ ವಿಚಾರಣೆಯಿಂದ ನನಗೆ ತಿಳಿದಿದೆ. ಗೋಲ್ಡಿ ಬಾರ್ ಯಾರೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಮುಂಬೈ ಪೊಲೀಸರು ತನಿಖೆ ವೇಳೆ ಸಲ್ಮಾನ್ ಖಾನ್ ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಯಾವುದೇ ರೀತಿಯ ಬೆದರಿಕೆ ಕರೆ ಬಂದಿರುವ ಬಗ್ಗೆ ಕೇಳಿದ್ದಾರೆ. ಅಥವಾ ಸಂದೇಶ ಬಂದಿದೆಯೇ ಅಥವಾ ಯಾರೊಂದಿಗಾದರೂ ತಾರತಮ್ಯವಿದೆಯೇ ಎಂದು ಕೇಳಲಾಗಿದೆ. ಇನ್ನಷ್ಟು ವಿವರಗಳಿಗೆ ಮುಂದೆ ಓದಿ...

ಬೆದರಿಕೆ ಕೇಸ್: ವಿಚಾರಣೆ ವೇಳೆ ಸಲ್ಮಾನ್ ಹೇಳಿದ್ದೇನು?
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್, ನನ್ನೊಂದಿಗೆ ಅಂತಹದ್ದೇನೂ ಸಂಭವಿಸಿಲ್ಲ. ಕಳೆದ ಕೆಲವು ದಿನಗಳಿಂದ ಅವರು ಯಾರೊಂದಿಗೂ ಜಗಳವಾಡಲಿಲ್ಲ. ಯಾವುದೇ ಕರೆಯಾಗಲೀ ಬೆದರಿಕೆ ಸಂದೇಶವಾಗಲೀ ಬಂದಿಲ್ಲ ಎಂದಿದ್ದಾರೆ. ಜೊತೆಗೆ 'ನನಗೆ ಪತ್ರ ಬಂದಿಲ್ಲ. ಬೆದರಿಕೆ ಪತ್ರ ನನ್ನ ತಂದೆಗೆ ಬೆಳಗ್ಗೆ ವಾಕಿಂಗ್ ಹೋದಾಗ ಸಿಕ್ಕಿದೆ. ನಾನು ಯಾರನ್ನೂ ಅನುಮಾನಿಸುವುದಿಲ್ಲ' ಎಂದಿದ್ದಾರೆ.

ಬೆದರಿಕೆ ಪತ್ರದ ಬಗ್ಗೆ ಸಲ್ಲಿ ವಿಚಾರಣೆ
ಗೋಲ್ಡಿ ಬ್ರಾರ್ ಅವರ ಪರಿಚಯವಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಸಿಧು ಮೂಸೆವಾಲಾ ಅವರಂತೆ ಕೊಲ್ಲಲಾಗುತ್ತದೆ ಎಂದು ಬರೆದ ಪತ್ರವೊಂದು ಸಲ್ಮಾನ್ ತಂದೆ ಬೆಳಿಗ್ಗೆ ವಾಕಿಂಗ್ ಹೋದಾಗ ಸಿಕ್ಕಿತ್ತು. ಕಳೆದ ಭಾನುವಾರ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದಲ್ಲಿ ಈ ಪತ್ರ ಪತ್ತೆಯಾಗಿತ್ತು. ಬೆಳಗಿನ ವಾಕ್ ಮುಗಿಸಿ ಸಲೀಂ ಕುಳಿತುಕೊಳ್ಳುವ ಜಾಗದಲ್ಲಿ ಸಲೀಂ ಖಾನ್ ಅವರ ಸಿಬ್ಬಂದಿಗೆ ಪತ್ರ ಸಿಕ್ಕಿದೆ. ಈ ಬೆದರಿಕೆ ಪತ್ರದಲ್ಲಿ - ಶೀಘ್ರದಲ್ಲೇ ಸಲ್ಮಾನ್ ಖಾನ್ ಹಾಗೂ ನಿಮ್ಮ ಸ್ಥಿತಿ ಸಿಧು ಮೂಸೆವಾಲಾ ಅವರಂತಾಗುತ್ತದೆ ಎಂದು ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಿಧು ಮುಸೇವಾಲಾ ಹತ್ಯೆಯ ನಂತರ ಸಲ್ಮಾನ್‌ಗೆ ಬೆದರಿಕೆ ಪತ್ರ ಬಂದಿದ್ದು ಇಡೀ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಎರಡು ಪ್ರಕರಣದಲ್ಲಿ ವಿಚಾರಣೆ
ಗಾಯಕ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಬಿರುಗಾಳಿ ಎದ್ದಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು 2021 ರಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದಾಗ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದರು. ಲಾರೆನ್ಸ್ ಬಿಷ್ಣೋಯ್ ವಿಚಾರಣೆಯ ವರದಿಯ ಪ್ರತಿಯಲ್ಲಿ ಅವರು ಸಲ್ಮಾನ್ ಖಾನ್‌ರನ್ನು ಕೊಲ್ಲಲು ರಾಜಸ್ಥಾನ ಮೂಲದ ಗ್ಯಾಂಗ್‌ಸ್ಟರ್ ಸಂಪತ್ ನೆಹ್ರಾರನ್ನು ಕೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅವರ ಆದೇಶವನ್ನು ಅನುಸರಿಸಿ, ನೆಹ್ರಾ ಮುಂಬೈಗೆ ಹೋದರು ಮತ್ತು ಬಾಂದ್ರಾದಲ್ಲಿರುವ ನಟನ ಮನೆಯ ಸುತ್ತಲೂ ಪರಿಶೀಲಿಸಿದ್ದರೆಂದು ತಿಳಿದು ಬಂದಿದೆ. ಈ ಸಂಚಿನ ಬೆನ್ನಲ್ಲೇ ಸದ್ಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್‌ರನ್ನು ಎರಡು ಪ್ರಕರಣದಲ್ಲಿ ವಿಚಾರಣೆ ಒಳಪಡಿಸಲಾಗಿದೆ.

ಮೂಸಾವಾಲಾ ಹತ್ಯೆಗೂ ಸಂಚು
ಬಿಷ್ಣೋಯ್ ಭಾಗಿ ಶಂಕೆ ಇದಕ್ಕೂ ಮುನ್ನ, ಮೂಸ್ ವಾಲಾ ಹತ್ಯೆಗೆ ಬಿಷ್ಣೋಯ್ ಸಂಚು ರೂಪಿಸಿರುವ ಶಂಕೆ ವ್ಯಕ್ತಪಡಿಸಿರುವ ಪಂಜಾಬ್ ಪೊಲೀಸರು ತಮ್ಮ ಕಸ್ಟಡಿಗೆ ಬಿಷ್ಣೋಯ್‌ವನ್ನು ನೀಡುವಂತೆ ಕೋರಿದ್ದರು. ಆದರೆ ಬಿಷ್ಣೋಯ್ ತಮ್ಮನ್ನು ಪಂಜಾಬ್ ಕಸ್ಟಡಿಗೆ ನೀಡದಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಬಿಷ್ಣೋಯ್ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.












Click it and Unblock the Notifications