• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ-ಫಡ್ನವಿಸ್ ತೆಗೆದುಕೊಂಡ ಪಂಚ ನಿರ್ಣಯಗಳು

|

ಮುಂಬೈ, ಸೆಪ್ಟೆಂಬರ್ 4: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದು, ಸಂದರ್ಭದಲ್ಲಿ ಪಂಚ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.

ಮಹಾದಾಯಿ ವಿವಾದ , ಕೃಷ್ಣಾ ನ್ಯಾಯಾಧೀಕರಣ ಅಧಿಸೂಚನೆ ಗೆಜೆಟ್‌ನಲ್ಲಿ ಹೊರಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಸೇರಿ ಹಲವು ನಿರ್ಣಯ ತೆಗೆದುಕೊಂಡಿದ್ದಾರೆ.

ಮುಂಬೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.ಈ ಸಂಬಂಧ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಜಂಟಿಯಾಗಿ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಭಾರಿ ಕುತೂಹಲ ಮೂಡಿಸಿದ ಯಡಿಯೂರಪ್ಪ ದೇವೇಂದ್ರ ಫಡ್ನವಿಸ್ ಭೇಟಿ

   DK Shivakumar :ಬಿಜೆಪಿಗೆ ಶಾಕ್ ನೀಡಿ ಯಡಿಯೂರಪ್ಪ ಹೇಳಿಕೆ..? | Oneindia Kannada

   ಮಹಾದಾಯಿ ನದಿ ನೀರು ಹಂಚಿಕೆ ಮಾಡಿರುವ ಆದೇಶವನ್ನು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಬೇಕಿದೆ. ಈ ಸಂಬಂಧ ಕರ್ನಾಟಕ , ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಒತ್ತಾಯಿಸಲು ತೀರ್ಮಾನಿಸಲಾಯಿತು.

   ಕೃಷ್ಣ ನ್ಯಾಯಾಧೀಕರಣದ ನೀರು ಹಂಚಿಕೆ ಕುರಿತು ಚರ್ಚೆ

   ಕೃಷ್ಣ ನ್ಯಾಯಾಧೀಕರಣದ ನೀರು ಹಂಚಿಕೆ ಕುರಿತು ಚರ್ಚೆ

   ಕೃಷ್ಣ ನ್ಯಾಯಾಧೀಕರಣದ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿ ನೀರು ಹಂಚಿಕೆ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಸಮ್ಮತಿಸಲಾಗಿದೆ.

    ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳ ಸಭೆ ಶೀಘ್ರ

   ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳ ಸಭೆ ಶೀಘ್ರ

   ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸರ್ಕಾರದ ಮುಖ್ಯಮಂತ್ರಿಗಳು ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಒತ್ತಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

   ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ

   ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ

   ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯಲು ಮುಂಗಾರು ಪ್ರಾರಂಭವಾದ ಕೂಡಲೇ ಕೊಯ್ನಾ ಅಣೆಕಟ್ಟಿನಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಲು ನಿರ್ಧರಿಸಲಾಗಿದೆ.

   ಪ್ರವಾಹಕ್ಕೆ ಪೀಡಿತ ಪ್ರದೇಶಗಳಿಗೆ ಅನುದಾನಕ್ಕೆ ಒತ್ತಾಯ

   ಪ್ರವಾಹಕ್ಕೆ ಪೀಡಿತ ಪ್ರದೇಶಗಳಿಗೆ ಅನುದಾನಕ್ಕೆ ಒತ್ತಾಯ

   ಆಗಸ್ಟ್‌ನಲ್ಲಿ ಸಂಭವಿಸಿರುವ ಭಾರಿ ಪ್ರವಾಹದಿಂದ ಉಂಟಾದ ನಷ್ಟ ಹಾಗೂ ಪರಿಹಾರ ಕಾರ್ಯಗಳಿಗೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಜಂಟಿಯಾಗಿ ಒತ್ತಾಯಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.

   English summary
   Chief Minister BS Yediyurappa met with Maharashtra Chief Minister Devendra Fadnavis on Tuesday and took a five-pronged decision.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X