ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಪ್ರಕರಣ ದಾಖಲಿಸಿದ ಧಾರಾವಿ

|
Google Oneindia Kannada News

ಮುಂಬೈ, ಡಿಸೆಂಬರ್ 25: ಮುಂಬೈನ ಧಾರಾವಿಯಲ್ಲಿ ಏಪ್ರಿಲ್ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಪ್ರಕರಣ ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾವೈರಸ್ ಸೋಂಕು ವರದಿಯಾಗಿಲ್ಲ ಎಂದು ನಾಗರಿಕ ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ತಿಳಿಸಿದ್ದಾರೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳು 2,81,919ಕ್ಕೆ ಇಳಿಕೆಭಾರತದಲ್ಲಿ ಸಕ್ರಿಯ ಪ್ರಕರಣಗಳು 2,81,919ಕ್ಕೆ ಇಳಿಕೆ

ಧಾರಾವಿ ಪ್ರದೇಶದಲ್ಲಿ ಇದುವರೆಗೆ 3,788 ಕೊರೊನಾ ಪ್ರಕರಣಗಳು ವರದಿಯಾಗಿದ್ದು ಸಧ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 12, ಇವುಗಳಲ್ಲಿ ಎಂಟು ಮಂದಿ ಹೋಂ ಐಸೋಲೇಷನ್ ನಲ್ಲಿದ್ದರೆ ನಾಲ್ವರು ಕೋವಿಡ್ ಆರೈಕೆ ಕೇಂದ್ರದಲ್ಲಿದ್ದಾರೆ ಎಂದು ನಾಗರಿಕ ಅಧಿಕಾರಿ ತಿಳಿಸಿದ್ದಾರೆ.

First Time Since April, Dharavi Reports No New Covid-19 Case

ಧಾರಾವಿಯಲ್ಲಿ ಈವರೆಗೆ 3,464 ಜನರು ಚೇತರಿಸಿಕೊಂಡಿದ್ದಾರೆ, ಅಲ್ಲಿ 6.5 ಲಕ್ಷ ಜನರು 2.5 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಕೊಳೆಗೇರಿಯಲ್ಲಿ ನೆಲೆಸಿದ್ದಾರೆ. ಜಾಗತಿಕ ಜನದಟ್ಟಣೆಯ ನಗರ ವಸಾಹತುಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಮೊದಲ ಕೊರೊನಾ ರೋಗಿಯನ್ನು ಪತ್ತೆ ಮಾಡಿದ ಏಪ್ರಿಲ್ 1 ರ ನಂತರ ಇದೇ ಮೊದಲ ಬಾರಿಗೆ, ಯಾವ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಭಾರತದಲ್ಲಿ ಇಂದು 23,068 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರಿಂದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,01,46,846ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 336 ಕೊರೊನಾ ವೈರಸ್ ಸೋಂಕಿತರು ಮೃತಪಟ್ಟಿದ್ದಾರೆ.

ಸತತ 12ನೇ ದಿನ ಭಾರತದಲ್ಲಿ 30 ಸಾವಿರಕ್ಕಿಂತ ಕಡಿಮೆ ಸೋಂಕಿತರ ಪ್ರಕರಣಗಳು ದಾಖಲಾಗಿದೆ. ಹಾಗೆಯೇ ಗುರುವಾರದಂದು 24,661 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೂ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 97,17,834ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,81,919ಕ್ಕೆ ಇಳಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 1,47,097ಕ್ಕೆ ಏರಿಕೆಯಾಗಿದೆ.

English summary
The slum-dominated Dharavi area of Mumbai did not report a single coronavirus infection in the last 24 hours, a civic official said on Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X