ಪ್ರವಾದಿ ಕುರಿತ ಹೇಳಿಕೆ: ಮುಂಬೈ ರಸ್ತೆಗಳ ಮೇಲೆ ಫ್ರಾನ್ಸ್ ಅಧ್ಯಕ್ಷರ ಫೋಟೊ
ಮುಂಬೈ, ಅಕ್ಟೋಬರ್ 30: ಪ್ರವಾದಿ ಮಹಮ್ಮದ್ ಅವರ ಕಾರ್ಟೂನ್‌ಗಳನ್ನು ಪ್ರಕಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ ಎಂಬ ಹೇಳಿಕೆ ನೀಡಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಕ್ರಾನ್ ವಿರುದ್ಧ ಭಾರತದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಮುಂಬೈನಲ್ಲಿ ಮಕ್ರಾನ್ ಅವರ ಫೋಟೊಗಳನ್ನು ರಸ್ತೆಗಳ ಮೇಲೆ ಅಂಟಿಸಿ ಪ್ರತಿಭಟಿಸಲಾಗಿದೆ.
ಮುಂಬೈನ ನಾಗ್ಪಡಾ ಮತ್ತು ಭೆಂಡಿ ಬಜಾರ್ ಪ್ರದೇಶ ಸೇರಿದಂತೆ ಅನೇಕ ರಸ್ತೆಗಳಲ್ಲಿ ಫೋಟೊಗಳನ್ನು ಅಂಟಿಸಲಾಗಿದೆ. ರಸ್ತೆಗಳೆಲ್ಲೆಡೆ ಫೋಟೊಗಳು ಕಾಣಿಸುತ್ತಿದ್ದಂತೆಯೇ ಅವುಗಳನ್ನು ತೆರವುಗೊಳಿಸಲು ಮುಂಬೈ ಪೊಲೀಸರು ಹಲವು ತಂಡಗಳನ್ನು ನಿಯೋಜಿಸಿದರು. ರಸ್ತೆಗಳಲ್ಲಿನ ಫೋಟೊಗಳನ್ನು ಪೊಲೀಸರು ತೆಗೆದುಹಾಕಿದರು. ಮುಸ್ಲಿಂ ಸಂಘಟನೆ ರಾಜಾ ಅಕಾಡೆಮಿ ಈ ಪ್ರತಿಭಟನೆ ನಡೆಸಿದೆ ಎನ್ನಲಾಗಿದೆ.

'ಮಹಾರಾಷ್ಟ್ರ ಸರ್ಕಾರವೇ, ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ? ಇಂದು ಫ್ರಾನ್ಸ್ ಬೆಂಬಲಕ್ಕೆ ಭಾರತ ನಿಂತಿದೆ. ಜಿಹಾದ್ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ವಿರುದ್ಧದ ಫ್ರಾನ್ಸ್ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಪ್ರಧಾನಿ ಪ್ರತಿಜ್ಞೆ ಮಾಡಿದ್ದಾರೆ. ಹೀಗಿರುವಾಗ ಮುಂಬೈನ ಬೀದಿಗಳಲ್ಲಿ ಫ್ರೆಂಚ್ ಅಧ್ಯಕ್ಷರನ್ನು ಏಕೆ ಅವಮಾನಿಸುತ್ತೀರಿ?' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.
Some people had pasted picture of Emmanuel Macron on roads in Mumbai, have you ever seen these people pasting the pic of Imran Khan or Pervez Musharraf for martyrdom of our soldiers in J&K? pic.twitter.com/JZ8gkDNSOg
— Indian Army Aficionado (@EnemySlayer24_7) October 30, 2020
ಈ ನಡುವೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಕ್ರಾನ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ಭೋಪಾಲ್ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ನೇತೃತ್ವದಲ್ಲಿ ಐತಿಹಾಸಿಕ ಇಕ್ಬಾಲ್ ಮೈದಾನದಲ್ಲಿ ನೆರೆದ ಸಾವಿರಾರು ಮಂದಿ, ಎಮ್ಯಾನುಯೆಲ್ ಮಕ್ರಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. 'ಪ್ರವಾದಿ ಮಹಮ್ಮದ್ ನಮ್ಮ ಹೆಮ್ಮೆ', 'ಫ್ರಾನ್ಸ್ ಸ್ವಯಂ ನಾಶದತ್ತ ಸಾಗುತ್ತಿದೆ' ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದರು.
ಮಸೂದ್ ಮತ್ತು 200ಕ್ಕೂ ಹೆಚ್ಚು ಮಂದಿ ವಿರುದ್ಧ ಪೊಲೀಸರು, ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 188ರ ಅಡಿ ಪ್ರಕರಣ ದಾಖಲಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications