ಮುಂಬೈ ಕಟ್ಟಡ ಕುಸಿತ, ಆರು ಜನ ಬಲಿ
ಮುಂಬೈ, ಸೆ.27: ಇಲ್ಲಿನ ಡಾಕ್ ಯಾರ್ಡ್ ರಸ್ತೆಯಲ್ಲಿರುವ ಐದು ಅಂತಸ್ತಿನ ಕಟ್ಟಡವೊಂದು ಶುಕ್ರವಾರ ಬೆಳಗ್ಗಿನ ಜಾವ ನೆಲಕ್ಕುರುಳಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ ಆರು ಮಂದಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಮೃತಪಟ್ಟವರ ಶವಗಳನ್ನು ಹೊರಕ್ಕೆಳೆಯಲಾಗಿದೆ. ಸುಮಾರು 25 ಜನ ಇನ್ನೂ ಅವಶೇಷಗಳಡಿ ಇರುವ ಸಾಧ್ಯತೆಯಿದೆ. 15 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಶುಕ್ರವಾರ ಬೆಳಗ್ಗೆ 6.25ರ ವೇಳೆಗೆ ಇಲ್ಲಿನ ಡಾಕ್ ಯಾರ್ಡ್ ರೋಡ್ ನಲ್ಲಿ ಈ ಘಟನೆ ನಡೆದಿದೆ. ಸುಮಾರು 40 ಮಂದಿ ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
10ಕ್ಕೂ ಅಧಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಜೆಸಿಬಿಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
ಗಾಯಗೊಂಡಿರುವ 20 ಮಂದಿಯನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಟ್ಟಡವು ಬಿಎಂಸಿಗೆ ಒಳಪಟ್ಟಿದ್ದು, ಸುಮಾರು 50 ವರ್ಷ ಹಳೆಯದ್ದಾಗಿದೆ ಎಂದು ತಿಳಿದುಬಂದಿದೆ.
ಮುಂಬೈನಲ್ಲಿ ಹಳೆ ಕಟ್ಟಡಗಳ ಕುಸಿತದ ಬಗ್ಗೆ ಬಿಎಂಸಿ ಎಚ್ಚರಿಕೆ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಥಾಣೆಯಲ್ಲಿ ಇದೇ ರೀತಿ ದುರಂತ ಸಂಭವಿಸಿದ್ದು 18 ಮಕ್ಕಳು ಸೇರಿದಂತೆ 74 ಮಂದಿ ಸಾವನ್ನಪ್ಪಿದ್ದರು.

ಕಟ್ಟಡದ ಅವಶೇಷಗಳು
ಮುಂಬೈನಲ್ಲಿ ಕುಸಿದ ಐದು ಅಂತಸ್ತಿನ ಕಟ್ಟಡದ ಅವಶೇಷಗಳು

ಸಂತ್ರಸ್ತರು
ಮುಂಬೈನಲ್ಲಿ ಕುಸಿದ ಐದು ಅಂತಸ್ತಿನ ಕಟ್ಟಡದಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

Click it and Unblock the Notifications