ಮುಂಬೈ: ಬಾಲಿವುಡ್ ದಂತಕತೆ ರಾಜ್ ಕಪೂರ್ ಸ್ಟುಡಿಯೋಸ್ ನಲ್ಲಿ ಬೆಂಕಿ ಅವಘಡ

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 16: ಇಲ್ಲಿನ ಚೆಂಬೂರ್ ಪ್ರಾಂತ್ಯದಲ್ಲಿರುವ ರಾಜ್ ಕಪೂರ್ ಸ್ಟುಡಿಯೋದಲ್ಲಿ ಭಾರೀ ಪ್ರಮಾಣದ ಶನಿವಾರ ಬೆಂಕಿ ಅವಘಡ ಸಂಭವಿಸಿದೆ.

ಮಧ್ಯಾಹ್ನ ಸುಮಾರು 2:20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣವೇ ಚೆಂಬೂರು ಪ್ರಾಂತ್ಯದಲ್ಲಿರುವ ಅಗ್ನಿಶಾಮಕ ದಳವು ಆರು ಫೈರ್ ಇಂಜಿನ್ ಗಳನ್ನು ಸ್ಥಳಕ್ಕೆ ರವಾನಿಸಿತ್ತು.

Fire at Mumbai's RK studio, six fire tenders deployed

ಇತ್ತೀಚೆಗೆ, ಖ್ಯಾತ ಟಿವಿ ರಿಯಾಲಿಟಿ ಶೋ ಆದ 'ಸೂಪರ್ ಡ್ಯಾನ್ಸರ್'ನ ಚಿತ್ರೀಕರಣ ಇದೇ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಶನಿವಾರ ಸೂಪರ್ ಡ್ಯಾನ್ಸರ್ ಚಿತ್ರೀಕರಣಕ್ಕೆ ಬಿಡುವು ನೀಡಿದ್ದರಿಂದಾಗಿ, ಸ್ಟುಡಿಯೋದಲ್ಲಿ ಯಾವ ಕಲಾವಿದರು, ತಂತ್ರಜ್ಞರಾಗಲೀ ಇರಲಿಲ್ಲ. ಹಾಗಾಗಿ, ಯಾವುದೇ ಸಾವು-ನೋವು ಸಂಭವಿಸಿಲ್ಲ.

ಸಂಜೆ 4:30ರ ಹೊತ್ತಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದರೆಂದು ಮೂಲಗಳು ತಿಳಿಸಿವೆ.

Fire at Mumbai's RK studio, six fire tenders deployed

ಆರ್.ಕೆ. ಸ್ಟುಡಿಯೋ ಹಿನ್ನೆಲೆ:
ಹಿಂದಿ ಚಿತ್ರರಂಗದ ಕನಸುಗಾರನೆಂದೇ ಖ್ಯಾತರಾಗಿದ್ದ ರಾಜ್ ಕಪೂರ್ ಅವರು, 1945ರಲ್ಲಿ ಮುಂಬೈನ ಚೆಂಬೂರು ಪ್ರಾಂತ್ಯದಲ್ಲಿ ಈ ಸ್ಟುಡಿಯೋವನ್ನು ನಿರ್ಮಿಸಿದರು. 1988ರ ಜೂನ್ ನಲ್ಲಿ ಅವರ ನಿಧನಾ ನಂತರ, ಈ ಸ್ಟುಡಿಯೋಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಹೀಗೆ, ಸುಮಾರು 72 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಸ್ಟುಡಿಯೋದ ಮೂಲಕ, ಆರ್.ಕೆ. ಫಿಲಂಸ್ ಎಂಬ ತಮ್ಮ ಸ್ವಂತ ಬ್ಯಾನರ್ ನಲ್ಲಿ ರಾಜ್ ಕಪೂರ್ ಅವರು, ಜನಪ್ರಿಯ ಚಿತ್ರಗಳಾದ ಆಗ್, ಬರ್ಸಾತ್ ಸೇರಿದಂತೆ ಮುಂತಾದ ಚಿತ್ರಗಳನ್ನು ತಯಾರಿಸಿದ್ದರು.

Fire at Mumbai's RK studio, six fire tenders deployed

ಅವರ ನಿಧನಾ ನಂತರ, ಅವರ ಮಕ್ಕಳಾದ ರಿಷಿ ಕಪೂರ್, ರಾಜೀವ್ ಕಪೂರ್, ರೀತು ಕಪೂರ್ ಹಾಗೂ ರಣಧೀರ್ ಕಪೂರ್ ಸ್ಟುಡಿಯೋ ಹಾಗೂ ಆರ್.ಕೆ. ಫಿಲಂಸ್ ಬ್ಯಾನರ್ ಅನ್ನು ಮುನ್ನಡೆಸಿದರು. 1999ರಲ್ಲಿ ನಿರ್ಮಾಣವಾದ ಆ ಅಬ್ ಲೌಟ್ ಚಲೇ ಚಿತ್ರ ಆರ್.ಕೆ. ಸ್ಟುಡಿಯೋದಿಂದ ಹೊರಬಂದ ಕೊನೆಯ ಚಿತ್ರ. ಆ ಚಿತ್ರದ ನಂತರ, ಆರ್.ಕೆ. ಫಿಲಂಸ್ ಸಂಸ್ಥೆಯಿಂದ ಚಿತ್ರ ನಿರ್ಮಾಣ ನಿಂತು ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ, ಆರ್.ಕೆ. ಸ್ಟುಡಿಯೋವನ್ನು ಟಿವಿ ಷೋಗಳಿಗೆ, ಇತರ ಚಿತ್ರಗಳ ಷೂಟಿಂಗ್ ಗಳಿಗೆ ಬಾಡಿಗೆ ನೀಡಲಾಗುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A major fire broke at the iconic RK Studio in Mumbai. Six fire tenders and six water tankers have been rushed to the spot to douse the fire. The fire control received the call at around 2.30 pm on September 16, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ