ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮುಂಬೈನ ಹೋಟೆಲ್‌ಗೆ ಬಾಂಬ್ ಬೆದರಿಕೆ- 5 ಕೋಟಿ ಬೇಡಿಕೆ

|
Google Oneindia Kannada News

ಮುಂಬೈ , ಆಗಸ್ಟ್ 23: ಮುಂಬೈನ ಪ್ರಸಿದ್ಧ ಹೋಟೆಲ್‌ಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ಅಪರಿಚಿತ ಕರೆ ಮಾಡಿದವರು ಹೋಟೆಲ್‌ನ ನಾಲ್ಕು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಬೆದರಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‌ನ ಒಳಗೆ ನಾಲ್ಕು ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಕರೆ ಮಾಡಿದ ಆರೋಪಿಗಳು ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಲಲಿತ್ ಹೋಟೆಲ್‌ಗೆ ಕರೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭೀತಿ ಹುಟ್ಟಿಸಿದ ದೋಣಿ ಆಸ್ಟ್ರೇಲಿಯಾದದ್ದು: ದೇವೇಂದ್ರ ಫಡ್ನವೀಸ್ಭೀತಿ ಹುಟ್ಟಿಸಿದ ದೋಣಿ ಆಸ್ಟ್ರೇಲಿಯಾದದ್ದು: ದೇವೇಂದ್ರ ಫಡ್ನವೀಸ್

ಇಡಲಾಗಿರುವ ಬಾಂಬ್‌ಗಳನ್ನು ಸ್ಫೋಟಿಸದಂತೆ ಇರಲು 5 ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

Mumbais Hotel Receives Bomb Threat; Caller Demands Rs 5 Crore

ಬೆದರಿಕೆ ದೂರವಾಣಿ ಕರೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 336 ಮತ್ತು 507 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ ನಂತರ ಹೋಟೆಲ್‌ನಲ್ಲಿ ಯಾವುದೇ ಬಾಂಬ್‌ಗಳು ಕಂಡುಬಂದಿಲ್ಲ, ಕರೆ ಮಾಡಿದ ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಆಗಸ್ಟ್ 19 ರಂದು ಮುಂಬೈ ಪೊಲೀಸರಿಗೆ ನವೆಂಬರ್ 26, 2008 ರಂದು ಸಂಭವಿಸಿದ ರೀತಿಯ ಭಯೋತ್ಪಾದಕ ಕೃತ್ಯವನ್ನು ನಡೆಸುವುದಾಗಿ ಬೆದರಿಕೆಯ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಈ ಘಟನೆಯ ನಂತರ ಮಹಾರಾಷ್ಟ್ರದ ರಾಯ್‌ಗಢ್ ಜಿಲ್ಲೆಯಲ್ಲಿ ಎಕೆ-47 ರೈಫಲ್‌ಗಳನ್ನು ಹೊಂದಿರುವ ಬೋಟ್‌ಗಳು ತೇಲುತ್ತಿರುವುದನ್ನು ಪತ್ತೆಹಚ್ಚಲಾಯಿತು. ಹೀಗಾಗಿ ರಾಜ್ಯದಾದ್ಯಂತ ಭದ್ರತಾ ಎಚ್ಚರಿಕೆಯನ್ನು ವಹಿಸಲಾಗಿದೆ.

ಮುಂಬೈನಿಂದ 190 ಕಿಮೀ ದೂರದಲ್ಲಿರುವ ರಾಯಗಢದ ಹರಿಹರೇಶ್ವರ ಬೀಚ್ ಬಳಿ ಮೂರು ಎಕೆ 47 ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು. ಈ ದೋಣಿ ಆಸ್ಟ್ರೇಲಿಯದ ದಂಪತಿಗೆ ಸೇರಿದ್ದು, ಇಂಜಿನ್ ತೊಂದರೆಯಿಂದ ಅದನ್ನು ಬಿಟ್ಟು ಹೋಗಲಾಗಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರು. ಮೇಲ್ನೋಟಕ್ಕೆ ಯಾವುದೇ ಭಯೋತ್ಪಾದನೆಯ ಉದ್ದೇಶವಿಲ್ಲ. ಆದರೆ ಬೋಟ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಏಕೆ ಸಾಗಿಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ.

Recommended Video

ಕೋಚ್ ರಾಹುಲ್ ದ್ರಾವಿಡ್ ಗೆ ಕೊರೊನಾ ಸೋಂಕು: ಏಷ್ಯಾ ಕಪ್ ಗೂ ಮುನ್ನ ಭಾರತಕ್ಕೆ ಆಘಾತ | Oneindia Kannada

English summary
Maharashtra: Mumbai's Hotel receives bomb threat; caller demands Rs 5 crore to diffuse explosives says police. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X