ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ರೋಗಿ ಸಾವು

|
Google Oneindia Kannada News

ಮುಂಬೈ, ಮೇ 1: ಕೊರೊನಾ ವೈರಸ್‌ ಅಂತಿಮ ಹಂತಕ್ಕೆ ತೆರಳಿದವರಿಗೆ ನೀಡುವ ಪ್ಲಾಸ್ಮಾ ಥೆರಪಿಗೆ ಮಹಾರಾಷ್ಟ್ರದಲ್ಲಿ ರೋಗಿಯೊಬ್ಬ ಮೃತಪಟ್ಟಿದ್ದಾರೆ.

ಇದರಿಂದಾಗಿ ಈ ಚಿಕಿತ್ಸೆಗೆ ಮೊದಲ ಸಾವು ಉಂಟಾಗಿದೆ. ಲೀಲಾವತಿ ಆಸ್ಪತ್ರೆಯಲ್ಲಿ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು.

ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?

ಆರಂಭದಲ್ಲಿ ಚೇತರಿಸಿಕೊಂಡರೂ ನಂತರದ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡತೊಡಗಿತ್ತು.ಕೊರೊನಾ ಸೋಂಕಿತರ ಜೀವ ಉಳಿಸಲು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ತುದಿಗಾಲಿನಲ್ಲಿ ನಿಂತಿರುವಾಗಲೇ ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

First Covid-19 Patient To Receive Plasma Therapy Dies In Maharashtra

ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವು ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡದ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.

ಕೊರೊನಾಗೆ ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಪಡೆದು ದೆಹಲಿಯ ರೋಗಿಯೊಬ್ಬರು ಗುಣಮುಖರಾದ ಬೆನ್ನಲ್ಲೇ , ಮೊದಲ ಸಾವಿನ ಪ್ರಕರಣದ ಸುದ್ದಿಯೂ ಕೇಳಿಬಂದಿದೆ.

ಏಪ್ರಿಲ್ 20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಂಡರೂ ಬಳಿಕ ಉಸಿರಾಟದ ತೊಂದರೆ ಎದುರಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮೃತ ರೋಗಿಗೆ ಕೊರೊನಾದಿಂದ ಗುಣಮುಖರಾದ ವ್ಯಕ್ತಿಯ 200 ಎಂಎಲ್‌ ಪ್ಲಾಸ್ಮಾವನ್ನು ಏ.25ರಂದು ನೀಡಲಾಗಿತ್ತು.

English summary
The first Covid-19 patient who underwent convalescent plasma therapy in Maharashtra succumbed to the infection on Wednesday night at Lilavati Hospital. The 53-year-old male patient was in critical condition and had been under ventilation in the intensive care unit (ICU).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X